ಈ ವಾರ ಮನೆಯಿಂದ ಹೊರಬಂದಿದ್ದು ಯಾರು? ಸುದೀಪ್ ಕೊಟ್ಟರು ಟ್ವಿಸ್ಟ್

Bigg Boss: ಬಿಗ್​ಬಾಸ್ ಮನೆಯಿಂದ ಪ್ರತಿ ವಾರವೂ ಒಬ್ಬರು ಸದಸ್ಯರು ಹೊರಗೆ ಬರುವುದು ಸಾಮಾನ್ಯ. ಈ ವಾರಾಂತ್ಯವೂ ಒಬ್ಬರು ಹೊರಗೆ ಬರಬೇಕಿತ್ತು, ಆದರೆ ನಿರೂಪಕ ಸುದೀಪ್ ಟ್ವಿಸ್ಟ್ ಒಂದನ್ನು ನೀಡಿದ್ದಾರೆ. ಏನದು?

ಈ ವಾರ ಮನೆಯಿಂದ ಹೊರಬಂದಿದ್ದು ಯಾರು? ಸುದೀಪ್ ಕೊಟ್ಟರು ಟ್ವಿಸ್ಟ್
ಸುದೀಪ್
Follow us
ಮಂಜುನಾಥ ಸಿ.
|

Updated on: Oct 29, 2023 | 11:27 PM

ಸಾಮಾನ್ಯ ಜನರಿಗೆ ವಾರಾಂತ್ಯ ಎಂಬುದು ರಜೆಯ ಸಮಯ ಮೋಜಿನ ಸಮಯ ಆದರೆ ಬಿಗ್​ಬಾಸ್ (Bigg Boss) ಮನೆ ಸ್ಪರ್ಧಿಗಳಿಗೆ ಮೋಜಿನ ಜೊತೆ-ಜೊತೆಗೆ ಭಯದ ದಿನಗಳೂ ಹೌದು. ಏಕೆಂದರೆ ಪ್ರತಿ ವಾರಾಂತ್ಯಕ್ಕೆ ಬಿಗ್​ಬಾಸ್ ಸದಸ್ಯರ ಎದುರು ಹಾಜರಾಗುವ ನಟ ಸುದೀಪ್, ಸ್ಪರ್ಧಿಗಳನ್ನು ನಗಿಸಿ, ಅವರ ತಪ್ಪುಗಳನ್ನು ತಿದ್ದಿ, ಸ್ಪೂರ್ತಿ ತುಂಬಿ ಮುಂದಿನ ವಾರದ ಆಟಕ್ಕೆ ತಯಾರು ಮಾಡುತ್ತಾರೆ. ಆದರೆ ಇದರ ಜೊತೆಗೆ ಪ್ರತಿ ವಾರವೂ ಒಬ್ಬೊಬ್ಬರನ್ನು ತಮ್ಮೊಟ್ಟಿಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಅಂತೆಯೇ ಬಿಗ್​ಬಾಸ್ ಮನೆಯಿಂದ ಈವರೆಗೆ ಇಬ್ಬರನ್ನು ಹೊರಗೆ ಕರೆದುಕೊಂಡು ಹೋಗಿರುವ ಸುದೀಪ್​, ಈ ವಾರಾಂತ್ಯವೂ ಎಲಿಮಿನೇಷನ್ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಶನಿವಾರದ ಎಪಿಸೋಡ್​ನಲ್ಲಿ ಕಾರ್ತಿಕ್ ಸೇರಿದಂತೆ ಕೆಲವರು ನಾಮಿನೇಷನ್​ನಿಂದ ಸೇಫ್ ಆಗಿರುವ ವಿಷಯ ಘೋಷಿಸಿದ್ದ ಸುದೀಪ್, ಭಾನುವಾರದ ಎಪಿಸೋಡ್​ ಅನ್ನು ತಮಾಷೆಯಾಗಿ ಪ್ರಾರಂಭಿಸಿದರು. ತುಕಾಲಿ ಸಂತುವನ್ನು ಮತ್ತೊಮ್ಮೆ ಗೋಳು ಹೊಯ್ದುಕೊಂಡರು. ಆ ಬಳಿಕ ಹೋದ ವಾರ ಆಡಿಸಿದ್ದ ಗಾದೆ ಆಟವನ್ನು ಮುಂದುವರೆಸಿದ ಸುದೀಪ್, ಕಳೆದ ವಾರ ಸದಸ್ಯರಿಗೆ ನೀಡಲಾಗಿದ್ದ ಗಾದೆಯ ಬೋರ್ಡ್​ಗಳನ್ನು ಬೇರೆಯವರಿಗೆ ನೀಡುವಂತೆ ಹೇಳಿದರು ಸುದೀಪ್. ಅಂತೆಯೇ ಮನೆಯ ಸದಸ್ಯರು ತಮಗೆ ನೀಡಿದ ಬೋರ್ಡ್​ಗಳನ್ನು ಬೇರೆ-ಬೇರೆಯವರಿಗೆ ನೀಡಿದರು. ಅದಕ್ಕೆ ತಕ್ಕ ಕಾರಣಗಳನ್ನೂ ಸಹ ನೀಡಿದರು.

ಇದನ್ನೂ ಓದಿ:ಆನೆ ಹೊಡೆಯಲು ಹುರುಪು ತುಂಬಿದ ಸುದೀಪ್: ಬದಲಾಗ್ತಾರಾ ಬಿಗ್​ಬಾಸ್ ಮನೆ ಮಂದಿ

ಸುದೀಪ್​ ಮನೆಯ ಇತರೆ ವಿಷಯಗಳನ್ನು ಮಾತನಾಡಿ ಮತ್ತೆ ಎಲಿಮಿನೇಷನ್​ ಕಡೆಗೆ ಬಂದರು. ಮೊದಲಿಗೆ ಮೈಖಲ್​ರನ್ನು ಎಲಿಮಿನೇಷನ್​ನಿಂದ ಪಾರು ಮಾಡಿದರು. ಬಳಿಕ ಸ್ನೇಹಿತ್​ರನ್ನು ಪಾರು ಮಾಡಿದರು. ಹೀಗೆ ಮಾಡುತ್ತಾ ಕೊನೆಗೆ ಉಳಿದಿದ್ದು ಭಾಗ್ಯಶ್ರೀ ಹಾಗೂ ಇಶಾನಿ. ಭಾಗ್ಯಶ್ರೀ ಅವರಿಗೆ ಬ್ಯಾಡ್​ಲಕ್ ಹೇಳಿದ ಸುದೀಪ್, ನೀವು ಬಿಗ್​ಬಾಸ್​ ಮನೆಯಿಂದ ಈ ವಾರ ಎಲಿಮಿನೇಟ್ ಆಗಿದ್ದೀರಿ ಎಂದರು ಸುದೀಪ್. ಭಾಗ್ಯಶ್ರೀ ಸಹ ಇದನ್ನು ನಿರೀಕ್ಷಿಸಿದ್ದರೇನೋ ಎಂಬಂತೆ ಸಾಮಾನ್ಯವಾಗಿಯೇ ಇದ್ದರು. ಆದರೆ ಕೊನೆಯಲ್ಲಿ ಸುದೀಪ್ ಒಂದು ಟ್ವಿಸ್ಟ್ ಕೊಟ್ಟರು.

ಭಾಗ್ಯಶ್ರೀ ಅವರು ಎಲ್ಲರಿಗೂ ಧನ್ಯವಾದ ಹೇಳಿ ಹೊರ ಹೋದರು. ಆದರೆ ಬಿಗ್​ಬಾಸ್ ಬಾಗಿಲು ತೆಗೆಯಲಿಲ್ಲ. ಆಮೇಲೆ ಸುದೀಪ್ ಧ್ವನಿ ಕೇಳಿ ಬಂತು. ಕೊನೆಯದಾಗಿ ಮೂವರನ್ನು ನೇರವಾಗಿ ನಾಮಿನೇಟ್ ಮಾಡಿ ಹೊರ ಹೋಗಿ ಎಂದರು. ಭಾಗ್ಯಶ್ರೀ ಅವರು ಇಶಾನಿ, ಮೈಖಲ್ ಹಾಗೂ ಡ್ರೋನ್ ಪ್ರತಾಪ್ ಅವರನ್ನು ನಾಮಿನೇಟ್ ಮಾಡಿದರು. ಆದರೆ ಭಾಗ್ಯಶ್ರೀ ಅವರನ್ನು ಮನೆಯ ಹೊರಗೆ ಕಳಿಸಲಿಲ್ಲ ಬಿಗ್​ಬಾಸ್.

‘ಭಾಗ್ಯಶ್ರೀ ಅವರೇ ಈ ವಾರ ನೀವು ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗುತ್ತಿಲ್ಲ. ದಸರಾ ಸಮಯದಲ್ಲಿ ಪ್ರೇಕ್ಷಕ ಪ್ರಭುಗಳು ಈ ಬೇಡಿಕೆ ಇಟ್ಟಿದ್ದರು ಹಾಗಾಗಿ ನಾವದನ್ನು ಈಡೇರಿಸುತ್ತಿದ್ದೀವಿ. ನೀವು ಈ ವಾರ ಹೊರಗೆ ಹೋಗುತ್ತಿಲ್ಲ” ಎಂದರು. ಶೋನ ಕೊನೆಯಲ್ಲಿ ಈ ವಾರ ಹಾಕಿರುವ ಮತಗಳು ವ್ಯರ್ಥವಾಗುವುದಿಲ್ಲ, ಈ ವಾರದ ಮತಗಳು ಮುಂದಿನ ವಾರಕ್ಕೆ ಕಾಯ್ದಿರಿಸಲಾಗುತ್ತದೆ ಎಂದರು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ