ಟಾಸ್ಕ್ ಗೆದ್ದರೆ: ತುಕಾಲಿ ಸಂತು, ಹಳ್ಳಿಕಾರ್ ಸಂತು ಕೊಟ್ಟರು ಆಫರ್, ನಮ್ರತಾ ಆಫರ್ ಇನ್ನೂ ಜೋರು
Bigg Boss 10: ಸ್ಪರ್ಧೆ ಗೆದ್ದವರಿಗೆ ಭರ್ಜರಿ ಆಫರ್ ಒಂದನ್ನು ತುಕಾಲಿ ಸಂತು ನೀಡಿದ್ದಾರೆ. ಅವರಿಗೇನು ಕಡಿಮೆ ಎಂಬಂತೆ ಹಳ್ಳಿಕಾರ್ ಸಂತೋಶ್ ಸಹ ಆಫರ್ ಘೋಷಿಸಿದ್ದಾರೆ. ಇವರ ನಡುವೆ ನಮ್ರತಾ ಸಹ ಇನ್ನೂ ದೊಡ್ಡ ಆಫರ್ ಘೋಷಣೆ ಮಾಡಿದ್ದಾರೆ.
ಬಿಗ್ಬಾಸ್ 10ರ (Bigg Boss 10) ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ, ವೈಮಸ್ಯ, ಕಿತ್ತಾಟ ಎಲ್ಲವೂ ಜೋರಾಗಿಯೇ ನಡೆದಿದೆ. ಮಾಣಿಜ್ಯ, ರಣಶಕ್ತಿ ತಂಡಗಳ ನಡುವೆ ಟಾಸ್ಕ್ಗಾಗಿ ಜೋರು ಸ್ಪರ್ಧೆ ಜಾರಿಯಲ್ಲಿದೆ. ಇದರ ನಡುವೆ ಅಲ್ಲಲ್ಲಿ ಸಣ್ಣ-ಪುಟ್ಟ ಹಾಸ್ಯವೂ ನಡೆದಿದೆ. ಮೊದಲ ವಾರ ಮನೆಯ ಸದಸ್ಯರನ್ನು ವ್ಯಂಗ್ಯ , ಅಪಹಾಸ್ಯ ಮಾಡಿ ಟೀಕೆಗೆ ಗುರಿಯಾಗಿದ್ದ ತುಕಾಲಿ ಸಂತು, ಎರಡನೇ ವಾರ ತುಸು ಸುಧಾರಿಸಿಕೊಂಡಿದ್ದು ತಮ್ಮ ಹಾಸ್ಯದ ವರಸೆಯನ್ನು ತುಸು ಬದಲಾಯಿಸಿಕೊಂಡಂತಿದ್ದಾರೆ.
ಟಾಸ್ಕ್ಗಳ ನಡುವೆ ಸಿಕ್ಕ ಸಮಯದಲ್ಲಿ ತುಕಾಲಿ ಸಂತು ಮನೆಯ ಕೆಲ ಸದಸ್ಯರಿಗೆ ಆಫರ್ ಒಂದನ್ನು ಕೊಟ್ಟಿದ್ದಾರೆ. ನಮೃತಾ, ಡ್ರೋನ್ ಪ್ರತಾಪ್, ತುಕಾಲಿ ಸಂತು, ಹಳ್ಳಿಕಾರ್ ಸಂತು, ನೀತು, ಸ್ನೇಹಿತ್ ಎಲ್ಲರೂ ಕುಳಿತು ಮಾತನಾಡುವಾಗ, ಡ್ರೋನ್ ಪ್ರತಾಪ್ ಹಾಗೂ ನಮ್ರತಾರನ್ನು ಉದ್ದೇಶಿಸಿ, ನೀವು ಏನಾದರೂ ಈ ಸ್ಪರ್ಧೆಯಲ್ಲಿ ಗೆದ್ದರೆ, ನಮ್ಮ ಹಳ್ಳಿಗೆ ಬನ್ನಿ ನಿಮಗೆ ಉಡುಗೊರೆ ಕೊಡುತ್ತೇನೆ ಎಂದಿದ್ದಾರೆ. ಏನದು ಉಡುಗೊರೆ ಎಂದರೆ, ಇಬ್ಬರಿಗೂ ತಲಾ 1001 ರೂಪಾಯಿ ಬಹುಮಾನ ಕೊಡುತ್ತೇನೆ ಎಂದಿದ್ದಾರೆ.
ಆಗ ಅಲ್ಲಿಯೇ ಕೂತಿದ್ದ ಹಳ್ಳಿಕಾರ್ ಸಂತು, ‘ಬಿಗ್ಬಾಸ್ ಗೆದ್ದು ನಮ್ಮ ಊರಿಗೆ ಕುರಿ ಒಡೆಸಿ ಬಾಡೂಟ ಹಾಕಿಸುತ್ತೇನೆ’ ಎನ್ನುತ್ತಾರೆ. ಆಗ ನಮೃತಾ, ಹೊರಗೆ ಹೋದಮೇಲಲ್ಲ, ಈ ಮನೆಯಲ್ಲಿದ್ದಾಗ ಏನು ಕೊಡುತ್ತೀಯ ಅದನ್ನು ಹೇಳಿ ಎನ್ನುತ್ತಾರೆ. ಆಗ ಸಂತು, ‘ಸರಿ ಹಾಗಿದ್ರೆ, ನಾನು ಬಳಸುತ್ತಿರುವ ಸೋಪು ನಿನಗೆ ಕೊಡುತ್ತೇನೆ’ ಎನ್ನುತ್ತಾರೆ. ಬಳಿಕ ಹಳ್ಳಿಕಾರ್ ಸಂತು, ‘ಮೈಕ್ ಗೆ ಹಾಕಿಕೊಳ್ಳುವ ಬ್ಯಾಟರಿ ಕೊಟ್ಟು ಬಿಡುವ ಬಿಡಿ’ ಎಂದು ತಮ್ಮ ಮಾತು ಸೇರಿಸುತ್ತಾರೆ.
ಇದನ್ನೂ ಓದಿ:ಬೆಳ್ಳಂಬೆಳಿಗ್ಗೆ ಬಿಗ್ಬಾಸ್ ಶಾಕ್, ಜಗಳಕ್ಕೆ ಕಾರಣವಾದ ನಾಮಿನೇಷನ್
ಬಳಿಕ ನಮ್ರತಾ, ಸ್ನೇಹಿತ್ ಗೆದ್ದರೆ ನಾನು ಅವರೊಟ್ಟಿಗೆ ಬಾಲ್ಕನಿಗೆ ಹೋಗುತ್ತೇನೆ ಎನ್ನುತ್ತಾರೆ. ಬಳಿಕ ರಕ್ಷಕ್ ಗೆದ್ದರೆ ರಕ್ಷಕ್ ಗೆ ಈಜುವುದನ್ನು ಹೇಳಿಕೊಡುತ್ತೇನೆ ಎನ್ನುತ್ತಾರೆ. ಆಗ ತುಕಾಲಿ ಸಂತು, ಇದಲ್ಲವೆ ಅದೃಷ್ಟ, ನೀವು ರಕ್ಷಕ್ಗೆ ಈಜು ಹೇಳಿಕೊಡುವುದಾದರೆ ನಾವು ದಡದಲ್ಲೇ ಕುಳಿತು ನೋಡುತ್ತಿರುತ್ತೇವೆ ಎನ್ನತ್ತಾರೆ. ಸಂತು ಮಾತಿಗೆ ಎಲ್ಲರೂ ನಗುತ್ತಾರೆ.
ಬಿಗ್ಬಾಸ್ ಮನೆಯಲ್ಲಿ ಕಂಟೆಸ್ಟ್ಗಳ ನಡುವೆ ಟಾಸ್ಕ್ಗಳಲ್ಲಿ ತುರುಸಿನ ಸ್ಪರ್ಧೆ ನಡೆಯುತ್ತಿದೆ. ಅದರಲ್ಲಿಯೂ ವಿನಯ್ ಹಾಗೂ ಸಂಗೀತಾ ನಡುವಿನ ಜಗಳ ತಾರಕ್ಕೇರಿದೆ. ಡ್ರೋನ್ ಪ್ರತಾಪ್ ಮತ್ತೊಮ್ಮೆ ವಿನಯ್ಗೆ ಟಾರ್ಗೆಟ್ ಆಗಿದ್ದು, ವಿನಯ್ ಪ್ರಚಂಡ ಕೋಪಕ್ಕೆ ಡ್ರೋನ್ ಹಾಗೂ ಸಂಗೀತಾ ಗುರಿಯಾಗಿದ್ದಾರೆ. ಇನ್ನು ಕಾರ್ತಿಕ್ ಸಹ ವಿನಯ್ ವಿರುದ್ಧ ತಂಡ ಕಟ್ಟಿಕೊಂಡು ಟಾಸ್ಕ್ ಗೆಲ್ಲಲು ಸಾಹಸಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಅವರ ಕ್ಯಾಪ್ಟನ್ಸಿ ಅವಧಿ ಮುಗಿದಿದ್ದು ಹೊಸ ಕ್ಯಾಪ್ಟನ್ಗಾಗಿ ಟಾಸ್ಕ್ ಆಡಬೇಕಿದೆ. ಅಂದಹಾಗೆ ಮನೆಯ ಗಟ್ಟಿಗ ವಿನಯ್, ಇನ್ನೂ ಎರಡು ವಾರ ಕ್ಯಾಪ್ಟನ್ಸಿ ಟಾಸ್ಕ್ ಆಡುವಂತಿಲ್ಲ. ಬಿಗ್ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ರಾತ್ರಿ 9:30 ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ 24 ಗಂಟೆ ನೇರ ಪ್ರಸಾರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ