ಬಿಗ್ ಬಾಸ್ನಲ್ಲಿ ಬಿಸಿ ಗಾಳಿ: ಕೋಪದಲ್ಲಿ ಬಾಯಿಗೆ ಬಂದಂತೆ ಬೈದ ವಿನಯ್ ಗೌಡ
ಸಂಗೀತಾ ಹಾಗೂ ವಿನಯ್ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ಇವರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಬಿಗ್ ಬಾಸ್ಗೆ ಬಂದಾಗ ಇವರ ಮಧ್ಯೆ ಮಿಸ್ಅಂಡರ್ಸ್ಟ್ಯಾಂಡಿಂಗ್ ಆಗಿದೆ. ಇಬ್ಬರೂ ಕಿತ್ತಾಡಿಕೊಳ್ಳೋಕೆ ಆರಂಭಿಸಿದರು. ಹೀಗಾಗಿ, ಮನೆಯಲ್ಲಿ ಬಿಸಿ ಗಾಳಿ ಬೀಸುತ್ತಿದೆ.

ಎರಡನೇ ವಾರಕ್ಕೆ ‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಜಗಳಗಳು ಉದ್ಭವ ಆಗಿವೆ. ಮನೆಯಲ್ಲಿ ಎರಡು ಟೀಂ ಮಾಡಿರುವುದರಿಂದ ಸಿಕ್ಕಾಪಟ್ಟೆ ಕಲಹ ಉಂಟಾಗುತ್ತಿದೆ. ಟಾಸ್ಕ್ ಸೋತ ಬೇಸರದ ಜೊತೆ ತಮ್ಮ ಬಗ್ಗೆ ಅಪಪ್ರಚಾರ ಆಗುತ್ತಿದೆ ಎಂದು ವಿನಯ್ ಗೌಡ ಅವರು ಸಿಟ್ಟಾಗಿದ್ದಾರೆ. ಹೀಗಾಗಿ, ಅವರು ಸಾಕಷ್ಟು ಅಸಮಾಧಾನಗೊಂಡಿದ್ದಾರೆ. ಮನೆಯವರ ಮೇಲೆಲ್ಲ ತಮ್ಮ ಕೋಪ ತೋರಿಸುತ್ತಿದ್ದಾರೆ. ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಇದರಿಂದ ಮನೆಯ ವಾತಾವರಣ ಪ್ರಕ್ಷುಬ್ಧವಾಗಿದೆ.
ಧಾರಾವಾಹಿ ಮೂಲಕ ಫೇಮಸ್ ಆದವರು ವಿನಯ್ ಗೌಡ. ಸಂಗೀತಾ ಹಾಗೂ ವಿನಯ್ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ಇವರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಬಿಗ್ ಬಾಸ್ಗೆ ಬಂದಾಗ ಇವರ ಮಧ್ಯೆ ಮಿಸ್ಅಂಡರ್ಸ್ಟ್ಯಾಂಡಿಂಗ್ ಆಗಿದೆ. ಇಬ್ಬರೂ ಕಿತ್ತಾಡಿಕೊಳ್ಳೋಕೆ ಆರಂಭಿಸಿದರು. ಹೀಗಾಗಿ, ಮನೆಯಲ್ಲಿ ಬಿಸಿ ಗಾಳಿ ಬೀಸುತ್ತಿದೆ.
ಸಂಗೀತಾ ಅವರು ಪದೇಪದೇ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಮನೆಯಿಂದ ಹೊರ ಹೋಗುವ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ. ಈ ರೀತಿಯ ನಿರ್ಧಾರ ತೆಗೆದುಕೊಳ್ಳದಂತೆ ಅನೇಕರು ಅವರಿಗೆ ಕಿವಿsಮಾತು ಹೇಳಿದ್ದಾರೆ. ಸಂಗೀತಾ ಈ ರೀತಿ ಆಲೋಚಿಸೋದಕ್ಕೆ ವಿನಯ್ ನೇರ ಕಾರಣ ಎಂದು ಭಾಗ್ಯಶ್ರೀ ಅಂದುಕೊಂಡಿದ್ದಾರೆ. ಈ ಕಾರಣದಿಂದಲೇ ವಿನಯ್ ಬಳಿ ಹೋಗಿ ಭಾಗ್ಯಶ್ರೀ ತಿದ್ದಿಕೊಳ್ಳುವಂತೆ ಕೋರಿದ್ದಾರೆ. ‘ನಿಮ್ಮಿಂದ ಸಂಗೀತಾ ಖಿನ್ನತೆಗೆ ಒಳಗಾಗುತ್ತಿದ್ದಾರೆ’ ಎನ್ನುವ ಮಾತನ್ನು ವಿನಯ್ಗೆ ಭಾಗ್ಯಶ್ರೀ ಹೇಳಿದ್ದಾರೆ. ಇದನ್ನು ಕೇಳಿದ ವಿನಯ್ ಕೋಪಗೊಂಡಿದ್ದಾರೆ.
ವಿನಯ್ ಕೋಪದ ಕೆಂಗಣ್ಣು ಯಾರನ್ನು ಬೂದಿ ಮಾಡುತ್ತೋ!?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/mECU2pTCvZ
— Colors Kannada (@ColorsKannada) October 19, 2023
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಹೆಚ್ಚುತ್ತಿದೆ ವಿನಯ್ ಗೌಡ ಕೋಪ
‘ನಾನು ಯಾವುದಕ್ಕೂ ಜವಾಬ್ದಾರನಲ್ಲ. ಅವರು ಖಿನ್ನತೆಗೆ ಒಳಗಾದರೆ ಅದಕ್ಕೆ ನಾನು ಹೊಣೆ ಅಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ. ಆ ಜಗಳ ಇಂದಿಗೂ ಮುಂದುವರಿದಿದೆ. ಇದರ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ನನ್ನಿಂದ ಒಬ್ಬರು ಖಿನ್ನತೆಗೆ ಹೋದ್ರು ಅಂತಾರೆ, ಮತ್ತೊಬ್ರು ನಾನು ಡೇಂಜರ್ ಅಂತಾರೆ. ನಾನೇನು ಮಾಡಬೇಕು’ ಎಂದು ವಿನಯ್ ಕೆಂಡಾಮಂಡಲವಾಗಿದ್ದಾರೆ. ಕಲರ್ಸ್ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9:30ಕ್ಕೆ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:58 am, Thu, 19 October 23




