AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK 10: ವೀಕೆಂಡ್ ಬಂದರೆ ಸಾಕು ಅಮಾಯಕನಂತೆ ವರ್ತಿಸುತ್ತಾರೆ ತುಕಾಲಿ ಸಂತೋಷ್; ಬಣ್ಣ ಬಯಲು ಮಾಡಿದ ಸುದೀಪ್

Bigg Boss Kannada Season 10: ಸಂತೋಷ್ ಅವರು ‘ಕಾಮಿಡಿ ಕಿಲಾಡಿಗಳು’ ಮೂಲಕ ಜನಪ್ರಿಯತೆ ಪಡೆದವರು. ಅವರು ಮಂಜು ಪಾವಗಡ  ರೀತಿಯೇ ಕಾಮಿಡಿ ಮಾಡಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ದಿನ ಕಳೆದಂತೆ ಸಂತು ಅವರ ನಿಜವಾದ ಬಣ್ಣ ಗೊತ್ತಾಗೋಕೆ ಶುರುವಾಯಿತು. ಅವರ ವರ್ತನೆ ಅನೇಕರಿಗೆ ಬೇಸರ ಮೂಡಿಸಿದೆ.

BBK 10: ವೀಕೆಂಡ್ ಬಂದರೆ ಸಾಕು ಅಮಾಯಕನಂತೆ ವರ್ತಿಸುತ್ತಾರೆ ತುಕಾಲಿ ಸಂತೋಷ್; ಬಣ್ಣ ಬಯಲು ಮಾಡಿದ ಸುದೀಪ್
ತುಕಾಲಿ ಸಂತೋಷ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 06, 2023 | 12:17 PM

Share

ತುಕಾಲಿ ಸಂತೋಷ್ ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಅಷ್ಟೇ ಅಲ್ಲ ಅವರಿಂದ ಸಾಕಷ್ಟು ಹಾಸ್ಯ, ಮನರಂಜನೆ ಸಿಗಬಹುದು ಎನ್ನುವ ನಿರೀಕ್ಷೆಯೂ ಇತ್ತು. ಆದರೆ ಅದು ಸುಳ್ಳಾಗಿದೆ. ಅವರು ಮನರಂಜನೆ ನೀಡೋಕೆ ವಿಫಲರಾಗುತ್ತಿದ್ದಾರೆ. ಗ್ರೂಪ್​ನಲ್ಲಿ ವಿನಯ್ ಅವರನ್ನು ಬೆಂಬಲಿಸುತ್ತಾ ದಿನ ಕಳೆಯುತ್ತಿದ್ದಾರೆ. ಸಂತೋಷ್ ಅವರನ್ನು ನೋಡಿದ ಅನೇಕರು ಒಂದು ಪ್ರಮುಖ ವಿಚಾರವನ್ನು ಗಮನಿಸಿದ್ದಾರೆ. ವಾರದ ದಿನದಲ್ಲಿ ಒಂದು ರೀತಿ ಇರುವ ಅವರು ವೀಕೆಂಡ್​ನಲ್ಲಿ ತಮ್ಮ ಮತ್ತೊಂದು ಮುಖ ತೋರಿಸುತ್ತಾರೆ.

ಸಂತೋಷ್ ಅವರು ‘ಕಾಮಿಡಿ ಕಿಲಾಡಿಗಳು’ ಮೂಲಕ ಜನಪ್ರಿಯತೆ ಪಡೆದವರು. ಅವರು ಮಂಜು ಪಾವಗಡ  ರೀತಿಯೇ ಕಾಮಿಡಿ ಮಾಡಬಹುದು  ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ದಿನ ಕಳೆದಂತೆ ಸಂತು ಅವರ ನಿಜವಾದ ಬಣ್ಣ ಗೊತ್ತಾಗೋಕೆ ಶುರುವಾಯಿತು. ಅವರ ವರ್ತನೆ ಅನೇಕರಿಗೆ ಬೇಸರ ಮೂಡಿಸಿದೆ.

ಸಂತೋಷ್ ಅವರು ಮೊದಲು ಟಾರ್ಗೆಟ್ ಮಾಡಿದ್ದು ಡ್ರೋನ್ ಪ್ರತಾಪ್ ಅವರನ್ನು. ಅವರನ್ನು ಶಿಷ್ಯರಾಗಿ ಸ್ವೀಕರಿಸಿದ್ದರು. ಆದರೆ, ಡ್ರೋನ್ ಪ್ರತಾಪ್ ಬಗ್ಗೆ ಅವರು ಕೆಟ್ಟದಾಗಿ ಮಾತನಾಡಿದರು. ಅವರ ಬಗ್ಗೆ ನೆಗೆಟಿವ್ ಟಾಕ್ ಶುರುವಾಗುವಂತೆ ಮಾಡಿದರು ಸಂತೋಷ್. ವಾರದ ದಿನದಲ್ಲಿ ಸಂತೋಷ್ ಮಾಡುವುದು ಇದನ್ನೇ. ಭಾಗ್ಯಶ್ರೀ, ಸಿರಿ ಇತ್ಯಾದಿಯವರ ಬಗ್ಗೆ ಅವರು ಟೀಕೆ ಮಾಡುತ್ತಾರೆ. ವಾರಾಂತ್ಯದಲ್ಲಿ ಅವರು ತಮ್ಮ ವರಸೆ ಬದಲಿಸಿಬಿಡುತ್ತಾರೆ.

ವಾರದ ದಿನಗಳಲ್ಲಿ ಎಲ್ಲಾ ವಿಚಾರಗಳನ್ನು ಅವರು ಗಂಭೀರವಾಗಿ ಮಾತನಾಡುತ್ತಾರೆ. ಆದರೆ, ವೀಕೆಂಡ್​ನಲ್ಲಿ ಅವರು ಆ ರೀತಿ ಇರುವುದಿಲ್ಲ. ಸುದೀಪ್ ಹೇಳುವ ಪ್ರತಿ ಮಾತನ್ನು ಜೋಕ್ ಆಗಿ ತೆಗೆದುಕೊಳ್ಳುತ್ತಾರೆ. ಸುದೀಪ್ ಹೇಳಿದ ಪ್ರತಿ ಮಾತಿಗೆ ‘ಅಣ್ಣಾ..’ ಎಂದು ರಾಗ ಎಳೆದು ನಗುತ್ತಾರೆ. ವಾರದ ದಿನದಲ್ಲಿ ಅವರು ಇರುವುದಕ್ಕೂ ವೀಕೆಂಡ್​ನಲ್ಲಿ ಇರುವುದಕ್ಕೂ  ತುಂಬಾ ವ್ಯತ್ಯಾಸ ಇದೆ ಅನ್ನೋದು ಅನೇಕರ ಅಭಿಪ್ರಾಯ.

ಬಿಗ್ ಬಾಸ್​ನಲ್ಲಿ ಸುದೀಪ್ ಅವರು ಸಂತೋಷ್​ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ವೀಕೆಂಡ್​ನಲ್ಲಿ ಸುದೀಪ್ ಅವರು ಗಂಭೀರವಾಗಿ ಮಾತನಾಡುತ್ತಿದ್ದರೆ ಸಂತೋಷ್ ಅವರು ನಗೋಕೆ ಹೋದರು. ಅಲ್ಲಿ ಸರಿಯಾಗೆ ತಿರುಗೇಟು ಕೊಟ್ಟರು ಸುದೀಪ್. ಸಂತೋಷ್ ಅವರು ಎಷ್ಟೇ ನಕ್ಕರೂ ಸುದೀಪ್ ಮುಖದಲ್ಲಿ ಒಂದೇ ಒಂದು ಸ್ಮೈಲ್ ಕಾಣಿಸಲಿಲ್ಲ. ಆಗ ಸಂತೋಷ್​ಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಯಿತು.

ಇದನ್ನೂ ಓದಿ: ವಿನಯ್ ಅಲ್ಲ, ಸಂಗೀತಾ ಬಿಗ್ ಬಾಸ್​ನಲ್ಲಿ ಅತಿ ಹೆಚ್ಚು ಹೇಟ್ ಮಾಡುವ ಸ್ಪರ್ಧಿ ಇವರೇ

ಶನಿವಾರದ ಎಪಿಸೋಡ್​ನಲ್ಲಿ ‘ಅಣ್ಣಾ ನಾನು ಕಾಮಿಡಿಗೆ ಹೇಳಿದೆ’ ಎಂದು ಹೇಳುತ್ತಿದ್ದರು. ಈ ಬಗ್ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಇನ್ನು, ವಿನಯ್ ಅವರನ್ನು ಸದಾ ಬೆಂಬಲಿಸುತ್ತಾ ಬರುತ್ತಿದ್ದ ಅವರಿಗೆ ಬಿಸಿ ಮುಟ್ಟಿಸಿದ್ದಾರೆ ಕಿಚ್ಚ. ಇನ್ನಾದರೂ ಅವರು ಬದಲಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:08 am, Mon, 6 November 23

ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ