Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಟಲಿಯಲ್ಲಿ ಅಪಘಾತಕ್ಕೀಡಾದ ನಟಿ ಗಾಯತ್ರಿ ಹಾಗೂ ಆಕೆಯ ಕೋಟ್ಯಧಿಪತಿ ಗಂಡ ವಿಕಾಸ್ ಯಾರು?

Gayatri Joshi-Vivek Oberoi: ನಟಿ ಗಾಯತ್ರಿ ಹಾಗೂ ಅವರ ಪತಿ ವಿಕಾಸ್ ಇಟಲಿಯ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸುದ್ದಿ ವೈರಲ್ ಆಗಿದೆ. ಅಂದಹಾಗೆ ಯಾರು ಈ ಗಾಯತ್ರಿ ಹಾಗೂ ಅವರ ಶ್ರೀಮಂತ ಪತಿ ವಿಕಾಸ್ ಒಬೆರಾಯ್?

ಇಟಲಿಯಲ್ಲಿ ಅಪಘಾತಕ್ಕೀಡಾದ ನಟಿ ಗಾಯತ್ರಿ ಹಾಗೂ ಆಕೆಯ ಕೋಟ್ಯಧಿಪತಿ ಗಂಡ ವಿಕಾಸ್ ಯಾರು?
ವಿಕಾಸ್-ಗಾಯತ್ರಿ
Follow us
ಮಂಜುನಾಥ ಸಿ.
|

Updated on: Oct 04, 2023 | 7:20 PM

ಇಟಲಿಯಲ್ಲಿ ಬಾಲಿವುಡ್ (Bollywood) ನಟಿ ಗಾಯತ್ರಿ ಜೋಷಿ ಹಾಗೂ ಅವರ ಪತಿ ವಿಕಾಸ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಸುದ್ದಿ ಹಾಗೂ ವಿಡಿಯೋಗಳು ಇಂದು (ಅಕ್ಟೋಬರ್ 04) ಸಾಮಾಜಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಅಸಲಿಗೆ ಈ ಗಾಯತ್ರಿ ಯಾರು? ಇವರು ನಟಿಸಿರುವ ಸಿನಿಮಾಗಳು ಯಾವುವು? ಅವರ ಕೋಟ್ಯಧಿಪತಿ ಗಂಡ ವಿಕಾಸ್ ಯಾರು? ಅವರ ಉದ್ಯಮಗಳು ಯಾವುವು? ಇಲ್ಲಿದೆ ಮಾಹಿತಿ.

ಅಸಲಿಗೆ ಗಾಯತ್ರಿ ನಟಿಸಿರುವುದು ಕೇವಲ ಒಂದೇ ಒಂದು ಸಿನಿಮಾದಲ್ಲಿ. ವಿಶೇಷವೆಂದರೆ ಆ ಸಿನಿಮಾ ಸಹ ಕನ್ನಡ ಸಿನಿಮಾದ ರೀಮೇಕ್! ಹೌದು, ಗಾಯತ್ರಿ ನಟಿಸಿರುವ ಏಕೈಕ ಸಿನಿಮಾ ಹಿಂದಿಯ ‘ಸ್ವದೇಸ್’. ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ, ಕನ್ನಡದಲ್ಲಿ ಶಿವರಾಜ್ ಕುಮಾರ್ ನಟಿಸಿರುವ ‘ಚಿಗುರಿದ ಕನಸು’ ಸಿನಿಮಾದ ರೀಮೇಕ್. ಅಥವಾ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕತೆ ಆಧರಿತ ಸಿನಿಮಾ ಎನ್ನಬಹುದು. ಆಶುತೋಶ್ ಗೋವರಿಕರ್ ನಿರ್ದೇಶಿಸಿದ್ದ ಆ ಸಿನಿಮಾ ದೊಡ್ಡ ಹಿಟ್ ಆಗುವ ಜೊತೆಗೆ ಹಿಂದಿಯ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:VIDEO: ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ; ಪ್ರಾಣಾಪಾಯದಿಂದ ಪಾರಾದ ಬಾಲಿವುಡ್ ನಟಿ, ಖ್ಯಾತ ಉದ್ಯಮಿ

‘ಸ್ವದೇಸ್’ ಸಿನಿಮಾದಲ್ಲಿ ನಟಿಸುವುದಕ್ಕೆ ಮೊದಲು ಗಾಯತ್ರಿ ಮಾಡೆಲ್ ಆಗಿದ್ದರು. ಕೆಲವು ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದರು. 2000ದ ಮಿಸ್ ಇಂಡಿಯಾ ಇಂಟರ್ನ್ಯಾಷನಲ್, ಜಪಾನ್​ನಲ್ಲಿ ನಡೆದ ಮಿಸ್ ಇಂಟರ್ನಾಷ್ಯನಲ್​ನಲ್ಲಿ ಭಾಗಿಯಾಗಿದ್ದರು. 2004 ರಲ್ಲಿ ಬಿಡುಗಡೆ ಆದ ‘ಸ್ವದೇಸ್’ ಸಿನಿಮಾದ ಬಳಿಕ ಗಾಯತ್ರಿ ಇನ್ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಬದಲಿಗೆ ಅದರ ಮರುವರ್ಷವೇ ವಿಕಾಸ್ ಒಬೆರಾಯ್ ಅವರನ್ನು ವಿವಾಹವಾಗಿ, ಫ್ಯಾಮಿಲಿಗೆ ಸಮಯ ಕೊಡಲೆಂದು ಸಿನಿಮಾ ರಂಗವನ್ನು ತ್ಯಜಿಸಿದರು.

ವಿಕಾಸ್ ಒಬೆರಾಯ್ ಭಾರತದ ಟಾಪ್ ಉದ್ಯಮಿಗಳಲ್ಲಿ ಒಬ್ಬರು. ವಿಕಾಸ್, ಭಾರತದ ರಿಯಲ್ ಎಸ್ಟೇಟ್ ದಿಗ್ಗಜರಲ್ಲಿ ಒಬ್ಬರೆಂದು ಹೇಳಲಾಗುತ್ತದೆ. ಒಬೆರಾಯ್ ರಿಯಾಲ್ಟಿ ಅವರ ಒಡೆತನದಲ್ಲಿದೆ. ಮುವತ್ತು ವರ್ಷದ ಹಿಂದೆ ಈ ಸಂಸ್ಥೆಯನ್ನು ಕಟ್ಟಿದ್ದರು. ಅದು ಮಾತ್ರವೇ ಅಲ್ಲದೆ ಆಸ್ಪತ್ರೆ, ಹೌಸಿಂಗ್, ಫೈನ್ಯಾನ್ಸ್, ಕಾರ್ಪೊರೇಟ್ ಹಾಗೂ ರೀಟೇಲ್ ಉದ್ಯಮಗಳಲ್ಲಿಯೂ ]ವಿಕಾಸ್ ಹಣ ತೊಡಗಿಸಿದ್ದಾರೆ. ಮುಂಬೈನ ಜನಪ್ರಿಯ ವೆಸ್ಟೈನ್ ಹೋಟೆಲ್, ರಿಟ್ಜ್ ಕಾರ್ಲ್​ಟನ್ ಹೋಟೆಲ್​ಗಳು ಸಹ ವಿಕಾಸ್ ಒಬೆರಾಯ್ ಅವರಿಗೆ ಸೇರಿದ್ದಾಗಿವೆ. ಇವುಗಳ ಜೊತೆಗೆ ಮುಂಬೈನಲ್ಲಿ ಹಲವು ಮಾಲ್​, ಹೋಟೆಲ್, ಆಫೀಸ್​ ಟವರ್, ಐಶಾರಾಮಿ ಅಪಾರ್ಟ್​ಮೆಂಟ್​ಗಳನ್ನು ಸಹ ನಿರ್ಮಾಣ ಮಾಡುತ್ತಿದೆ ವಿಕಾಸ್ ಒಬೆರಾಯ್ ಅವರ ಸಂಸ್ಥೆ.

ವಿಕಾಸ್ ಅವರಿಗೆ ಸ್ಪೋರ್ಟ್​ ಕಾರುಗಳ ವ್ಯಾಮೋಹವಿದ್ದು, ಹಲವು ಸ್ಪೋರ್ಟ್ಸ್​ ಕಾರುಗಳನ್ನು ಅವರು ಹೊಂದಿದ್ದಾರೆ. ಜೊತೆಗೆ ಪೈಲೆಟ್ ಪರವಾನಗಿಯನ್ನೂ ಹೊಂದಿರುವ ವಿಕಾಸ್ ಸಿರಸ್ 22 ಟ್ಯಾಂಗೋ ಏರ್​ಕ್ರಾಫ್ಟ್ ಚಾಲನೆ ಸಹ ಮಾಡುತ್ತಾರೆ. ಇದೀಗ ಇಟಲಿಯ ಸರ್ದಿನಿಯಾನಲ್ಲಿ ಅಪಘಾತವಾದಾಗ ವಿಕಾಸ್ ಅವರೇ ತಮ್ಮ ಲ್ಯಾಂಬೊರ್ಗಿನಿ ಕಾರನ್ನು ಓಡಿಸುತ್ತಿದ್ದರು. ಈ ಕಾರು ಅಪಘಾತದಲ್ಲಿ ಸ್ವಿಟ್ಜರ್​ಲ್ಯಾಂಡ್​ನ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ಅಪಘಾತದ ವಿಡಿಯೋ ಸಖತ್ ವೈರಲ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ