ಕಾರ್ತಿಕ್ ಹೃದಯ ಒಡೆದ ಸಂಗೀತಾ: ಆತ್ಮೀಯತೆಗೆ ತಿಲಾಂಜಲಿ

Bigg Boss: ಬಿಗ್​ಬಾಸ್ ಮನೆಯ ಕ್ಯೂಟ್ ಜೋಡಿಗಳಲ್ಲಿ ಒಂದಾಗಿದ್ದ ಕಾರ್ತಿಕ್ ಹಾಗೂ ಸಂಗೀತಾ ದೂರಾಗಿದ್ದಾರೆ. ಇಷ್ಟು ದಿನ ನನಗೆ ಒಳ್ಳೆಯ ಗೆಳೆಯನಾಗಿ ಬೆಂಬಲ ನೀಡಿದೆ, ನನ್ನ ಜೊತೆಗಿದ್ದೆ ಆದರೆ ಇನ್ನು ಮುಂದೆ ಜೊತೆಗಿರುವುದು ಬೇಡ ಎಂದು ಹೇಳಿ ಸಂಗೀತಾ, ಕಾರ್ತಿಕ್​ಗೆ ಗುಡ್-ಬೈ ಹೇಳಿದ್ದಾರೆ.

ಕಾರ್ತಿಕ್ ಹೃದಯ ಒಡೆದ ಸಂಗೀತಾ: ಆತ್ಮೀಯತೆಗೆ ತಿಲಾಂಜಲಿ
ಕಾರ್ತಿಕ್-ಸಂಗೀತಾ
Follow us
ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Nov 08, 2023 | 6:35 AM

ಬಿಗ್​ಬಾಸ್ (Bigg Boss) ಮನೆಯಲ್ಲಿ ಪ್ರೀತಿ-ಪ್ರೇಮ, ಗಾಢ ಸ್ನೇಹ ಸಾಮಾನ್ಯ, ಕೆಲವು ಬಂಧಗಳು ಬಿಗ್​ಬಾಸ್ ಮನೆಯಾಚೆಗೂ ಉಳಿದುಕೊಂಡಿವೆ. ಕೆಲವು ಸಂಬಂಧಗಳು ಅಲ್ಲಿಯೇ ಹುಟ್ಟಿ ಅಲ್ಲಿಯೇ ಸಾಯುತ್ತವೆ. ಹಾಗೆಯೇ ಈ ಸೀಸನ್​ನಲ್ಲಿ ಇಶಾನಿ-ಮೈಖಲ್, ಸ್ನೇಹಿತ್-ನಮ್ರತಾ ಹಾಗೂ ಸಂಗೀತಾ ಕಾರ್ತಿಕ್ ನಡುವೆ ಅಂಥಹದ್ದೊಂಧು ಆತ್ಮೀಯತೆ ಕಾಣಲು ಸಿಕ್ಕಿತ್ತು. ಇಶಾನಿ-ಮೈಖಲ್ ಅಂತೂ ತಮ್ಮನ್ನು ತಾವು ಗರ್ಲ್​ಫ್ರೆಂಡ್-ಬಾಯ್​ಫ್ರೆಂಡ್ ಎಂದು ಘೋಷಿಸಿಕೊಂಡಿದ್ದಾಗಿದೆ. ಸ್ನೇಹಿತ್-ನಮ್ರತಾ ಹತ್ತಿರವಿದ್ದು ಸಣ್ಣ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಸಂಗೀತಾ-ಕಾರ್ತಿಕ್ ಸಹ ಪರಸ್ಪರ ಬಹಳ ಆತ್ಮೀಯರಾಗಿದ್ದರು. ಅವರಿಬ್ಬರದ್ದೂ ಪ್ರೇಮವೆಂದೇ ಮನೆಯ ಸದಸ್ಯರು ಅಂದುಕೊಂಡಿದ್ದಾರೆ. ಆದರೆ ಸಂಗೀತಾ, ಏಕಾ-ಏಕಿ ಕಾರ್ತಿಕ್ ಹೃದಯ ಒಡೆದಿದ್ದಾರೆ.

ಕಾರ್ತಿಕ್, ಆಗಾಗ್ಗೆ ಸಂಗೀತಾ ಬಳಿ ಪ್ರೀತಿ-ಪ್ರೇಮದ ಮಾತುಗಳನ್ನಾಡುತ್ತಲೇ ಇದ್ದರು. ಸಂಗೀತಾ ಸಹ ಕಾರ್ತಿಕ್ ಬಗ್ಗೆ ಅತಿಯಾಗಿ ಕಾಳಜಿ ತೋರುತ್ತಿದ್ದರು. ಇಬ್ಬರೂ ತಾವು ಗೆಳೆಯರೆಂದೇ ಹೇಳಿಕೊಳ್ಳುತ್ತಿದ್ದರೂ ಸಹ ಇತರೆ ಸದಸ್ಯರಿಗಿಂತಲೂ ಒಬ್ಬರನ್ನೊಬ್ಬರು ಹೆಚ್ಚು ಹಚ್ಚಿಕೊಂಡಿದ್ದರು. ಆದರೆ ಈಗ ಇಬ್ಬರೂ ದೂರಾಗಿದ್ದಾರೆ. ಸಂಗೀತಾ, ಕಾರ್ತಿಕ್ ಹೃದಯ ಒಡೆದಿದ್ದಾರೆ.

ಮಂಗಳವಾರದ ಎಪಿಸೋಡ್​ನಲ್ಲಿ, ಬೆಳಿಗ್ಗೆ ಎದ್ದಾಗಲೇ, ಕಾರ್ತಿಕ್ ಆಡಿದ ತಮಾಷೆಯ ಮಾತಿಗೆ ಸಂಗೀತಾ ಬೇಸರ ಮಾಡಿಕೊಂಡರು. ಅಪ್ಪ-ಅಮ್ಮ, ಮಕ್ಕಳು ಏಳಬಾರದೆಂದು ಸಂಜ್ಞೆ ಮಾಡಿ ಹೇಳುವಂತೆ, ನನ್ನನ್ನು ಸೈಲೆಂಟ್ ಆಗಿರು ಎಂದು ಹೇಳುತ್ತಿದ್ದೀಯ ಎಂದು ಕಾರ್ತಿಕ್ ತಮಾಷೆಯಾಗಿ ಹೇಳಿದ್ದರು. ಆದರೆ ಸಂಗೀತಾಗೆ ಅದು ಇಷ್ಟವಾಗಲಿಲ್ಲ. ಆ ನಂತರ ಟೀಂ ಮಾಡುವಾಗಲೂ ಇವರ ಈ ಜಗಳ ಮುಂದುವರೆದಿತ್ತು. ಇವರಿಬ್ಬರ ಜಗಳದಿಂದ ತಂಡದ ಮನಸ್ಥಿತಿಯೂ ಹಾಳಾಗಿತ್ತು. ಸಂಗೀತಾ ಅಂತು ತಾವು ಟೀಂ ಬಿಟ್ಟು ಹೋಗುವ ಮಾತನ್ನಾಡಿದರು. ಆದರೆ ತಂಡದ ಹೊಸ ಕ್ಯಾಪ್ಟನ್ ಪ್ರತಾಪ್, ತಂಡವನ್ನು ಒಟ್ಟಿಗೆ ಇಟ್ಟುಕೊಳ್ಳುವಲ್ಲಿ ಸಫಲರಾದರು.

ಇದನ್ನೂ ಓದಿ:‘ಕಾರ್ತಿಕ್ ಟೀಂನಲ್ಲಿ ಮಾತ್ರ ಇರಲ್ಲ’; ಸಂಗೀತಾಗೆ ಆಗಿದೆ ಬೇಸರ

ಮಂಗಳವಾರ ನಡೆದ ಎರಡು ಟಾಸ್ಕ್​ಗಳಲ್ಲಿ ಪ್ರತಾಪ್ ತಂಡ ಗೆದ್ದಿತು. ಅದಾದ ಬಳಿಕ ಸಂಗೀತಾ, ಕಾರ್ತಿಕ್ ಸಹ ಚೆನ್ನಾಗಿಯೇ ಇದ್ದರು. ಟಾಸ್ಕ್ ಎಲ್ಲ ಮುಗಿದ ಬಳಿಕ, ಸಂಗೀತಾ ಹಾಗೂ ಕಾರ್ತಿಕ್ ಪ್ರತ್ಯೇಕವಾಗಿ ಕೂತು ಮಾತನಾಡಿ ತಮ್ಮ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿದರು. ಆಗ ಸಂಗೀತಾ, ನೀನು ಇಷ್ಟು ದಿನ ನನ್ನನ್ನು ಆತ್ಮೀಯವಾಗಿ ನಡೆಸಿಕೊಂಡಿದ್ದೀಯ, ಆದರೆ ನಾವಿನ್ನು ಒಟ್ಟಿಗೆ ಹೀಗೆಯೇ ಮುಂದುವರೆಯುವುದು ಬೇಡ, ನೀನು ನನಗಾಗಿ ಸಾಕಷ್ಟು ಮಾಡಿದ್ದೀಯ ಆದರೆ ಇದು ಇಲ್ಲಿಗೆ ಸಾಕು ಎಂದು ನೇರವಾಗಿ ಹೇಳಿದರು. ತೀವ್ರ ದುಃಖದಲ್ಲಿದ್ದ ಕಾರ್ತಿಕ್, ಸುಮ್ಮನೆ ಸರಿ ಎಂದಷ್ಟೆ ಹೇಳಿ, ನನಗೆ ಸ್ವಲ್ಪ ಖಾಸಗಿ ಸಮಯ ಬೇಕು ಎಂದು ಹೇಳಿ ಸುಮ್ಮನಾದರು.

ಬಿಗ್​ಬಾಸ್ ಮನೆಯಲ್ಲಿ ಆತ್ಮೀಯ ಬಾಂಧವ್ಯವೊಂದು ಬೆಳೆಯುತ್ತಿದ್ದ ಹಂತದಲ್ಲಿಯೇ ಮುರಿದು ಬಿದ್ದಿದೆ. ಸಂಗೀತಾಗಾಗಿ ಗೆಳೆಯ ವಿನಯ್​ ವಿರುದ್ಧ ಕಾರ್ತಿಕ್ ಹೋರಾಡಿದ್ದರು. ಹಲವರ ವಿರೋಧ ಕಟ್ಟಿಕೊಂಡು ಸಂಗೀತಾರನ್ನು ಬೆಂಬಲಿಸಿದ್ದರು. ಆದರೆ ಸಂಗೀತಾ ಅದ್ಯಾವುದನ್ನೂ ಲೆಕ್ಕಕ್ಕೆ ಹಿಡಿಯದೆ ಗೆಳೆತನ ಅಂತ್ಯ ಮಾಡಿದರು. ಇದು ಕಾರ್ತಿಕ್​ಗೆ ಮಾತ್ರವಲ್ಲದೆ ನೋಡುಗರಿಗೂ ಶಾಕ್ ಬೇಸರ ಮೂಡಿಸಿರುವ ಸಾಧ್ಯತೆ ಇದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:40 pm, Tue, 7 November 23

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ