SA20 Final: ಎಸ್ಎ20 ಲೀಗ್ನಲ್ಲಿ ಸನ್‌ರೈಸರ್ಸ್ ತಂಡ ಚಾಂಪಿಯನ್ಸ್
Pretoria Capitals vs Sunrisers Eastern Cape: ಸುಲಭ ಗುರಿ ಪಡೆದ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಆರಂಭಿಕ ಆಟಗಾರ ಆಡಮ್ ರೋಸಿಂಗ್ಟನ್ ಸ್ಪೋಟಕ ಆರಂಭ ಒದಗಿಸಿದ್ದರು.
Updated on: Feb 12, 2023 | 10:32 PM

SA20 Final: ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ದಿ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಫೈಟ್ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಬೌಲಿಂಗ್ ಆಯ್ಕೆ ಮಾಡಿತ್ತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಬೌಲರ್ಗಳು ಯಶಸ್ವಿಯಾಗಿದ್ದರು. ಅತ್ಯುತ್ತಮ ದಾಳಿ ಸಂಘಟಿಸಿದ ವ್ಯಾನ್ ಡೆರ್ ಮೆರ್ವೆ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದರು.

ಇತ್ತ ಕ್ರೀಸ್ ಕಚ್ಚಿ ನಿಲ್ಲಲು ಪ್ರಿಟೋರಿಯಾ ಕ್ಯಾಪಿಟಲ್ಸ್ ಬ್ಯಾಟ್ಸ್ಮನ್ಗಳು ಪರದಾಡಿದರು. ಪರಿಣಾಮ 19.3 ಓವರ್ಗಳಲ್ಲಿ ಕ್ಯಾಪಿಟಲ್ಸ್ ತಂಡವು 135 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಕುಸಾಲ್ ಮೆಂಡಿಸ್ 21 ರನ್ಗಳಿಸಿದ್ದು ಗರಿಷ್ಠ ಸ್ಕೋರ್.

136 ರನ್ಗಳ ಸುಲಭ ಗುರಿ ಪಡೆದ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡಕ್ಕೆ ಆರಂಭಿಕ ಆಟಗಾರ ಆಡಮ್ ರೋಸಿಂಗ್ಟನ್ ಸ್ಪೋಟಕ ಆರಂಭ ಒದಗಿಸಿದ್ದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರೋಸಿಂಗ್ಟನ್ 30 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್ನೊಂದಿಗೆ 57 ರನ್ ಚಚ್ಚಿದರು.

ಆ ಬಳಿಕ ಬಂದ ಜೋರ್ಡನ್ ಹರ್ಮನ್ 22 ರನ್ಗಳ ಕಾಣಿಕೆ ನೀಡಿದರೆ, ನಾಯಕ ಐಡೆನ್ ಮಾರ್ಕ್ರಾಮ್ 26 ರನ್ ಕಲೆಹಾಕಿದರು. ಅದರಂತೆ 16.2 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ಗಳ ಗುರಿ ಮುಟ್ಟುವ ಮೂಲಕ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡವು 4 ವಿಕೆಟ್ಗಳ ಗೆಲುವು ದಾಖಲಿಸಿತು. ಈ ಮೂಲಕ ಚೊಚ್ಚಲ ಸೌತ್ ಆಫ್ರಿಕಾ ಟಿ20 ಲೀಗ್ನ ಚಾಂಪಿಯನ್ ಪಟ್ಟವನ್ನು ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಅಲಂಕರಿಸಿದೆ.

ಪ್ರಿಟೋರಿಯಾ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್) , ಕುಸಲ್ ಮೆಂಡಿಸ್ , ಥೀನಿಸ್ ಡಿ ಬ್ರುಯ್ನ್ , ರಿಲೀ ರೊಸ್ಸೌ , ಕಾಲಿನ್ ಇಂಗ್ರಾಮ್ , ಜೇಮ್ಸ್ ನೀಶಮ್ , ವೇಯ್ನ್ ಪಾರ್ನೆಲ್ (ನಾಯಕ) ಈಥನ್ ಬಾಷ್ , ಮಿಗೇಲ್ ಪ್ರಿಟೋರಿಯಸ್ , ಆದಿಲ್ ರಶೀದ್ , ಅನ್ರಿಕ್ ನೋಕಿಯಾ.

ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಪ್ಲೇಯಿಂಗ್ ಇಲೆವೆನ್: ಆಡಮ್ ರೋಸಿಂಗ್ಟನ್ (ವಿಕೆಟ್ ಕೀಪರ್) , ಟೆಂಬಾ ಬವುಮಾ , ಜೋರ್ಡಾನ್ ಹರ್ಮನ್ , ಐಡೆನ್ ಮಾರ್ಕ್ರಾಮ್ (ನಾಯಕ) ಟ್ರಿಸ್ಟಾನ್ ಸ್ಟಬ್ಸ್ , ಜೋರ್ಡಾನ್ ಕಾಕ್ಸ್ , ಮಾರ್ಕೊ ಯಾನ್ಸೆನ್ , ಬ್ರೈಡನ್ ಕಾರ್ಸೆ , ಒಟ್ನಿಯೆಲ್ ಬಾರ್ಟ್‌ಮ್ಯಾನ್ , ರೋಲೋಫ್ ವ್ಯಾನ್ ಡೆರ್ ಮೆರ್ವೆ , ಸಿಸಂದಾ ಮಗಳಾ.
