ಆದರೆ ಇದರ ನಡುವೆ ಕೆಎಲ್ ರಾಹುಲ್ ಅವರಿಗೆ ಇನ್ನೊಂದು ಅವಕಾಶ ನೀಡಬೇಕೆಂಬ ಅಭಿಪ್ರಾಯವನ್ನು ಟೀಮ್ ಇಂಡಿಯಾ ಲೆಜೆಂಡ್ ಸುನೀಲ್ ಗವಾಸ್ಕರ್ ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಗವಾಸ್ಕರ್, ದೆಹಲಿ ಟೆಸ್ಟ್ನಲ್ಲಿ ರಾಹುಲ್ಗೆ ಮತ್ತೊಂದು ಅವಕಾಶ ನೀಡಬೇಕು. ಕೇವಲ 1 ಇನಿಂಗ್ಸ್ ಮೂಲಕ ಆತನ ಸಾಮರ್ಥ್ಯವನ್ನು ಅಳೆಯಬಾರದು ಎಂದು ತಿಳಿಸಿದ್ದಾರೆ.