AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ರತಾ ಗೌಡ ಬಗ್ಗೆ ಸ್ನೇಹಿತ್​ ಮನಸ್ಸಿನಲ್ಲಿ ಮೂಡಿದೆಯಾ ಪ್ರೀತಿ? ಇಲ್ಲಿದೆ ವಿಡಿಯೋ ಸಾಕ್ಷಿ

ನಮ್ರತಾ ಗೌಡ ಬಗ್ಗೆ ಸ್ನೇಹಿತ್​ ಮನಸ್ಸಿನಲ್ಲಿ ಮೂಡಿದೆಯಾ ಪ್ರೀತಿ? ಇಲ್ಲಿದೆ ವಿಡಿಯೋ ಸಾಕ್ಷಿ

ಮದನ್​ ಕುಮಾರ್​
|

Updated on: Oct 26, 2023 | 4:19 PM

Share

ಸ್ನೇಹಿತ್​ ಅವರ ಮನದಲ್ಲಿ ನಮ್ರತಾ ಗೌಡ ಬಗ್ಗೆ ವಿಶೇಷ ಭಾವನೆ ಹುಟ್ಟಿಕೊಂಡಿರಬಹುದೇ ಎಂಬ ಅನುಮಾನ ಎಲ್ಲರಿಗೂ ಮೂಡಿದೆ. ಹಾಗಾಗಿ ಬಿಗ್​ ಬಾಸ್​ ಮನೆಯಲ್ಲಿ ಇರುವ ಇತರ ಸ್ಪರ್ಧಿಗಳು ಸ್ನೇಹಿತ್​ನ ಕಾಲು ಎಳೆದಿದ್ದಾರೆ. ಪದೇ ಪದೇ ನಮ್ರತಾ ಗೌಡ ಹೆಸರು ಹೇಳಿದ್ದಕ್ಕೆ ಸ್ನೇಹಿತ್​ ನಾಚಿಕೊಂಡಿದ್ದಾರೆ. ಆ ಕ್ಷಣದ ವಿಡಿಯೋ ಇಲ್ಲಿದೆ.

ಕಿರುತೆರೆಯ ಅನೇಕರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ‘ನಾಗಿಣಿ’ ಸೀರಿಯಲ್​ ಖ್ಯಾತಿಯ ನಮ್ರತಾ ಗೌಡ ಅವರು ಹಲವು ಕಾರಣದಿಂದ ಗಮನ ಸೆಳೆಯುತ್ತಿದ್ದಾರೆ. ಅದೇ ರೀತಿ ಸ್ನೇಹಿತ್​ (Snehith) ಕೂಡ ಹೈಲೈಟ್​ ಆಗುತ್ತಿದ್ದಾರೆ. ದೊಡ್ಮನೆಯೊಳಗೆ ಸ್ಪರ್ಧಿಗಳ ನಡುವೆ ಪ್ರೀತಿ ಚಿಗುರಿದ ಅನೇಕ ನಿದರ್ಶನಗಳಿವೆ. ಈಗ ಸ್ನೇಹಿತ್​ ಅವರ ಮನದಲ್ಲಿ ನಮ್ರತಾ ಗೌಡ ಬಗ್ಗೆ ವಿಶೇಷ ಭಾವನೆ ಹುಟ್ಟಿಕೊಂಡಿರಬಹುದೇ ಎಂಬ ಅನುಮಾನ ಎಲ್ಲರಿಗೂ ಮೂಡಿದೆ. ಹಾಗಾಗಿ ಬಿಗ್​ ಬಾಸ್​ ಮನೆಯಲ್ಲಿ ಇರುವ ಇತರ ಸ್ಪರ್ಧಿಗಳು ಸ್ನೇಹಿತ್​ನ ಕಾಲು ಎಳೆದಿದ್ದಾರೆ. ಪದೇ ಪದೇ ನಮ್ರತಾ ಗೌಡ ಹೆಸರು ಹೇಳಿದ್ದಕ್ಕೆ ಸ್ನೇಹಿತ್​ ನಾಚಿಕೊಂಡಿದ್ದಾರೆ. ತಾವು ರಾಖಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಕೂಡ ಸ್ನೇಹಿತ್​ ಹೇಳಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡು ನಮ್ರತಾ ಗೌಡ (Namratha Gowda) ಅವರು ಕೋಪಗೊಂಡಂತೆ ನಟಿಸಿದ್ದಾರೆ. ಇದರಿಂದ ಸ್ನೇಹಿತ್​ ಅವರು ಪೇಚಿಗೆ ಸಿಲುಕಿದ್ದಾರೆ. ಈ ಕ್ಷಣದ ವಿಡಿಯೋ ಇಲ್ಲಿದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ ಶೋ ಪ್ರತಿ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ 24 ಗಂಟೆ ಲೈವ್​ ನೋಡಲು ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More