ಉತ್ತಮ ಟಿಆರ್ಪಿ ಪಡೆದ ‘ಬಿಗ್ ಬಾಸ್’-‘ಸರೆಗಮಪ’; ಯಾವುದಕ್ಕೆ ಹೆಚ್ಚು?
ಅತಿದೊಡ್ಡ ರಿಯಾಲಿಟಿ ಶೋ ಎಂದು ಖ್ಯಾತಿ ಪಡೆದಿರುವ ಬಿಗ್ ಬಾಸ್ ಇತ್ತೀಚೆಗೆ ಆರಂಭ ಆಯಿತು. ಅದೇ ರೀತಿ ಜೀ ಕನ್ನಡದಲ್ಲಿ ‘ಸರೆಗಮಪ’ ರಿಯಾಲಿಟಿ ಶೋ ಪ್ರಸಾರ ಆರಂಭಿಸಿದೆ. ಇವುಗಳ ಟಿಆರ್ಪಿ ಹೊರಬಿದ್ದಿದೆ. ಯಾವುದಕ್ಕೆ ಎಷ್ಟು ಟಿಆರ್ಪಿ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಕಿರುತೆರೆ ಜಗತ್ತು ವಿಸ್ತಾರವಾಗಿದೆ. ವಾರದ ದಿನಗಳಲ್ಲಿ ಧಾರಾವಾಹಿಗಳು ಪ್ರಸಾರ ಕಂಡರೆ ವೀಕೆಂಡ್ನಲ್ಲಿ ರಿಯಾಲಿಟಿ ಶೋಗಳ ಅಬ್ಬರ ಇರುತ್ತದೆ. ಧಾರಾವಾಹಿ ಮಾತ್ರವಲ್ಲದೆ, ರಿಯಾಲಿಟಿ ಶೋಗಳ ಮಧ್ಯೆಯೂ ಟಫ್ ಕಾಂಪಿಟೇಷನ್ ಇದೆ. ಅತಿದೊಡ್ಡ ರಿಯಾಲಿಟಿ ಶೋ ಎಂದು ಖ್ಯಾತಿ ಪಡೆದಿರುವ ಬಿಗ್ ಬಾಸ್ (Bigg Boss) ಇತ್ತೀಚೆಗೆ ಆರಂಭ ಆಯಿತು. ಅದೇ ರೀತಿ ಜೀ ಕನ್ನಡದಲ್ಲಿ ‘ಸರೆಗಮಪ’ ರಿಯಾಲಿಟಿ ಶೋ ಪ್ರಸಾರ ಆರಂಭಿಸಿದೆ. ಇವುಗಳ ಟಿಆರ್ಪಿ ಹೊರಬಿದ್ದಿದೆ. ಯಾವುದಕ್ಕೆ ಎಷ್ಟು ಟಿಆರ್ಪಿ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ರಿಯಾಲಿಟಿ ಶೋ..
‘ಸರೆಗಮಪ ಸೀಸನ್ 20’ ಇತ್ತೀಚೆಗೆ ಆರಂಭ ಆಗಿದೆ. ಜೀ ಕನ್ನಡ ವಾಹಿನಿಯಲ್ಲಿ ‘ಸರೆಗಮಪ 20ನೇ ಸೀಸನ್’ ಪ್ರಸಾರ ಕಾಣುತ್ತಿದೆ. ನಗರ ಭಾಗದಲ್ಲಿ ‘ಸರೆಗಮಪ ಸೀಸನ್ 20’ 8.2 ಟಿಆರ್ಪಿ ಪಡೆದಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫಿನಾಲೆಗೆ 5.1 ರೇಟಿಂಗ್ ಸಿಕ್ಕಿದೆ.
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ವಾರದ ದಿನದಲ್ಲಿ ಈ ರಿಯಾಲಿಟಿ ಶೋ ನಗರ ಭಾಗದಲ್ಲಿ 5.7 ರೇಟಿಂಗ್ ಪಡೆದಿದೆ. ವೀಕೆಂಡ್ನಲ್ಲಿ 7.1 ರೇಟಿಂಗ್ ಶೋಗೆ ಸಿಕ್ಕಿದೆ. ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಬರುತ್ತಾರೆ. ಈ ಕಾರಣಕ್ಕೆ ವಿಕೆಂಡ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ರಿಯಾಲಿಟಿ ಶೋ ನೋಡುತ್ತಾರೆ.
ಇದನ್ನೂ ಓದಿ: ‘ಬಿಗ್ ಬಾಸ್ನ ಅಕ್ರಮವಾಗಿ ಪ್ರಸಾರ ಮಾಡುವಂತಿಲ್ಲ’; ಆದೇಶ ನೀಡಿದ ಕೋರ್ಟ್
ಧಾರಾವಾಹಿಗಳ ಟಿಆರ್ಪಿ
ನಗರ ವಿಭಾಗದ ಟಿಆರ್ಪಿ ಪರಿಗಣನೆಗೆ ತೆಗೆದುಕೊಂಡರೆ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ‘ಸೀತಾ ರಾಮ’ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿದೆ. ‘ಶ್ರೀರಸ್ತು ಶುಭಮಸ್ತು ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ನಾಲ್ಕನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ ಇದೆ. ಐದನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಇದೆ. ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಆರನೇ ಸ್ಥಾನಕ್ಕೆ ಹಾಗೂ ‘ಅಮೃತಧಾರೆ’ ಧಾರಾವಾಹಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:28 pm, Thu, 19 October 23