AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮುಚ್ಕೊಂಡು ಇರಿ’; ಹೈಲೈಟ್ ಆಗಲು ಕೂಗಾಡುತ್ತಿದ್ದಾರೆ ಕಾರ್ತಿಕ್?

ಈ ವಾರ ನೀತು ವನಜಾಕ್ಷಿ ಕ್ಯಾಪ್ಟನ್. ಅವರು ಅಡುಗೆ ಮನೆಯ ಜವಾಬ್ದಾರಿಯನ್ನು ಕೆಲವರಿಗೆ ವಹಿಸಿದ್ದರು. ಇದರಲ್ಲಿ ಕಾರ್ತಿಕ್ ಕೂಡ ಇದ್ದರು. ಕೆಲವು ವಿಚಾರದಲ್ಲಿ ಅವರಿಗೆ ಅಸಮಾಧಾನ ಎದ್ದಿತ್ತು. ಇದನ್ನು ಅವರು ನೀತು ಬಳಿ ಪ್ರಶ್ನೆ ಮಾಡಿದ್ದಾರೆ.

‘ಮುಚ್ಕೊಂಡು ಇರಿ’; ಹೈಲೈಟ್ ಆಗಲು ಕೂಗಾಡುತ್ತಿದ್ದಾರೆ ಕಾರ್ತಿಕ್?
ಕಾರ್ತಿಕ್
Follow us
ರಾಜೇಶ್ ದುಗ್ಗುಮನೆ
|

Updated on: Oct 31, 2023 | 7:43 AM

ಬಿಗ್ ಬಾಸ್ ಮನೆಯಲ್ಲಿ ಕಳೆದ ಮೂರು ವಾರಗಳಲ್ಲಿ ವಿನಯ್ ಗೌಡ (Vinay Gowda) ಏರು ಧ್ವನಿಯಲ್ಲಿ ಮಾತನಾಡಿದ್ದರು. ಈ ವಿಚಾರವನ್ನು ಸುದೀಪ್ ಮೆಚ್ಚಿಕೊಂಡಿದ್ದರು. ವಿನಯ್ ಅವರನ್ನು ಕಂಡರೆ ಮನೆಯವರಿಗೆ ಭಯ ಎಂಬುದನ್ನು ಸುದೀಪ್ ಸಾಕ್ಷಿ ಸಮೇತ ಸಾಬೀತು ಮಾಡಿದ್ದರು. ಇದರಿಂದ ಮನೆ ಮಂದಿ ಎಲ್ಲರೂ ಪ್ರಭಾವಿತರಾದಂತಿದೆ. ಅದರಲ್ಲೂ ಕಾರ್ತಿಕ್ ಮಹೇಶ್ ಅವರು ನಾಲ್ಕನೇ ವಾರದ ಮೊದಲ ದಿನವೇ ಅರಚಾಟ ಶುರು ಹಚ್ಚಿಕೊಂಡಿದ್ದಾರೆ. ಸುಖಾ ಸುಮ್ಮನೆ ಕಿರುಚಾಡಿದ್ದಾರೆ. ಈ ವಿಚಾರದಲ್ಲಿ ವಿನಯ್ ಅವರು ಕಾರ್ತಿಕ್​ಗೆ ಬುದ್ಧಿವಾದ ಹೇಳಿದ್ದಾರೆ.

ಈ ವಾರ ನೀತು ವನಜಾಕ್ಷಿ ಕ್ಯಾಪ್ಟನ್. ಅವರು ಅಡುಗೆ ಮನೆಯ ಜವಾಬ್ದಾರಿಯನ್ನು ಕೆಲವರಿಗೆ ವಹಿಸಿದ್ದರು. ಇದರಲ್ಲಿ ಕಾರ್ತಿಕ್ ಕೂಡ ಇದ್ದರು. ಕೆಲವು ವಿಚಾರದಲ್ಲಿ ಅವರಿಗೆ ಅಸಮಾಧಾನ ಎದ್ದಿತ್ತು. ಇದನ್ನು ಅವರು ನೀತು ಬಳಿ ಪ್ರಶ್ನೆ ಮಾಡಿದ್ದಾರೆ. ಕಾರ್ತಿಕ್ ಅವರು ಈ ರೀತಿ ಆಡಲು ಬೇರೆಯವರ ಪ್ರಭಾವ ಇದೆ ಎಂಬುದು ನೀತು ವಾದ. ಈ ಕಾರಣದಿಂದಲೇ ಕಾರ್ತಿಕ್ ಅವರನ್ನು ಹಿತ್ತಾಳೆ ಕಿವಿ ಎಂದು ಕರೆದರು ನೀತು. ಇದು ಕಾರ್ತಿಕ್ ಕೋಪಕ್ಕೆ ಕಾರಣವಾಯ್ತು. ಸೂಜಿಲಿ ಹೋಗುವುದಕ್ಕೆ ಕೊಡಲಿ ಎತ್ತಿಕೊಂಡರು ಕಾರ್ತಿಕ್.

ಕಾರ್ತಿಕ್ ಅವರು ಏಕಾಏಕಿ ನೀತು ವಿರುದ್ಧ ಗರಂ ಆದರು. ಜೋರು ಜೋರಾಗಿ ಕೂಗಾಟ ನಡೆಸಿದರು. ನೀತುಗೆ ಎಚ್ಚರಿಕೆಯನ್ನೂ ನೀಡಿದರು. ಇದೆಲ್ಲವನ್ನೂ ವಿನಯ್ ಹಾಗೂ ಸಂಗೀತಾ ಶೃಂಗೇರಿ ಗಮನಿಸುತ್ತಾ ಇದ್ದರು. ಅವರು ಕರೆದು ಕಾರ್ತಿಕ್​​ಗೆ ಬುದ್ಧಿವಾದ ಹೇಳಿದ್ದಾರೆ. ಈ ರೀತಿ ನಡೆದುಕೊಳ್ಳಬಾರದು ಎಂದು ತಿದ್ದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ ಮನೆಗೆ ಬಂದು ಎರಡು ಲಕ್ಷ ರೂಪಾಯಿ ಕಳೆದುಕೊಂಡ ತುಕಾಲಿ ಸಂತೋಷ್

‘ಈ ರೀತಿ ಅರಚಾಡಿದರೆ ನೀನೆ ಕೆಟ್ಟವನಾಗೋದು. ಇದರ ಬದಲು ನಿಧಾನವಾಗಿ ಅವರ ಬಳಿ ಕೇಳು. ನನಗೆ ಏಕೆ ಹಿತ್ತಾಳೆ ಕಿವಿ ಎಂದೆ ಎಂದು ಪ್ರಶ್ನೆ ಮಾಡು. ಉತ್ತರ ಬರದೇ ಇದ್ದರೆ ಪದೇ ಪದೇ ಇದನ್ನೇ ಕೇಳು. ಈ ರೀತಿ ಅರಚಬೇಡ. ಕೆಟ್ಟವನಾಗೋಕೆ ಹೋಗಬೇಡ’ ಎಂದು ಕಾರ್ತಿಕ್​ಗೆ ವಿನಯ್ ಹೇಳಿದ್ದಾರೆ. ಕಾರ್ತಿಕ್ ಅವರು ಅಳೋಕೆ ಆರಂಭಿಸಿದರು. ಸಂಗೀತಾ ಅವರು ಸಮಾಧಾನ ಮಾಡಿದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ