AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್ ಅಮ್ಮ ಬಹಳ ಆತಂಕದಲ್ಲಿದ್ದರು, ಈಗ ಅವರಿಗೆ ನೆಮ್ಮದಿ ಸಿಕ್ಕಿದೆ: ಸಂತೋಷ್ ದೊಡ್ಡಪ್ಪ

ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್ ಅಮ್ಮ ಬಹಳ ಆತಂಕದಲ್ಲಿದ್ದರು, ಈಗ ಅವರಿಗೆ ನೆಮ್ಮದಿ ಸಿಕ್ಕಿದೆ: ಸಂತೋಷ್ ದೊಡ್ಡಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on:Oct 27, 2023 | 5:27 PM

Share

ರೈತಾಪಿ ಹುಡುಗ, ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿರುವಾಗಲೇ ಹೀಗಾಯಿತಲ್ಲ ಮನೆಯಲ್ಲಿ ಎಲ್ಲರೂ ದುಃಖದಲ್ಲಿದ್ದರು, ಆದರೆ ಅವನು ಈಗ ಬಿಡುಗಡೆಯಾಗುತ್ತಿರೋದು ಸಂತೋಷವನ್ನುಂಟು ಮಾಡಿದೆ ಎಂದು ಅವರು ಹೇಳಿದರು. ಪುನಃ ಸಂತೋಷ್ ಬಿಗ್ ಬಾಸ್ ಗೆ ಹೋಗ್ತಾರಾ? ಅಂತ ಕೇಳಿದ ಪ್ರಶ್ನೆಗೆ ರಮೇಶ್, ಬಿಗ್ ಬಾಸ್ ಟೀಮ್ ಬಂದು ಕರೆದರೆ ಖಂಡಿತ ಕಳಿಸ್ತೀವಿ ಅಂತ ಹೇಳಿದರು.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ ಗೆ (Varthur Santosh) ನ್ಯಾಯ ಸಮತ್ತು ಷರತ್ತುಬದ್ಧ ಜಾಮೀನು (conditional bail) ಎರಡೂ ಸಿಕ್ಕಿವೆ. ಸಹಜವಾಗೇ ಅವರ ಕುಟುಂಬ ಅಪರಿಮಿತ ಸಂತೋಷದಲ್ಲಿದೆ. ನ್ಯಾಯಾಲಯದ ತೀರ್ಪಿನ ಬಳಿಕ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಸಂತೋಷ್ ಅವರ ದೊಡ್ಡಪ್ಪ ರಮೇಶ್ (Ramesh) ಹರ್ಷ ವ್ಯಕ್ತಪಡಿಸುತ್ತಾ ನಾಡಿನ ಕಾನೂನು ವ್ಯವಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಕಳೆದ 4 ದಿನಗಳಿಂದ ಸಂತೋಷ್ ತಾಯಿ ಅತೀವ ವೇದನೆಯಲ್ಲಿದ್ದರು, ಇವತ್ತು ನೆಮ್ಮದಿಯಿಂದ ಉಸಿರಾಡುತ್ತಿದ್ದಾರೆ ಎಂದು ರಮೇಶ್ ಹೇಳಿದರು. ರೈತಾಪಿ ಹುಡುಗ, ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿರುವಾಗಲೇ ಹೀಗಾಯಿತಲ್ಲ ಮನೆಯಲ್ಲಿ ಎಲ್ಲರೂ ದುಃಖದಲ್ಲಿದ್ದರು, ಆದರೆ ಅವನು ಈಗ ಬಿಡುಗಡೆಯಾಗುತ್ತಿರೋದು ಸಂತೋಷವನ್ನುಂಟು ಮಾಡಿದೆ ಎಂದು ಅವರು ಹೇಳಿದರು. ಪುನಃ ಸಂತೋಷ್ ಬಿಗ್ ಬಾಸ್ ಗೆ ಹೋಗ್ತಾರಾ? ಅಂತ ಕೇಳಿದ ಪ್ರಶ್ನೆಗೆ ರಮೇಶ್, ಬಿಗ್ ಬಾಸ್ ಟೀಮ್ ಬಂದು ಕರೆದರೆ ಖಂಡಿತ ಕಳಿಸ್ತೀವಿ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 27, 2023 05:20 PM