Kichcha Sudeep: ‘ಮೈ ಆಟೋಗ್ರಾಫ್’ ಚಿತ್ರಕ್ಕೆ 17 ವರ್ಷ: ಎವರ್ಗ್ರೀನ್ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ವಿಶೇಷ ಮಾತು
My Autograph Movie: ‘ಮೈ ಆಟೋಗ್ರಾಫ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಕಿಚ್ಚ ಸುದೀಪ್ ಮೊದಲ ಬಾರಿಗೆ ನಿರ್ದೇಶಕನಾದರು. ಚೊಚ್ಚಲ ಪ್ರಯತ್ನದಲ್ಲೇ ಅವರಿಗೆ ಯಶಸ್ಸು ಸಿಕ್ಕಿತು.
ನಟ ಕಿಚ್ಚ ಸುದೀಪ್ (Kichcha Sudeep) ಅವರು ಈವರೆಗೂ ಅನೇಕ ಸಿನಿಮಾಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಆ ಪೈಕಿ ಕೆಲವು ಸಿನಿಮಾಗಳು ಅಭಿಮಾನಿಗಳ ಪಾಲಿಗೆ ಸಖತ್ ಸ್ಪೆಷಲ್. ‘ಮೈ ಆಟೋಗ್ರಾಫ್’ (My Autograph Movie) ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ವಿಶೇಷ ಪ್ರೀತಿ. ಈ ಸಿನಿಮಾ ತೆರೆಕಂಡು ಇಂದಿಗೆ (ಫೆ.17) ಬರೋಬ್ಬರಿ 17 ವರ್ಷ ಕಳೆದಿದೆ. ಈ ಖುಷಿಯಲ್ಲಿ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ಈ ಎವರ್ಗ್ರೀನ್ ಚಿತ್ರದ ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ. ತಮ್ಮ ಜೊತೆ ಬೆಂಬಲವಾಗಿ ನಿಂತು ಕೆಲಸ ಮಾಡಿದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ. ಈ ಟ್ವೀಟ್ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ಇದು ಎಂಬುದು ವಿಶೇಷ.
2006ರಲ್ಲಿ ತೆರೆಕಂಡಿದ್ದ ‘ಮೈ ಆಟೋಗ್ರಾಫ್’:
ಕಿಚ್ಚ ಸುದೀಪ್, ಮೀನಾ, ಶ್ರೀದೇವಿಕಾ, ದೀಪಾ ಭಾಸ್ಕರ್ ಮುಂತಾದವರು ನಟಿಸಿದ ‘ಮೈ ಆಟೋಗ್ರಾಫ್’ ಸಿನಿಮಾ 2006ರಲ್ಲಿ ತೆರೆಕಂಡು ಸೂಪರ್ ಹಿಟ್ ಆಯಿತು. ಇದು ತಮಿಳಿನ ‘ಆಟೋಗ್ರಾಫ್’ ಚಿತ್ರದ ರಿಮೇಕ್ ಆಗಿದ್ದರೂ ಕೂಡ ಕನ್ನಡದ ನೇಟಿವಿಟಿಗೆ ತಕ್ಕಂತೆ ಮೂಡಿಬಂತು. ಅದು ಕನ್ನಡಿಗರಿಗೆ ಹೆಚ್ಚು ಇಷ್ಟವಾಯಿತು.
ಕಿಚ್ಚ ಸುದೀಪ್ ಚೊಚ್ಚಲ ನಿರ್ದೇಶನ:
ನಟ ಸುದೀಪ್ ಅವರಿಗೆ ಚಿತ್ರರಂಗದಲ್ಲಿ ಇರುವ ಅನುಭವ ಅಪಾರ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಹೆಸರು ಗಳಿಸಿದ್ದಾರೆ. ‘ಮೈ ಆಟೋಗ್ರಾಫ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಅವರು ಮೊದಲ ಬಾರಿಗೆ ನಿರ್ದೇಶಕನಾದರು. ಚೊಚ್ಚಲ ಪ್ರಯತ್ನದಲ್ಲೇ ಅವರಿಗೆ ಯಶಸ್ಸು ಸಿಕ್ಕಿತು. ಅಲ್ಲದೇ ಆ ಸಿನಿಮಾದ ಗೆಲುವಿನಿಂದ ಅವರ ವೃತ್ತಿಬದುಕಿನ ಚಾರ್ಮ್ ಹೆಚ್ಚಿತು.
ಹಾಡುಗಳಿಂದ ಗಮನ ಸೆಳೆದ ‘ಮೈ ಆಟೋಗ್ರಾಫ್’:
ಭಾರದ್ವಜ್ ಸಂಗೀತ ನಿರ್ದೇಶನದಲ್ಲಿ ಬಂದ ‘ಮೈ ಆಟೋಗ್ರಾಫ್’ ಸಿನಿಮಾದ ಎಲ್ಲ ಹಾಡುಗಳು ಸೂಪರ್ ಹಿಟ್ ಆದವು. ‘ಅರಳುವ ಹೂವುಗಳೇ ಆಲಿಸಿರಿ..’, ‘ಸವಿ ಸವಿ ನೆನಪು..’ ಹಾಡುಗಳು ಇಂದಿಗೂ ಕೇಳುಗರ ಫೇವರಿಟ್ ಆಗಿ ಉಳಿದುಕೊಂಡಿವೆ. ಚಿತ್ರದ ಗೆಲುವಿನಲ್ಲಿ ಈ ಗೀತೆಗಳ ಕೊಡುಗೆ ಕೂಡ ದೊಡ್ಡದಿದೆ.
17 years of me trying out my hands as a director. It’s always been a great feeling to be on a maker’s chair. I thank every actor,technician,production team,support staff, and everyone on set who stood by me. ❤️❤️?????? pic.twitter.com/zJUH1nVYzj
— Kichcha Sudeepa (@KicchaSudeep) February 17, 2023
‘ಮೈ ಆಟೋಗ್ರಾಫ್’ ಬಗ್ಗೆ ಸುದೀಪ್ ಟ್ವೀಟ್:
‘ನಾನು ನಿರ್ದೇಶನಕ್ಕೆ ಹೈಹಾಕಿ 17 ವರ್ಷ ಆಯಿತು. ನಿರ್ದೇಶಕರ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅನುಭವ ಯಾವಾಗಲೂ ವಿಶೇಷವಾದದ್ದು. ಈ ಸಿನಿಮಾದ ಸೆಟ್ನಲ್ಲಿ ನನಗೆ ಬೆಂಬಲ ನೀಡಿದ ನಟರು, ತಂತ್ರಜ್ಞರು, ಪ್ರೊಡಕ್ಷನ್ ಟೀಮ್ ಮತ್ತು ಎಲ್ಲ ಸಿಬ್ಬಂದಿಗೆ ಧನ್ಯವಾದಗಳು’ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:07 pm, Fri, 17 February 23