ಜೈಲಿಂದ ಹೊರಬಂದ ವರ್ತೂರು ಸಂತೋಷ್ಗೆ ಸಿಕ್ಕ ಅದ್ಧೂರಿ ಸ್ವಾಗತ ಹೀಗಿತ್ತು ನೋಡಿ
Varthuru Santhosh: ಹುಲಿ ಉಗುರು ಹೊಂದಿದ ಆರೋಪದಲ್ಲಿ ಜೈಲು ಸೇರಿದ್ದ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಇಂದು (ಅಕ್ಟೋಬರ್ 27) ಜೈಲಿನಿಂದ ಬಿಡುಗಡೆ ಆಗಿದ್ದು ಅವರಿಗೆ ದೊರೆತ ಸ್ವಾಗತ ಹೀಗಿತ್ತು ನೋಡಿ...
ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ವರ್ತೂರು ಸಂತೋಷ್ಗೆ (Varthur Santhosh) ಇಂದು (ಅಕ್ಟೋಬರ್ 27) ಜಾಮೀನು ದೊರೆತು, ಸಂಜೆ ವೇಳೆಗೆ ಬಿಡುಗಡೆ ಆಗಿದ್ದಾರೆ. ಬಿಡುಗಡೆ ಆಗಿ ಜೈಲಿನಿಂದ ಹೊರಬರುತ್ತಿದ್ದಂತೆ ವರ್ತೂರು ಸಂತೋಷ್ಗೆ ಅದ್ಧೂರಿ ಸ್ವಾಗತ ದೊರೆತಿದೆ. ಶಾಲ, ಹಾರ, ಪೇಟಗಳನ್ನು ಹಾಕಿ ಜಯಘೋಷಗಳೊಂದಿಗೆ ಸಂತೋಷ್ ಅವರನ್ನು ಬರಮಾಡಿಕೊಳ್ಳಲಾಗಿದೆ. ಖುಷಿಯಿಂದಲೇ ಸ್ವಾಗತ ಸ್ವೀಕರಿಸಿದ ಸಂತೋಷ್, ತಮ್ಮ ವಕೀಲರು ಹಾಗೂ ಗೆಳೆಯರೊಟ್ಟಿಗೆ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅವರು ಮತ್ತೆ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆಯೇ ಎಂಬ ಪ್ರಶ್ನೆಗೆ ಇನ್ನಷ್ಟೆ ಉತ್ತರ ಸಿಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

