Sign In

By signing in or creating an account, you agree with Associated Broadcasting Company's Terms & Conditions and Privacy Policy.

Varthur Santhosh: ಮತ್ತೆ ಬಿಗ್​ ಬಾಸ್​ ಮನೆಗೆ ಬಂದ ವರ್ತೂರು ಸಂತೋಷ್​; ಹುಲಿ ಉಗುರು ಕೇಸ್​ ಬಳಿಕ ಹೊಸ ಆಟ ಶುರು

Varthur Santhosh Bigg Boss re-entry: ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ವರ್ತೂರು ಸಂತೋಷ್​ ಅವರಿಗೆ ಎರಡನೇ ಚಾನ್ಸ್​ ಸಿಕ್ಕಿದೆ. ಈಗ ಅವರು ಮತ್ತೆ ದೊಡ್ಮನೆ ಒಳಗೆ ಪ್ರವೇಶ ಪಡೆದಿದ್ದಾರೆ. ಇಷ್ಟು ದಿನ ತಮ್ಮ ಜೀವನದಲ್ಲಿ ಏನೆಲ್ಲ ಆಯ್ತು ಎಂಬುದನ್ನು ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ರಲ್ಲಿ ಶೇರ್​ ಮಾಡಿಕೊಳ್ಳುತ್ತಾರಾ ಎಂಬ ಕುತೂಹಲ ಮೂಡಿದೆ.

Varthur Santhosh: ಮತ್ತೆ ಬಿಗ್​ ಬಾಸ್​ ಮನೆಗೆ ಬಂದ ವರ್ತೂರು ಸಂತೋಷ್​; ಹುಲಿ ಉಗುರು ಕೇಸ್​ ಬಳಿಕ ಹೊಸ ಆಟ ಶುರು
ವರ್ತೂರು ಸಂತೋಷ್​
Follow us
ಮದನ್​ ಕುಮಾರ್​
|

Updated on:Oct 30, 2023 | 5:42 PM

ಹುಲಿ ಉಗುರು (Tiger Claw Pendant) ಧರಿಸಿದ್ದ ಆರೋಪದ ಮೇಲೆ ಜೈಲು ಸೇರಿದ್ದ ವರ್ತೂರು ಸಂತೋಷ್​ (Varthur Santhosh) ಅವರು ಮತ್ತೆ ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ್ದಾರೆ. ಎರಡನೇ ವಾರದಲ್ಲಿ ಸ್ಪರ್ಧಿಸುತ್ತಿದ್ದ ಅವರನ್ನು ಅರಣ್ಯಾಧಿಕಾರಿಗಳು ಅರೆಸ್ಟ್​ ಮಾಡಿದ್ದರು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆ ಬಳಿಕ ಅವರ ಬಿಗ್​ ಬಾಸ್​ ಗೆಲ್ಲುವ ಕನಸು ಅಂತ್ಯವಾಯ್ತು ಎಂದೇ ಭಾವಿಸಲಾಗಿತ್ತು. ಆದರೆ ಈಗ ಗೇಮ್​ ಚೇಂಜ್​ ಆಗಿದೆ. ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ವರ್ತೂರು ಸಂತೋಷ್​ ಅವರಿಗೆ ಎರಡನೇ ಚಾನ್ಸ್​ ಸಿಕ್ಕಿದೆ. ಈಗ ಅವರು ಮತ್ತೆ ದೊಡ್ಮನೆ ಒಳಗೆ ಪ್ರವೇಶ ಪಡೆದಿದ್ದಾರೆ. ಇಷ್ಟು ದಿನ ತಮ್ಮ ಜೀವನದಲ್ಲಿ ಏನೆಲ್ಲ ಆಯ್ತು ಎಂಬುದನ್ನು ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ರಲ್ಲಿ (Bigg Boss Kannada Season 10) ಶೇರ್​ ಮಾಡಿಕೊಳ್ಳುತ್ತಾರಾ ಎಂಬ ಕುತೂಹಲ ಮೂಡಿದೆ.

ವರ್ತೂರು ಸಂತೋಷ್​ ಅವರು ಹೊರ ಜಗತ್ತಿನ ಸಂಪರ್ಕಕ್ಕೆ ಬಂದು ಮತ್ತೆ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವುದರಿಂದ ಅವರ ಆಟದ ವೈಖರಿ ಬದಲಾಗಲಿದೆ. ವೀಕ್ಷಕರ ಒಲವು ಯಾವ ಕಡೆ ಇದೆ ಎಂಬುದು ಅವರಿಗೆ ಈಗಾಗಲೇ ಅರ್ಥ ಆಗಿರುತ್ತದೆ. ಅದಕ್ಕೆ ತಕ್ಕಂತೆಯೇ ಅವರು ಆಟ ಮುಂದುವರಿಸುತ್ತಾರೆ. ಇದರಿಂದ ಇನ್ನುಳಿದ ಸ್ಪರ್ಧಿಗಳ ಆಟದ ಮೇಲೆ ಪರಿಣಾಮ ಬೀರುತ್ತದೆ. ಇನ್ನೂ ಎಷ್ಟು ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ ಇರಲಿದ್ದಾರೆ ಎಂಬುದನ್ನು ಕಾಡು ನೋಡಬೇಕು.

ಇದನ್ನೂ ಓದಿ: ಜೈಲಿಂದ ಹೊರಬಂದ ವರ್ತೂರು ಸಂತೋಷ್​ಗೆ ಸಿಕ್ಕ ಅದ್ಧೂರಿ ಸ್ವಾಗತ ಹೀಗಿತ್ತು ನೋಡಿ

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಕಾರ್ಯಕ್ರಮಕ್ಕೆ ವರ್ತೂರು ಸಂತೋಷ್​ ಅವರು ವಾಪಸ್​ ಬಂದ ಎಪಿಸೋಡ್​ ಇಂದು (ಅಕ್ಟೋಬರ್​ 30) ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಜಿಯೋ ಸಿನಿಮಾ ಒಟಿಟಿ ಮೂಲಕ ದಿನ 24 ಗಂಟೆಯೂ ಲೈವ್ ನೋಡಬಹುದು. ವರ್ತೂರು ಸಂತೋಷ್​ ಅವರ ಎಗ್ಸಿಟ್​ ಮತ್ತು ರೀ-ಎಂಟ್ರಿ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಈವರೆಗೂ ಯಾರೂ ಚರ್ಚೆ ಮಾಡಿಲ್ಲ. ಈಗ ಆ ಕುರಿತು ಮಾತುಕಥೆ ಆಗುವ ನಿರೀಕ್ಷೆ ಇದೆ. ಕಾನೂನಿನ ವಿಷಯ ಆದ್ದರಿಂದ ವರ್ತೂರು ಸಂತೋಷ್​ ಅವರು ಮೌನ ವಹಿಸಲೂಬಹುದು.

ದಿನದಿಂದ ದಿನಕ್ಕೆ ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧೆಯ ಕಾವು ಹೆಚ್ಚಾಗುತ್ತಿದೆ. ಈಗಾಗಲೇ ಎರಡು ಎಲಿಮಿನೇಷನ್​ ನಡೆದಿದೆ. ದಸರಾ ಹಬ್ಬದ ಪ್ರಯುಕ್ತ ಮೂರನೇ ವಾರದ ಎಲಿಮಿನೇಷನ್​ ಪ್ರಕ್ರಿಯೆ ಮುಂದಕ್ಕೆ ಹೋಗಿದೆ. ಕಾರ್ತಿಕ್​ ಮಹೇಶ್​, ವಿಜಯ್​ ಗೌಡ, ಪ್ರತಾಪ್​, ರಕ್ಷಕ್​​, ಮೈಕೆಲ್​ ಅಜಯ್​, ಈಶಾನಿ, ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್​ ಮುಂತಾದ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:36 pm, Mon, 30 October 23

ಶಿವರಾತ್ರಿಯ ಆಚರಣೆಯ ಮಹತ್ವ ಹಾಗೂ ಇದರ ಹಿಂದಿನ ರಹಸ್ಯ ತಿಳಿಯಿರಿ
ಶಿವರಾತ್ರಿಯ ಆಚರಣೆಯ ಮಹತ್ವ ಹಾಗೂ ಇದರ ಹಿಂದಿನ ರಹಸ್ಯ ತಿಳಿಯಿರಿ
Maha Shivratri Daily Horoscope: ಮಹಾಶಿವರಾತ್ರಿ, ಈ ದಿನದ ರಾಶಿ ಭವಿಷ್ಯ
Maha Shivratri Daily Horoscope: ಮಹಾಶಿವರಾತ್ರಿ, ಈ ದಿನದ ರಾಶಿ ಭವಿಷ್ಯ
ಮುಂಬೈನ ಮಂತ್ರಾಲಯದ 7ನೇ ಮಹಡಿಯಿಂದ ಹಾರಿದ ವ್ಯಕ್ತಿ; ವಿಡಿಯೋ ವೈರಲ್
ಮುಂಬೈನ ಮಂತ್ರಾಲಯದ 7ನೇ ಮಹಡಿಯಿಂದ ಹಾರಿದ ವ್ಯಕ್ತಿ; ವಿಡಿಯೋ ವೈರಲ್
ಎಲ್ಲರೂ ಇಂಥ ಮನಸ್ಥಿತಿ ಹೊಂದಿದ್ದರೆ ತಂಟೆ-ತಗಾದೆ ಸೃಷ್ಟಿಯಾಗಲಾರವು
ಎಲ್ಲರೂ ಇಂಥ ಮನಸ್ಥಿತಿ ಹೊಂದಿದ್ದರೆ ತಂಟೆ-ತಗಾದೆ ಸೃಷ್ಟಿಯಾಗಲಾರವು
ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​