ಎರಡು ದೋಣಿ ಮೇಲೆ ಕಾಲಿಟ್ಟ ಕಾರ್ತಿಕ್; ನಮ್ರತಾ, ಸಂಗೀತಾ ಜೊತೆ ಫ್ಲರ್ಟ್
ನಮ್ರತಾ ಬಳಿ ಹೋಗಿ ಡೇಟ್ಗೆ ಹೋಗೋಣ ಎಂದು ಕರೆದಿದ್ದಾರೆ ಕಾರ್ತಿಕ್. ಇದಕ್ಕೆ ನಮ್ರತಾ ಕೂಡ ಒಪ್ಪಿದ್ದಾರೆ. ಇದನ್ನು ನೋಡಿ ಸ್ನೇಹಿತ್ ಬೇಸರ ಮಾಡಿಕೊಂಡಿದ್ದಾರೆ! ಸ್ನೇಹಿತ್ ಕೂಡ ನಮ್ರತಾಗೆ ಹತ್ತಿರ ಆಗಬೇಕು ಎಂದು ಪ್ರಯತ್ನಿಸಿದ್ದರು.
ಬಿಗ್ ಬಾಸ್ (Bigg Boss) ಮನೆಯ ಒಳಗೆ ಹೋಗುವುದಕ್ಕೂ ಮೊದಲು ಕಾರ್ತಿಕ್ ಮಹೇಶ್ (Kartik Mahesh) ಅವರು ಲವ್ ವಿಚಾರದ ಬಗ್ಗೆ ಮಾತನಾಡಿದ್ದರು. ಅಮ್ಮನಿಗೆ ಒಂದು ಸೊಸೆಯ ತರುವ ಉದ್ದೇಶ ಇದೆ ಎಂದು ಅವರು ಹೇಳಿದ್ದಾರೆ. ಮೊದಲ ದಿನದಿಂದಲೇ ಈ ವಿಚಾರದಲ್ಲಿ ಅವರು ಕಾರ್ಯಪ್ರವೃತ್ತರಾದಂತಿದೆ. ಅಚ್ಚರಿಯ ವಿಚಾರ ಎಂದರೆ ಅವರು ಎರಡು ದೋಣಿ ಮೇಲೆ ಕಾಲಿಟ್ಟಿದ್ದಾರೆ. ಸಂಗೀತಾ ಜೊತೆ ಕ್ಲೋಸ್ ಆಗಿರೋ ಅವರು ನಮ್ರತಾ ಜೊತೆಯೂ ಫ್ಲರ್ಟ್ ಶುರುಹಚ್ಚಿಕೊಂಡಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಕ್ಲೋಸ್ ಆದರು. ಇಬ್ಬರೂ ಅಸಮರ್ಥರ ಗುಂಪಿನಲ್ಲಿ ಇರುವುದರಿಂದ ಆಪ್ತತೆ ಹೆಚ್ಚಿತು. ಆದರೆ, ಈ ವಾರ ತಂಡದ ಕ್ಯಾಪ್ಟನ್ ಆಯ್ಕೆಗೆ ಕಾರ್ತಿಕ್ ತಮ್ಮ ಹೆಸರು ತೆಗೆದುಕೊಂಡಿಲ್ಲ ಎಂದು ಸಂಗೀತಾ ಸಿಟ್ಟಾದರು. ಇಬ್ಬರ ಮಧ್ಯೆ ವೈಮನಸ್ಸು ಮೂಡಿತು. ಈ ವಿಚಾರದಲ್ಲಿ ಕಾರ್ತಿಕ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರು ನಮ್ರತಾ ಜೊತೆ ಕ್ಲೋಸ್ ಆಗೋಕೆ ಪ್ರಯತ್ನಿಸುತ್ತಿದ್ದಾರೆ. ಸಂಗೀತಾಗೆ ಜಲಸ್ ಮಾಡಿಸಬೇಕು ಎನ್ನುವ ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ.
ನಮ್ರತಾ ಬಳಿ ಹೋಗಿ ಡೇಟ್ಗೆ ಹೋಗೋಣ ಎಂದು ಕರೆದಿದ್ದಾರೆ ಕಾರ್ತಿಕ್. ಇದಕ್ಕೆ ನಮ್ರತಾ ಕೂಡ ಒಪ್ಪಿದ್ದಾರೆ. ಇದನ್ನು ನೋಡಿ ಸ್ನೇಹಿತ್ ಬೇಸರ ಮಾಡಿಕೊಂಡಿದ್ದಾರೆ! ಸ್ನೇಹಿತ್ ಕೂಡ ನಮ್ರತಾಗೆ ಹತ್ತಿರ ಆಗಬೇಕು ಎಂದು ಪ್ರಯತ್ನಿಸಿದ್ದರು. ಹೀಗಿರುವಾಗಲೇ ನಮ್ರತಾ ಜೊತೆ ಕಾರ್ತಿಕ್ ಹತ್ತಿರ ಆಗಲು ಪ್ರಯತ್ನಿಸುತ್ತಿದ್ದಾರೆ.
View this post on Instagram
ಕಾರ್ತಿಕ್ ಅವರು ಆಟದಲ್ಲಿ ನೂರಕ್ಕೆ ನೂರು ಪರ್ಸಂಟ್ ನೀಡುತ್ತಾರೆ. ಇದರ ಜೊತೆಗೆ ಎಂಟರ್ಟೇನ್ಮೆಂಟ್ ಕೂಡ ನೀಡುತ್ತಿದ್ದಾರೆ. ಇವುಗಳ ಮಧ್ಯೆ ಅವರು ಎರಡು ದೋಣಿ ಮೇಲೆ ಕಾಲಿಟ್ಟಿದ್ದಾರೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ರೀ-ಎಂಟ್ರಿ; ಬದಲಾಗಲಿದೆ ಲೆಕ್ಕಾಚಾರ?
ಇನ್ನು, ಮೈಕೆಲ್ ಅಜಯ್ ಹಾಗೂ ಈಶಾನಿ ಅವರು ಕ್ಲೋಸ್ ಆಗುತ್ತಿದ್ದಾರೆ. ಇವರ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ‘ಈಶಾನಿ ನನ್ನ ಗರ್ಲ್ಫ್ರೆಂಡ್’ ಎಂದು ಅವರು ಇತ್ತೀಚೆಗೆ ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಸದ್ಯ ‘ಬಿಗ್ ಬಾಸ್’ ಮನೆಗೆ ವರ್ತೂರು ಸಂತೋಷ್ ಅವರು ಕಂಬ್ಯಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಎಪಿಸೋಡ್ನಲ್ಲಿ ಈ ವಿಚಾರ ಗೊತ್ತಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ