AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರೋನ್ ಪ್ರತಾಪ್ ಕೆಟ್ಟ ದೃಷ್ಠಿಯಿಂದ ನೋಡುತ್ತಾರೆಯೇ? ಬಿಗ್​ಬಾಸ್ ಮನೆ ಮಹಿಳೆಯರು ಹೇಳಿದ್ದೇನು?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಡ್ರೋನ್ ಪ್ರತಾಪ್ ಮನೆಯ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆಯೇ? ಮನೆಯ ಮಹಿಳಾ ಸದಸ್ಯರು ಹೇಳಿದ್ದು ಏನು?

ಡ್ರೋನ್ ಪ್ರತಾಪ್ ಕೆಟ್ಟ ದೃಷ್ಠಿಯಿಂದ ನೋಡುತ್ತಾರೆಯೇ? ಬಿಗ್​ಬಾಸ್ ಮನೆ ಮಹಿಳೆಯರು ಹೇಳಿದ್ದೇನು?
ಡ್ರೋನ್ ಪ್ರತಾಪ್
ಮಂಜುನಾಥ ಸಿ.
|

Updated on: Nov 05, 2023 | 11:10 PM

Share

ಡ್ರೋನ್ ಪ್ರತಾಪ್ ಬಿಗ್​ಬಾಸ್ (BiggBoss) ಮನೆ ಸದಸ್ಯರಲ್ಲಿಯೇ ಬಹಳ ಭಿನ್ನ ವ್ಯಕ್ತಿತ್ವದ ವ್ಯಕ್ತಿ. ಬಿಗ್​ಬಾಸ್ ಮನೆಯ ಸದಸ್ಯರಿಗೆ ಮಾತ್ರವಲ್ಲ ಸ್ವತಃ ಬಿಗ್​ಬಾಸ್​ಗೂ ಡ್ರೋನ್ ಪ್ರತಾಪ್ ಸರಿಯಾಗಿ ಅರ್ಥವಾಗಿಲ್ಲ. ಒಮ್ಮೊಮ್ಮೆ ಒಂದೊಂದು ಜೋನ್​ಗೆ ಡ್ರೋನ್ ಪ್ರತಾಪ್ ಹೋಗಿ ಬಿಡುತ್ತಾರೆ. ಮೊದಲ ಎರಡು ವಾರ ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದ ಡ್ರೋನ್ ಇತ್ತೀಚೆಗೆ ತುಸು ಆತ್ಮವಿಶ್ವಾಸ ಪ್ರದರ್ಶಿಸುತ್ತಿದ್ದಾರೆ. ಆದರೂ ಸಹ ಒಮ್ಮೊಮ್ಮೆ ಅಚಾನಕ್ಕಾಗಿ ಗುಂಪಿನಿಂದ ಪ್ರತ್ಯೇಕವಾಗಿ ಒಬ್ಬರೇ ಕೂತು ಏನೋ ಬರೆಯುತ್ತಲೋ, ಏನೋ ಯೋಚಿಸುತ್ತಲೋ ಕುಳಿತುಬಿಡುತ್ತಾರೆ. ಇನ್ನು ಬಿಗ್​ಬಾಸ್ ಮನೆಯಲ್ಲಿ ಸುಲಭವಾಗಿ ಊಹಿಸಲಾಗದ ವ್ಯಕ್ತಿಯಾಗಿ ಡ್ರೋನ್ ಇದ್ದಾರೆ. ಮನೆಯಲ್ಲಿ ಹಲವರು ಡ್ರೋನ್ ಅವರನ್ನು ತಮ್ಮ ಮೊದಲ ವೈರಿಯನ್ನಾಗಿಸಿಕೊಂಡಿದ್ದರೆ, ಕೆಲವರು ಅತ್ಯಂತ ಆಪ್ತ ಸ್ಥಾನವನ್ನು ನೀಡಿದ್ದಾರೆ.

ಇತ್ತೀಚೆಗೆ ಮನೆಯಲ್ಲಿ ಎರಡು ತಂಡಗಳಾಗಿ ಎರಡೂ ತಂಡಗಳು ಟಾಸ್ಕ್ ವೇಳೆ ಕಿತ್ತಾಡಿಕೊಂಡು ಆ ಕಿತ್ತಾಟ ದ್ವೇಷಕ್ಕೂ ಕಾರಣವಾಗಿತ್ತು. ಆಗ ವಿನಯ್ ತಂಡದವರು ಎದುರಾಳಿ ಸಂಗೀತಾ ತಂಡದ ಸದಸ್ಯರ ವ್ಯಕ್ತಿತ್ವದ ಬಗ್ಗೆಯೂ ಕಮೆಂಟ್​ಗಳನ್ನು ಮಾಡಿದ್ದರು. ಆ ವೇಳೆ ವಿನಯ್, ಡ್ರೋನ್ ಪ್ರತಾಪ್ ನೋಟವೇ ಸರಿಯಿಲ್ಲ, ಮಹಿಳೆಯರನ್ನು ಅತ್ಯಂತ ಕೆಟ್ಟದಾಗಿ ಅವನು ನೋಡುತ್ತಾನೆ ಎಂದರು. ಅದಕ್ಕೆ ತುಕಾಲಿ ಸಂತೋಶ್ ಸಹ ಹೌದು ಎಂದರು ಮಾತ್ರವಲ್ಲದೆ, ಡ್ರೋನ್ ಹೇಗೆ ಬಾಯಿ ಕಳೆದುಕೊಂಡು, ಜೊಲ್ಲು ಕಾರುತ್ತಾ ನೋಡುತ್ತಾನೆ ಎಂದು ಅಭಿನಯಿಸಿ ತೋರಿಸಿದರು. ಇಶಾನಿ ಸಹ ನನಗೆ ಅದರ ಅರಿವು ಆಗಿದೆ ಎಂದು ಸಹ ಹೇಳಿದರು.

ಭಾನಿವಾರದ ಎಪಿಸೋಡ್​ನಲ್ಲಿ ಸುದೀಪ್, ಮನೆಯ ಸದಸ್ಯರಿಗೆ ಕೆಲವು ಫನ್ ಆಟಗಳನ್ನು ಆಡಿಸುತ್ತಾ, ಎಸ್​ ಹಾಗೂ ನೋ ಬೋರ್ಡ್​ ನೀಡಿ ಕೆಲವು ತಮಾಷೆ ಪ್ರಶ್ನೆಗಳನ್ನು ಕೇಳುತ್ತಾ ಉತ್ತರಗಳನ್ನು ಪಡೆಯುತ್ತಿದ್ದರು. ಅದೇ ಸಂದರ್ಭದಲ್ಲಿ ‘ಡ್ರೋನ್ ಪ್ರತಾಪ್ ಮನೆಯ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾನೆ’ ಈ ಮಾತನ್ನು ಎಷ್ಟು ಜನ ಒಪ್ಪುತ್ತೀರಿ ಎಂದು ಕೇಳಿದರು. ತಮಾಷೆಯ ಪ್ರಶ್ನೆಗಳ ನಡುವೆ ಸುದೀಪ್ ಕೇಳಿದ ಈ ಗಂಭೀರ ಪ್ರಶ್ನೆ ಮನೆಯ ಸದಸ್ಯರಿಗೆ ಆಶ್ಚರ್ಯ ತಂದಿತು. ಇಶಾನಿ, ವಿನಯ್, ತುಕಾಲಿ ಅವರುಗಳು ಹೌದು, ಪ್ರತಾಪ್ ಕೆಟ್ಟದಾಗಿ ನೋಡುತ್ತಾನೆ ಎಂದರೆ ಇನ್ನುಳಿದವರು ಇಲ್ಲ ಕೆಟ್ಟದಾಗಿ ನೋಡಿಲ್ಲ ಎಂದು ಉತ್ತರಿಸಿದರು.

ಇದನ್ನೂ ಓದಿ:Bigg Boss Kannada: ‘ಡ್ರೋನ್​ ಪ್ರತಾಪ್​ ಹೀರೋ, ವಿನಯ್​ ಗೌಡ ವಿಲನ್​’; ಸ್ಪರ್ಧಿಗಳ ವರ್ತನೆ ಬಗ್ಗೆ ಮುಲಾಜಿಲ್ಲದೇ ಮಾತಾಡಿದ ಸುದೀಪ್​

ಇಶಾನಿ, ವಿನಯ್ ಹಾಗೂ ತುಕಾಲಿ ಸಂತು ಅವರುಗಳು ಡ್ರೋನ್ ಪ್ರತಾಪ್ ವಿಚಿತ್ರವಾಗಿ ನೋಡುತ್ತಾರೆ ಎಂದರು. ಆದರೆ ವಿಚಿತ್ರ ಹಾಗೂ ವಲ್ಗರ್ ನಡುವೆ ವ್ಯತ್ಯಾಸ ಇದೆಯಲ್ಲವೆ ಎಂದಾಗ ತುಕಾಲಿ ಹಾಗೂ ವಿನಯ್ ತಮ್ಮ ಹೇಳಿಕೆ ಬದಲಿಸಿದರು. ಇಶಾನಿ, ‘ಡ್ರೋನ್ ನನ್ನ ಬಳಿ ಸರಿಯಾಗಿ ಮಾತನಾಡಿಲ್ಲ ಎಂದೇನೋ ಹೇಳಿದರು, ಆ ಮಾತನ್ನು ಸುದೀಪ್ ಒಪ್ಪಲಿಲ್ಲ ಕೊನೆಗೆ ಅವರೂ ಸಹ ಅಭಿಪ್ರಾಯ ಬದಲಾಯಿಸಿಕೊಂಡರು. ಈ ನಡುವೆ ಡ್ರೋನ್ ಪ್ರತಾಪ್​ಗೆ ಆತ್ಮೀಯರಾಗಿರುವ ಸಂಗೀತ, ”ಡ್ರೋನ್ ಪ್ರತಾಪ್ ಖಂಡಿತವಾಗಿ ಯಾರನ್ನೂ ಕೆಟ್ಟ ದೃಷ್ಟಿಯಿಂದ ನೋಡಿಲ್ಲ, ನೋಡುವ ವ್ಯಕ್ತಿಯೂ ಅಲ್ಲ ಎಂದರು. ಅದಕ್ಕೆ ಉದಾಹರಣೆಯನ್ನೂ ನೀಡಿದ ಸಂಗೀತಾ, ನಾನು ವಾಶ್​ರೂಂನಿಂದ ಹೊರಗೆ ಬಂದಾಗ ಅವರು ಅಲ್ಲಿದ್ದರೆ ಹೊರಗೆ ಹೋಗಿಬಿಡುತ್ತಾರೆ. ಅಥವಾ ಡ್ರೆಸ್ ಕುರಿತಾಗಿ ತನಿಷಾ ಅಥವಾ ಇನ್ಯಾವುದೇ ಮಹಿಳೆಯರ ಸಹಾಯ ಕೇಳಿದಾಗಲೂ ಸಹ ಡ್ರೋನ್ ಅಲ್ಲಿಂದ ಹೊರಗೆ ಹೋಗಿಬಿಡುತ್ತಾರೆ. ಪಕ್ಕಾ ಜೆಂಟಲ್​ಮ್ಯಾನ್ ರೀತಿ ವರ್ತಿಸುತ್ತಾರೆ” ಎಂದರು ಸಂಗೀತಾ.

ಡ್ರೋನ್ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ಹೊಂದಿರುವ ನಮ್ರತಾ ಸಹ, ‘ಡ್ರೋನ್ ಪ್ರತಾಪ್ ಬಹಳ ಕನ್​ಫ್ಯೂಷನ್​ನಿಂದ ನೋಡುತ್ತಿರುತ್ತಾರೆ. ಆದರೆ ಅವರು ಕೆಟ್ಟದಾಗಿ ಅಂತೂ ನೋಡಲ್ಲ” ಎಂದರು. ಅಲ್ಲಿಗೆ ಡ್ರೋನ್ ಪ್ರತಾಪ್ ಕೆಟ್ಟ ದೃಷ್ಟಿಯಿಂದ ಮಹಿಳೆಯರನ್ನು ನೋಡುವುದಿಲ್ಲ ಎಂಬುದು ಸಾಬೀತಾದಂತಾಯ್ತು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗಲಿದೆ.

ಸಿನಿಮಾ ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ