ಮತ್ತಷ್ಟು ತಗ್ಗಿತು ‘ದಿ ವ್ಯಾಕ್ಸಿನ್ ವಾರ್’ ಗಳಿಕೆ; ಎರಡನೇ ದಿನ ಕೆಲವೇ ಲಕ್ಷ ಗಳಿಸಿದ ವಿವೇಕ್ ಸಿನಿಮಾ
‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರದ ಗಳಿಕೆ ಮೇಲೆ ಹೊಡೆತ ನೀಡಿದೆ. ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಇತ್ತು. ಹೀಗಾಗಿ ನಮ್ಮ ರಾಜ್ಯದ ಗಳಿಕೆ ಚಿತ್ರದ ಕೈ ತಪ್ಪಿದೆ. ಚಿತ್ರದ ಗಳಿಕೆ ಕೇವಲ 2 ಕೋಟಿ ರೂಪಾಯಿ ಆಗಿದೆ.
ಕೊವಿಡ್ ಸಂದರ್ಭದಲ್ಲಿ ಭಾರತ ವ್ಯಾಕ್ಸಿನ್ ಕಂಡು ಹಿಡಿಯಿತು. ಈ ಅನ್ವೇಷಣೆ ಅಷ್ಟು ಸುಲಭದ್ದಾಗಿರಲಿಲ್ಲ. ವಿಜ್ಞಾನಿಗಳು ಅದರಲ್ಲೂ ಮಹಿಳಾ ವಿಜ್ಞಾನಿಗಳು ಹಗಲಿರುಳು ಶ್ರಮ ಹಾಕಿದ್ದರು. ಈ ಕಥೆಯನ್ನು ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ತೆರೆಮೇಲೆ ತಂದರು. ಮೊದಲ ದಿನ 1.30 ಕೋಟಿ ರೂಪಾಯಿ ಗಳಿಕೆ ಮಾಡಿದ್ದ ಈ ಚಿತ್ರ, ಎರಡನೇ ದಿನ (ಸೆಪ್ಟೆಂಬರ್ 29) 85 ಲಕ್ಷ ರೂಪಾಯಿಗೆ ತೃಪ್ತಿಪಟ್ಟುಕೊಂಡಿದೆ. ಕರ್ನಾಟಕ ಬಂದ್ ಕೂಡ ಚಿತ್ರದ ಕಲೆಕ್ಷನ್ ಮೇಲೆ ಪ್ರಭಾವ ಬೀರಿದೆ.
ನಾನಾ ಪಾಟೇಕರ್, ಅನುಪಮ್ ಖೇರ್, ರೈಮಾ ಸೇನ್, ಪಲ್ಲವಿ ಜೋಶಿ ಮೊದಲಾದವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ವಿವೇಕ್ ಅವರು ಸಾಕಷ್ಟು ಪ್ರಚಾರ ನೀಡಿದ್ದರು. ಅಮೆರಿಕಕ್ಕೂ ತೆರಳಿ ಸಿನಿಮಾ ಪ್ರದರ್ಶನ ಮಾಡಿದ್ದರು. ಭಾರತದಲ್ಲೂ ಅನೇಕ ಸೆಲೆಬ್ರಿಟಿಗಳಿಗೆ ವಿಶೇಷ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಇಲ್ಲಿನ ಸೆಲೆಬ್ರಿಟಿಗಳು ಸಿನಿಮಾ ನೋಡಿ ಮೆಚ್ಚುಗೆಯ ಮಾತನ್ನು ಆಡಿದ್ದರು. ಆದಾಗ್ಯೂ ಸಿನಿಮಾದ ಕಲೆಕ್ಷನ್ ಮೇಲಕ್ಕೆ ಏಳುತ್ತಿಲ್ಲ.
‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರದ ಗಳಿಕೆ ಮೇಲೆ ಹೊಡೆತ ನೀಡಿದೆ. ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಇತ್ತು. ಹೀಗಾಗಿ ನಮ್ಮ ರಾಜ್ಯದ ಗಳಿಕೆ ಚಿತ್ರದ ಕೈ ತಪ್ಪಿದೆ. ಚಿತ್ರದ ಗಳಿಕೆ ಕೇವಲ 2 ಕೋಟಿ ರೂಪಾಯಿ ಆಗಿದೆ. ಇದರಿಂದ ವಿವೇಕ್ ಅಗ್ನಿಹೋತ್ರಿಗೆ ಸೋಲಿನ ಭಯ ಕಾಡಿದೆ.
ಇದನ್ನೂ ಓದಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಮೊದಲ ದಿನದ ಗಳಿಕೆ 1 ಕೋಟಿ ರೂ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಒಂದೊಮ್ಮೆ ‘ವ್ಯಾಕ್ಸಿನ್ ವಾರ್’ ಸಿನಿಮಾ ಸೋತರೆ ‘ಕಾಶ್ಮೀರ್ ಫೈಲ್ಸ್ 2’ ಮಾಡುವ ಬಗ್ಗೆ ಆಲೋಚಿಸುವುದಾಗಿ ವಿವೇಕ್ ಹೇಳಿದ್ದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಅವರು ಆಲೋಚಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ