ಬಂಡಿಪುರ ಅಭಯಾರಣ್ಯದಲ್ಲಿ ತಂಟೆಗೆ ಬಂದ ಹುಲಿಯನ್ನು ಒಂಟಿ ಆನೆ ಹೇಗೆ ಓಡಿಸಿತು ಗೊತ್ತಾ? ವಿಡಿಯೋ ನೋಡಿ
ಹುಲಿ ಅಥವಾ ಹುಲಿಗಳ ಗುಂಪು ಒಂಟಿ ಆನೆಯ ಮೇಲೆ ಆಕ್ರಮಣ ನಡೆಸುವ ಪ್ರಯತ್ನದ ವಿಡಿಯೋಗಳು ಅಪರೂಕ್ಕೊಮ್ಮೆ ಸಿಗುತ್ತವೆ. ಅದರೆ ಆನೆ ಸೊಂಡಿಲೆತ್ತಿ ಘೀಳಿಡುತ್ತಲೇ ಹುಲಿಗಳು ದಿಕ್ಕಾಪಾಲಾಗಿ ಓಡುತ್ತವೆ. ಕಾಡಿನ ರಾಜ ಸಿಂಹದ್ದೂ ಅದೇ ಕತೆ, ರಾಜ ಭಾರೀ ಗಾತ್ರದ ಪ್ರಜೆಯ ತಂಟೆಗೆ ಹೋಗಲ್ಲ.
ಚಾಮರಾಜನಗರ: ಇತ್ತ ನಾಡಿನಲ್ಲಿ ಹುಲಿಯ ಉಗುರಿನ (tiger claw) ಪೆಂಡೆಂಟ್ ಬಗ್ಗೆ ದಿನವಿಡೀ ಚರ್ಚೆ ಮತ್ತು ಸೆಲಿಬ್ರಿಟಿಗಳೂ ಸೇರಿದಂತೆ ಹಲವಾರು ಜನರ ಮನೆಗಳ ಮೇಲೆ ಅರಣ್ಯಾಧಿಕಾರಿಗಳ ರೇಡ್ ನಡೆಯುತ್ತಿದ್ದರೆ ಅತ್ತ ಕಾಡಿನಲ್ಲಿ ಆನೆಯೊಂದರ (elephant) ಕೋಪಕ್ಕೆ ತುತ್ತಾಗಿರುವ ಹುಲಿಯೊಂದು ಬಿದ್ನೋ ಸತ್ತೆನೋ ಅಂತ ಬಾಲ ಎತ್ತಿಕೊಂಡು ದಟ್ಟ ಕಾಡಿನೊಳಗೆ ಓಡುತ್ತಿರುವ ದೃಶ್ಯದ ವಿಡಿಯೋ ವೈರಲ್ ಆಗುತ್ತಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ಪ್ರದೇಶದಲ್ಲಿ (Bandipur Tiger Reserve) ನಡೆದಿರುವ ಘಟನೆಯನ್ನು ಸಫಾರಿಗೆಂದು ತೆರಳಿದ್ದ ಪ್ರವಾಸಿಗಳಲ್ಲೊಬ್ಬರು ತಮ್ಮ ಮೊಬೈಲ್ ಕೆಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾನ್ಯವಾಗಿ ಹುಲಿಗಳು ಆನೆಗಳ ಜೊತೆ ಅಂತರ ಕಾಯ್ದುಕೊಳ್ಳುತ್ತವೆ. ಆನೆಗಳ ಗಾತ್ರ ಸಹಜವಾಗೇ ಹುಲಿಗಳಲ್ಲಿ ಭೀತಿ ಮೂಡಿಸುತ್ತದೆ. ಹುಲಿ ಅಥವಾ ಹುಲಿಗಳ ಗುಂಪು ಒಂಟಿ ಆನೆಯ ಮೇಲೆ ಆಕ್ರಮಣ ನಡೆಸುವ ಪ್ರಯತ್ನದ ವಿಡಿಯೋಗಳು ಅಪರೂಕ್ಕೊಮ್ಮೆ ಸಿಗುತ್ತವೆ. ಅದರೆ ಆನೆ ಸೊಂಡಿಲೆತ್ತಿ ಘೀಳಿಡುತ್ತಲೇ ಹುಲಿಗಳು ದಿಕ್ಕಾಪಾಲಾಗಿ ಓಡುತ್ತವೆ. ಕಾಡಿನ ರಾಜ ಸಿಂಹದ್ದೂ ಅದೇ ಕತೆ, ರಾಜ ಭಾರೀ ಗಾತ್ರದ ಪ್ರಜೆಯ ತಂಟೆಗೆ ಹೋಗಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ