Kannada News Photo gallery Lakkundi Utsava: The beautiful flower show unveiled at the Lakkundi Utsava: Here are the photos
Lakkundi Utsava: ಲಕ್ಕುಂಡಿ ಉತ್ಸವದಲ್ಲಿ ಅನಾವರಣಗೊಂಡ ಸುಂದರ ಫಲಪುಷ್ಪ ಲೋಕ: ಇಲ್ಲಿವೆ ಫೋಟೋಸ್
ಲಕ್ಕುಂಡಿ ಉತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಏರ್ಪಡಿಸಿದೆ. ತನ್ನ ಅಂದದ ಸೋಬಗಿನಿಂದಾಗಿ ಈಗ ಜನರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಆ ಕುರಿತಾದ ಒಂದು ಝಲಕ್ ಇಲ್ಲಿದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೂರು ದಿನಗಳ ಲಕ್ಕುಂಡಿ ಉತ್ಸವದ
ಅಂಗವಾಗಿ ತೋಟಗಾರಿಕೆ ಇಲಾಖೆ ಫಲ ಪುಷ್ಪ ಪ್ರದರ್ಶನ ಏರ್ಪಡಿಸಿದೆ.
ತನ್ನ ಅಂದದ ಸೋಬಗಿನಿಂದಾಗಿ ಈಗ ಜನರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಆ ಕುರಿತಾದ ಒಂದು ಝಲಕ್ ಇಲ್ಲಿದೆ.
1 / 6
ಲಕ್ಕುಂಡಿ ಉತ್ಸವ ರಂಗೇರಿದೆ. ಅದರೊಂದಿಗೆ ಫಲ ಪುಷ್ಪ ಪ್ರದರ್ಶನವೀಗ ಜನರ ಸಂತಸ ಇಮ್ಮಡಿಗೊಳಿಸಿವೆ. ಇನ್ನು ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿರೋ ಫುಷ್ಪಗಳ ಲೋಕದಲ್ಲಿ ನವ ಉಲ್ಲಾಸದಿಂದ ಹೂಗಳು ಅರಳಿ ನಿಂತಿವೆ.
2 / 6
ಇನ್ನು ಉತ್ಸವದಲ್ಲಿ ವಿವಿಧ ಸಿರಿಧಾನ್ಯಗಳಿಂದ ಹೂ ಅರಳಿದ್ದು ಹೀಗೆ.
3 / 6
ಪುಷ್ಪಗಳೊಟ್ಟಿಗೆ ಕಲಾವಿದನ ಕೈಚಳಕದಲ್ಲಿ ತರಕಾರಿ ಕೆತ್ತನೆಯಲ್ಲಿ ಮೂಡಿ
ಬಂದಿರುವ ನಾನಾ ಆಕೃತಿಗಳು ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತಿವೆ.
ಕುಂಬಳಕಾಯಿ, ಕಲ್ಲಂಗಡಿಯಲ್ಲಿ ನಾನಾ ಆಕೃತಿ ಮೂಡಿಬಂದಿವೆ.
4 / 6
ರಂಗೋಲಿಯಲ್ಲಿ ಅರಳಿ ನಾಡಿನ ನಡೆದಾಡುವ ದೇವರುಗಳಾದ ಸಿದ್ದೇಶ್ವರ ಶ್ರೀಗಳು, ಸಿದ್ದಗಂಗಾ ಶ್ರೀಗಳು ಸೇರಿ ಹಲವು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು.
5 / 6
ಲಕ್ಕುಂಡಿ ಉತ್ಸವದ ಜೊತೆಗೆ ಫಲ ಪುಷ್ಪ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.