ಎಲಿಮಿನೇಷನ್​ ಬಗ್ಗೆ ರಕ್ಷಕ್​ಗೆ ಮೊದಲೇ ಸೂಚನೆ ಕೊಟ್ಟಿದ್ದ ಕಿಚ್ಚ ಸುದೀಪ್; ಮೊದಲ ನಾಮಿನೇಷನ್​ನಲ್ಲೇ ಔಟ್

ಹೊರಗೆ ತೋರಿಸಿದಷ್ಟು ಉತ್ಸಾಹವನ್ನು ಅವರು ಬಿಗ್ ಬಾಸ್​ನಲ್ಲಿ ತೋರಿಸಿಲ್ಲ. ಬೇರೆಯವರ ನೆರಳಲ್ಲಿ ಅವರಿದ್ದರು ಎಂದರೂ ತಪ್ಪಾಗಲಾರದು. ಇದು ಅವರಿಗೆ ಮುಳುವಾಗಿದೆ. ಅವರ ಎಲಿಮಿನೇಷನ್ ಅನೇಕರಿಗೆ ಶಾಕ್ ತಂದಿದೆ.

ಎಲಿಮಿನೇಷನ್​ ಬಗ್ಗೆ ರಕ್ಷಕ್​ಗೆ ಮೊದಲೇ ಸೂಚನೆ ಕೊಟ್ಟಿದ್ದ ಕಿಚ್ಚ ಸುದೀಪ್; ಮೊದಲ ನಾಮಿನೇಷನ್​ನಲ್ಲೇ ಔಟ್
ಪ್ರತಾಪ್-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on:Nov 06, 2023 | 7:49 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ನಾಲ್ಕು ವಾರಗಳು ಪೂರ್ಣಗೊಂಡಿವೆ. ಕಿಚ್ಚ ಸುದೀಪ್ ಅವರು ಎಂದಿನ ಜೋಶ್​ನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ವೀಕೆಂಡ್​ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು ಸುದೀಪ್ (Sudeep). ಈ ಮೂಲಕ ಮನೆಯಲ್ಲಿ ನಡೆಯುತ್ತಿದ್ದ ಗುಂಪುಗಾರಿಕೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ. ಭಾನುವಾರ (ನವೆಂಬರ್ 5) ಬುಲೆಟ್ ರಕ್ಷಕ್ ಅವರು ಎಲಿಮಿನೇಟ್ ಆಗಿದ್ದಾರೆ. ಮೊದಲ ಮೂರು ವಾರ ಅವರು ನಾಮಿನೇಷನ್​ನಿಂದ ತಪ್ಪಿಸಿಕೊಂಡಿದ್ದರು. ಕಳೆದ ವಾರ ಅವರು ಮೊದಲ ಬಾರಿ ನಾಮಿನೇಷನ್ ಆಗಿದ್ದರು. ಮೊದಲ ನಾಮಿನೇಷನ್​ನಲ್ಲೇ ಅವರು ದೊಡ್ಮನೆಯಿಂದ ಹೊರಹೋಗಿದ್ದಾರೆ.

ರಕ್ಷಕ್ ತಮ್ಮನ್ನು ತಾವು ‘ಆರ್​ ಬಾಸ್’ ಎಂದು ಕರೆದುಕೊಂಡಿದ್ದಾರೆ. ಹೊರಗೆ ತೋರಿಸಿದಷ್ಟು ಉತ್ಸಾಹವನ್ನು ಅವರು ಬಿಗ್ ಬಾಸ್​ನಲ್ಲಿ ತೋರಿಸಿಲ್ಲ. ಬೇರೆಯವರ ನೆರಳಲ್ಲಿ ಅವರಿದ್ದರು ಎಂದರೂ ತಪ್ಪಾಗಲಾರದು. ಇದು ಅವರಿಗೆ ಮುಳುವಾಗಿದೆ. ಅವರ ಎಲಿಮಿನೇಷನ್ ಅನೇಕರಿಗೆ ಶಾಕ್ ತಂದಿದೆ. ಅವರು ಎಲಿಮಿನೇಟ್ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಶನಿವಾರದ (ನವೆಂಬರ್ 4) ಎಪಿಸೋಡ್​ನಲ್ಲಿ ಮನೆ ಮಂದಿಗೆ ಸುದೀಪ್ ಪ್ರಶ್ನೆ ಒಂದನ್ನು ಕೇಳಿದ್ದರು. ಕಳೆದ ವಾರಕ್ಕೂ ಈ ವಾರಕ್ಕೂ ಇರುವ ವ್ಯತ್ಯಾಸ ಏನು ಎಂದು ಪ್ರಶ್ನಿಸಿದ್ದರು. ರಕ್ಷಕ್ ಅವರು, ‘ನಾನು ಕಳೆದ ವಾರ ಇರುವ ರೀತಿಯಲ್ಲೇ ಇದ್ದೇನೆ’ ಎಂದು ಉತ್ತರಿಸಿದ್ದರು. ‘ಬಹಳ ಸಂತೋಷ. ಹೀಗೆಯೇ ಇರಿ. ನಮಗೂ ಎಲಿಮಿನೇಷನ್​ ತುಂಬಾ ಸುಲಭ ಆಗುತ್ತದೆ. ಬೇಗ ಬೇಗ ಎಲ್ಲರನ್ನೂ ಹೊರ ಕಳಿಸಬಹುದು’ ಎಂದಿದ್ದರು.

ಇದನ್ನೂ ಓದಿ: ನಾನು, ಪ್ರತಾಪ್, ರಕ್ಷಕ್ ಬೆಸ್ಟ್ ಕಾಂಬಿನೇಷನ್ ಎಂದ ಪ್ರಥಮ್

ಅಕ್ಟೋಬರ್ ಅಂತ್ಯದಲ್ಲಿ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ ಅವರು ರಕ್ಷಕ್​ಗೆ ಬದಲಾಗುವಂತೆ ಹೇಳಿದ್ದರು. ‘ಹೊರಗೆ ಬುಲೆಟ್ ಮಾಡಿದಷ್ಟು ಸದ್ದು ಮನೆಯಲ್ಲಿ ಮಾಡುತ್ತಿಲ್ಲ’ ಎಂದು ಹೇಳುವ ಮೂಲಕ ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ, ರಕ್ಷಕ್ ಬದಲಾಗಲೇ ಇಲ್ಲ. ಇದು ಅವರಿಗೆ ಮುಳುವಾಗಿದೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಹಾಗೂ ಲೈವ್ ವೀಕ್ಷಿಸುವ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:04 am, Mon, 6 November 23

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು