ಬಾಲಿವುಡ್​ನ ನಂಬರ್ 1 ಆದ ‘ಜವಾನ್’ ಎಲ್ಲ ದಾಖಲೆ ಧೂಳಿಪಟ

Shah Rukh Khan: ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಬಾಕ್ಸ್ ಅಫೀಸ್​ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. 'ಜವಾನ್' ಎಲ್ಲ ಹಳೆಯ ದಾಖಲೆಗಳನ್ನು ಪುಡಿಗಟ್ಟಿದೆ.

ಬಾಲಿವುಡ್​ನ ನಂಬರ್ 1 ಆದ 'ಜವಾನ್' ಎಲ್ಲ ದಾಖಲೆ ಧೂಳಿಪಟ
ಜವಾನ್
Follow us
ಮಂಜುನಾಥ ಸಿ.
|

Updated on: Sep 29, 2023 | 4:16 PM

ಸುಮಾರು ಆರು ವರ್ಷಗಳ ಕಾಲ ಸೋಲುಗಳ ಮೇಲೆ ಸೋಲು ಕಂಡಿದ್ದ ಶಾರುಖ್ ಖಾನ್​ಗೆ (Shah Rukh Khan) ಮತ್ತೆ ಶುಕ್ರದೆಶೆ ಶುರುವಾಗಿದೆ. ಒಂದರ ಹಿಂದೊಂದು ಹಿಟ್​ಗಳನ್ನು ಶಾರುಖ್ ಖಾನ್ ನೀಡುತ್ತಿದ್ದಾರೆ. ಕೇವಲ ಹಿಟ್ ಮಾತ್ರವಲ್ಲ, ಶಾರುಖ್​ ಖಾನ್​ರ ಸಿನಿಮಾಗಳು ಗಳಿಕೆಯಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿವೆ. ಬಾಲಿವುಡ್​ನ ನಂಬರ್ 1 ಸ್ಟಾರ್ ಎನಿಸಿಕೊಂಡಿದ್ದರೂ ಅವರ ಸಿನಿಮಾಗಳು ಮಾತ್ರ ಬಾಕ್ಸ್ ಆಫೀಸ್​ನಲ್ಲಿ ತೋಪಾಗುತ್ತಲೇ ಇದ್ದವು. ಆದರೆ ಈಗ ಬಾಕ್ಸ್ ಆಫೀಸ್​ನಲ್ಲಿಯೂ (Box Office) ನಂಬರ್ 1 ಸ್ಟಾರ್ ಎನಿಸಿಕೊಂಡಿದ್ದಾರೆ ಶಾರುಖ್.

ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಸಿನಿಮಾ ಎಂಬ ದಾಖಲೆ ತೆಲುಗಿನ ‘ಬಾಹುಬಲಿ 2’ ಸಿನಿಮಾದ ಹೆಸರಿನಲ್ಲಿತ್ತು. ‘ಬಾಹುಬಲಿ 2’ ಹಿಂದಿ ಆವೃತ್ತಿ ಈವರೆಗಿನ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಸಿನಿಮಾ ಎನಿಸಿಕೊಂಡಿತ್ತು. ಇದೀಗ ಶಾರುಖ್ ಖಾನ್​ರ ಜವಾನ್ ಸಿನಿಮಾ ಆ ದಾಖಲೆಯನ್ನು ಪುಡಿಗಟ್ಟಿದೆ. ಆ ಮೂಲಕ ಹಿಂದಿಯಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಖ್ಯಾತಿಗೆ ‘ಜವಾನ್’ ಪಾತ್ರವಾಗಿದೆ.

‘ಬಾಹುಬಲಿ 2, ‘ದಂಗಲ್’ ಸಿನಿಮಾಗಳ ಕಲೆಕ್ಷನ್ ಅನ್ನು ಹಿಂದಿಕ್ಕಿರುವ ‘ಜವಾನ್’ ಸಿನಿಮಾ ಅತ್ಯಂತ ಕಡಿಮೆ ಅವಧಿಯಲ್ಲಿ ಹಿಂದಿಯ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ‘ಜವಾನ್’ ಸಿನಿಮಾದ ಹಿಂದಿ ಆವೃತ್ತಿ ಬಿಡುಗಡೆ ಆದ 22 ದಿನಗಳಲ್ಲಿ 515 ಕೋಟಿ ಹಣ ಗಳಿಸಿದೆ. ಈ ಹಿಂದೆ ಇನ್ಯಾವುದೇ ಹಿಂದಿ ಸಿನಿಮಾ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತ ಕಲೆ ಹಾಕಿರಲಿಲ್ಲ.

ಇದನ್ನೂ ಓದಿ:ಯಾರೇ ಬಂದರೂ ‘ಡಂಕಿ’ ಕ್ರಿಸ್​​ಮಸ್ ರಿಲೀಸ್ ಫಿಕ್ಸ್; ಸ್ಪಷ್ಟನೆ ನೀಡಿದ ಶಾರುಖ್ ಖಾನ್

‘ಬಾಹುಬಲಿ 2’ ಸಿನಿಮಾ 510 ಕೋಟಿ ರೂಪಾಯಿ ಹಣ ಗಳಿಸಿತ್ತು. ಆ ದಾಖಲೆಯನ್ನು ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಇತ್ತೀಚೆಗಷ್ಟೆ ಮುರಿದು 513 ಕೋಟಿ ಹಣ ಗಳಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಸಿನಿಮಾ 515 ಕೋಟಿ ಗಳಿಸಿ ‘ಪಠಾಣ್’ ಸಿನಿಮಾದ ದಾಖಲೆ ಮುರಿಯಿತು. ಅದಾದ ಕೆಲವೇ ದಿನಗಳಲ್ಲಿ ಮತ್ತೆ ನಂಬರ್ 1 ಸ್ಥಾನವನ್ನು ಶಾರುಖ್ ಖಾನ್ ವಶಪಡಿಸಿಕೊಂಡಿದ್ದಾರೆ ‘ಜವಾನ್’ ಸಿನಿಮಾ ಮೂಲಕ.

ತಮ್ಮದೇ ‘ಪಠಾಣ್’ ಸಿನಿಮಾದ ಕಲೆಕ್ಷನ್ ಹಾಗೂ ಇತ್ತೀಚೆಗಷ್ಟೆ ನಂಬರ್ 1 ಆಗಿದ್ದ ‘ಗದರ್ 2’ ಸಿನಿಮಾದ ಕಲೆಕ್ಷನ್ ಅನ್ನೂ ಮೀರಿ ‘ಜವಾನ್’ ಮೇಲೇರಿ ಹೋಗಿದೆ. ಈ ಸಿನಿಮಾ ಸುಮಾರು 550 ಕೋಟಿಗೂ ಹೆಚ್ಚು ಹಣವನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಈ ನಡುವೆ ಕೆಲವರು ‘ಜವಾನ್’ ಸಿನಿಮಾದ ಕಲೆಕ್ಷನ್ ತಪ್ಪು ಲೆಕ್ಕ ಎಂದು ಆಕ್ಷೇಪ ತೆಗೆದಿದ್ದಾರೆ. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿರುವ ಶಾರುಖ್ ಖಾನ್, ” ‘ಸುಮ್ಮನೆ ಕುಳಿತುಕೊಳ್ಳಿ ಅಥವಾ ಎಣಿಸುತ್ತಾ ಕೂರಿ. ಕೌಂಟಿಂಗ್ ಮಾಡುವಾಗ ಡಿಸ್ಟ್ರ್ಯಾಕ್ಟ್ ಆಗಬೇಡಿ’ ಎಂದು ಟ್ವೀಟ್ ಮಾಡಿದ್ದಾರೆ.

‘ಜವಾನ್’ ಸಿನಿಮಾವನ್ನು ತಮಿಳಿನ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲ ವಿಜಯ್ ಸೇತುಪತಿ, ನಯನತಾರಾ, ದೀಪಿಕಾ ಪಡುಕೋನೆ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಇನ್ನೂ ಹಲವರು ನಟಿಸಿದ್ದಾರೆ. ಅನಿರುದ್ದ್ ರವಿಚಂದ್ರನ್ ಸಂಗೀತ ನೀಡಿದ್ದಾರೆ. ಸಿನಿಮಾವನ್ನು ಸ್ವತಃ ಶಾರುಖ್ ಖಾನ್ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ