‘ಬಿಗ್ ಬಾಸ್ನ ಅಕ್ರಮವಾಗಿ ಪ್ರಸಾರ ಮಾಡುವಂತಿಲ್ಲ’; ಆದೇಶ ನೀಡಿದ ಕೋರ್ಟ್
‘ಬಿಗ್ ಬಾಸ್ನ ಯಾವುದೇ ಎಪಿಸೋಡ್ಗಳನ್ನು ಅಕ್ರಮವಾಗಿ ಪ್ರಸಾರ ಮಾಡುವಂತಿಲ್ಲ. ನಾವು ಇಂಜಂಕ್ಷನ್ ಆದೇಶ ನೀಡುತ್ತಿದ್ದೇವೆ. ಈ ರೀತಿಯ ವೆಬ್ಸೈಟ್ಗಳನ್ನು ಬ್ಲಾಕ್ ಮಾಡಿ ಎಂದು ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇವೆ’ ಎಂದು ಕೋರ್ಟ್ ಹೇಳಿದೆ.
ಹಿಂದಿ, ಕನ್ನಡ ಮೊದಲಾದ ಭಾಷೆಗಳಲ್ಲಿ ಬಿಗ್ ಬಾಸ್ ಆರಂಭ ಆಗಿದೆ. ‘ವಯಕಾಮ್ 18 ಮೀಡಿಯಾ ಪ್ರೈವೇಟ್ ಲಿಮಿಟೆಡ್’ ಹಿಂದಿ, ಕನ್ನಡ ಮೊದಲಾದ ಭಾಷೆಗಳಲ್ಲಿ ಪ್ರಸಾರದ ಹಕ್ಕನ್ನು ಹೊಂದಿದೆ. ಆದರೆ, ಕೆಲವು ವೆಬ್ಸೈಟ್ಗಳು ಬಿಗ್ ಬಾಸ್ನ ಅಕ್ರಮವಾಗಿ ಪ್ರಸಾರ ಮಾಡುತ್ತಿವೆ. ಈ ರೀತಿ ಬಿಗ್ ಬಾಸ್ (Bigg Boss) ಅಕ್ರಮವಾಗಿ ಪ್ರಸಾರ ಮಾಡುವುದಕ್ಕೆ ತಡೆ ನಿಡುವಂತೆ ವಯಕಾಮ್ 18 ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಸಂಸ್ಥೆಯ ಪರವಾಗಿ ಆದೇಶ ಬಂದಿದೆ.
‘ಬಿಗ್ ಬಾಸ್ಗೆ ದೊಡ್ಡ ವೀಕ್ಷಕರ ವರ್ಗ ಇದೆ. ಹಿಂದಿನ ಮತ್ತು ಮುಂದೆ ಪ್ರಸಾರ ಆಗುವ ಎಪಿಸೋಡ್ಗಳನ್ನು ಅಕ್ರಮವಾಗಿ ಪ್ರಸಾರ ಮಾಡುವುದರಿಂದ ಸ್ವಾಮ್ಯದ ಹಕ್ಕನ್ನು ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಟಿವಿ ಹಾಗೂ ಒಟಿಟಿಯಲ್ಲಿ ನಾವು ಬಿಗ್ ಬಾಸ್ ಪ್ರಸಾರ ಮಾಡುತ್ತಿದ್ದೇವೆ. ಆದರೆ, ಕೆಲವರು ಬಿಗ್ ಬಾಸ್ ಹೆಸರಿನಲ್ಲಿ ವೆಬ್ ಸೈಟ್ ಆರಂಭಿಸಿ, ಅಲ್ಲಿ ಲಿಯೋ ಪ್ರಸಾರ ಮಾಡುತ್ತಿದ್ದಾರೆ. ಇದು ನಮಗೆ ಹಾನಿ ಮಾಡುತ್ತಿದೆ’ ಎಂದು ವಯಕಾಮ್ 18 ದೂರಿನಲ್ಲಿ ತಿಳಿಸಿತ್ತು.
‘ಬಿಗ್ ಬಾಸ್ನ ಯಾವುದೇ ಎಪಿಸೋಡ್ಗಳನ್ನು ಅಕ್ರಮವಾಗಿ ಪ್ರಸಾರ ಮಾಡುವಂತಿಲ್ಲ. ನಾವು ಇಂಜಂಕ್ಷನ್ ಆದೇಶ ನೀಡುತ್ತಿದ್ದೇವೆ. ಈ ರೀತಿಯ ವೆಬ್ಸೈಟ್ಗಳನ್ನು ಬ್ಲಾಕ್ ಮಾಡಿ ಎಂದು ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇವೆ’ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಆದೇಶದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಬಿಸಿ ಗಾಳಿ: ಕೋಪದಲ್ಲಿ ಬಾಯಿಗೆ ಬಂದಂತೆ ಬೈದ ವಿನಯ್ ಗೌಡ
ಹಿಂದಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗುತ್ತಿದೆ. ಇದಕ್ಕೆ ಸಲ್ಮಾನ್ ಖಾನ್ ಅವರು ನಿರೂಪಣೆ ಮಾಡುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ದೊಡ್ಮನೆ ಸೇರಿದ್ದಾರೆ. ಕನ್ನಡದಲ್ಲಿ ಬಿಗ್ ಬಾಸ್ 10ನೇ ಸೀಸನ್ ಎರಡನೇ ವಾರಕ್ಕೆ ಕಾಲಿಟ್ಟಿದೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ನ ನಡೆಸಿಕೊಡುತ್ತಿದ್ದಾರೆ. 16 ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಜಿಯೋ ಸಿನಿಮಾಸ್ನಲ್ಲಿ ಲೈವ್ ವೀಕ್ಷಣೆಗೆ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ