AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ರತಾ ಕೈಯಲ್ಲಿ ಈಗ ಉಳಿದಿರೋದು ಚಮಚ ಮಾತ್ರ; ಸುದೀಪ್ ಮಾತಿಗೆ ಮುಖದ ಬಣ್ಣವೇ ಬದಲಾಯ್ತು

ಹೆಣ್ಣುಮಕ್ಕಳಿಗೆ ರೆಸ್ಪೆಕ್ಟ್ ಕೊಡಲ್ಲ ಎಂದು ನಮ್ರತಾ ಅವರು ಮೈಕೆಲ್​ಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ, ವಿನಯ್ ಅವರು  ಹೆಣ್ಣುಮಕ್ಕಳಿಗೆ ಪದೇ ಪದೇ ಅವಮಾನ ಮಾಡಿದರೂ ಈ ವಿಚಾರದಲ್ಲಿ ಮೌನ ತಾಳಿದ್ದರು. ಈ ಬಗ್ಗೆ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.

ನಮ್ರತಾ ಕೈಯಲ್ಲಿ ಈಗ ಉಳಿದಿರೋದು ಚಮಚ ಮಾತ್ರ; ಸುದೀಪ್ ಮಾತಿಗೆ ಮುಖದ ಬಣ್ಣವೇ ಬದಲಾಯ್ತು
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Nov 05, 2023 | 12:10 AM

Share

ನಮ್ರತಾ ಗೌಡ (Namrata Gowda) ಅವರು ಆರಂಭದಲ್ಲಿ ಸ್ಟ್ರಾಂಗ್ ಸ್ಪರ್ಧಿ ಆಗುತ್ತಾರೆ ಎಂದು ವೀಕ್ಷಕರು ಭಾವಿಸಿದ್ದರು. ಆದರೆ, ಹಾಗಾಗುವ ಸೂಚನೆ ಸಿಗುತ್ತಿಲ್ಲ. ಕಳೆದ ವಾರ ಅವರಿಗೆ ಒಂದು ಎಚ್ಚರಿಕೆ ಕೂಡ ಬಂದಿತ್ತು. ‘ದಾದಾಗಿರಿ ಮಾಡದಿದ್ದರೂ ಪರವಾಗಿಲ್ಲ ಚಮಚಾಗಿರಿ ಮಾತ್ರ ಮಾಡಬೇಡಿ’ ಎನ್ನುವ ಪತ್ರವನ್ನು ವೀಕ್ಷಕರು ಕಳುಹಿಸಿದ್ದರು. ಬಹುಶಃ ಅವರು ಇದನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಈ ಕಾರಣಕ್ಕೆ ಅವರು ಈ ವಾರ ದಂಡ ತೆತ್ತಿದ್ದಾರೆ. ಸುದೀಪ್ (Sudeep) ಅವರು ಕೊಟ್ಟ ಮಾತಿನ ಏಟಿಗೆ ಅವರು ತತ್ತರಿಸಿ ಹೋಗಿದ್ದಾರೆ. ಮಾತನಾಡಲು ಸಾಧ್ಯವಾಗದೇ ಕೇವಲ ಮುಖವನ್ನು ಅಲ್ಲಾಡಿಸುತ್ತಾ ಎಪಿಸೋಡ್ ಮುಗಿಸಿದ್ದಾರೆ. ತಪ್ಪಾಯ್ತು ಎಂದು ಒಪ್ಪಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ.

ಈ ವಾರ ವಿನಯ್ ಗೌಡ ಹಾಗೂ ನಮ್ರತಾ ಒಂದೇ ಗುಂಪಿನಲ್ಲಿ ಇದ್ದರು. ಈ ಕಾರಣಕ್ಕೆ ಪ್ರತಿ ವಿಚಾರದಲ್ಲೂ ಅವರು ವಿನಯ್ ಅವರನ್ನು ವಹಿಸಿಕೊಂಡು ಬಂದರು. ಅದು ಮಿತಿ ಮೀರಿತ್ತು. ಹೆಣ್ಣುಮಕ್ಕಳಿಗೆ ರೆಸ್ಪೆಕ್ಟ್ ಕೊಡಲ್ಲ ಎಂದು ನಮ್ರತಾ ಅವರು ಮೈಕೆಲ್​ಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ, ವಿನಯ್ ಅವರು  ಹೆಣ್ಣುಮಕ್ಕಳಿಗೆ ಪದೇ ಪದೇ ಅವಮಾನ ಮಾಡಿದರೂ ಈ ವಿಚಾರದಲ್ಲಿ ಮೌನ ತಾಳಿದ್ದರು. ಈ ಬಗ್ಗೆ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.

‘ನಮ್ರತಾ ಅವರೇ ಈ ವಾರ ಹೆಣ್ಣುಮಕ್ಕಳನ್ನು ಹೇಗೆ ಗೌರವಿಸಬೇಕು ಎಂದು ಮೈಕೆಲ್​ಗೆ ಪಾಠ ಹೇಳಿದಿರಿ. ಆದರೆ, ವಿನಯ್ ಅವರು ನಿಮ್ಮ ಎದುರೇ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದಾಗ ಮೌನವಾಗಿದ್ದಿರಿ. ಗಂಡಸು ತರ ಆಡು, ಬಳೆ ತೊಟ್ಟವರಂತೆ ಆಡಬೇಡ ಎಂದು ವಿನಯ್ ಹೇಳಿದಾಗ ನೀವು ಅಲ್ಲೇ ಇದ್ದಿರಿ. ಈ ಮನೆಯಲ್ಲಿ ಬಳೆಗಳ ರಾಜ ಒಬ್ಬನಿದ್ದಾನೆ ಅಂದಾಗಲೂ ನೀವು ಅಲ್ಲೇ ಇದ್ದಿರಿ. ಆಗ ಇದೆಲ್ಲ ತಪ್ಪು ಎನಿಸಲಿಲ್ಲವೇ. ವಿನಯ್ ಅವರ ಮಾರನ್ನು ಏಕೆ ವಿರೋಧಿಸಲಿಲ್ಲ’ ಎಂದು ಸುದೀಪ್ ಅವರು ನಮ್ರತಾ ಅವರನ್ನು ಪ್ರಶ್ನೆ ಮಾಡಿದರು.

ನಮ್ರತಾಗೆ ಏನು ಉತ್ತರ ಹೇಳಬೇಕು ಎಂದೇ ತಿಳಿಯಲಿಲ್ಲ. ಇದಕ್ಕೆಲ್ಲ ತೇಪೆ ಹಚ್ಚುವ ಕೆಲಸಕ್ಕೆ ಹೋದರು. ಆಗ ಸುದೀಪ್ ಅವರು ನಮ್ರತಾಗೆ ಪಾಠ ಹೇಳಿದರು. ‘ಪ್ರೇಕ್ಷಕರು ನಿಮಗೆ ಚಮಚಾ ನೀಡಿದ್ದರು. ಅದರ ಜೊತೆ ಕೊಟ್ಟ ಪತ್ರ ಕಳೆದು ಹೋಗಿ, ಈಗ ಆ ಚಮಚ ಮಾತ್ರ ಉಳಿದುಕೊಂಡಿದೆ. ಇಡೀ ವಾರ ವೀಕ್ಷಕರಿಗೆ ಕಾಣಿಸಿದ್ದು ಆ ಚಮಚ ಮಾತ್ರ’ ಎಂದರು.

‘ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಬಳೆ ಚರ್ಚೆ: ಬಳೆಗೆ ವಿಶೇಷ ಗೌರವ ನೀಡಿದ ಕಿಚ್ಚ ಸುದೀಪ್

ಸುದೀಪ್ ಹೇಳುತ್ತಿದ್ದ ಪ್ರತಿ ಮಾತು ನಮ್ರತಾ ಅವರನ್ನು ತಿವಿಯುತ್ತಿತ್ತು. ವಿನಯ್ ಅವರನ್ನು ಬೆಂಬಲಿಸುತ್ತಾ ಬಂದ ಅವರಿಗೆ ಸುದೀಪ್ ತೆಗೆದುಕೊಂಡ ಕ್ಲಾಸ್​ನಿಂದ ಮುಖದ ಬಣ್ಣವೇ ಬದಲಾಗಿತ್ತು. ನಮ್ರತಾ ಮುಂದಿನ ದಿನಗಳಲ್ಲಿ ಬದಲಾಗುತ್ತಾರಾ ಅಥವಾ ಇದೇ ರೀತಿ ಚಮಚಾಗಿರಿ ಮುಂದುವರಿಸುತ್ತಾರಾ ಎನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:09 am, Sun, 5 November 23

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ