AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು, ಸಂತೋಷ್ ಜೋಕರ್ ರೀತಿ ಕಾಣುತ್ತಿದ್ವಿ’; ಎಲ್ಲರ ಎದುರು ತಪ್ಪು ಒಪ್ಪಿಕೊಂಡ ವಿನಯ್

Bigg Boss Kannada 10: ವಿನಯ್​ ಮತ್ತು ತುಕಾಲಿ ಸಂತು ಅವರು ಭಾಗ್ಯಶ್ರೀಯನ್ನು ಟಾರ್ಗೆಟ್​ ಮಾಡಿದ ವಿಚಾರವನ್ನು ವಿಕೆಂಡ್​ನಲ್ಲಿ ಸುದೀಪ್ ಚರ್ಚೆ ಮಾಡಿದ್ದಾರೆ. ‘ನಾಮಿನೇಟ್ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಭಾಗ್ಯಶ್ರೀ ಅವರು ನಿಮಗೆ ಇಷ್ಟ ಬಂದಂತೆ ನಡೆದುಕೊಂಡರೆ ಮಾತ್ರ ಅವರು ಭಾಗ್ಯಶ್ರೀ, ಇಲ್ಲದಿದ್ದರೆ ಮತ್ಯಾವುದೋ ಶ್ರೀ ಅಲ್ಲವೇ’ ಎಂದು ಸಂತುಗೆ ಸುದೀಪ್​ ಕೇಳಿದರು.

‘ನಾನು, ಸಂತೋಷ್ ಜೋಕರ್ ರೀತಿ ಕಾಣುತ್ತಿದ್ವಿ’; ಎಲ್ಲರ ಎದುರು ತಪ್ಪು ಒಪ್ಪಿಕೊಂಡ ವಿನಯ್
ವಿನಯ್ ಗೌಡ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 05, 2023 | 6:55 AM

Share

ವಿನಯ್ ಗೌಡ ಹಾಗೂ ತುಕಾಲಿ ಸಂತೋಷ್ (Tukali Santhosh) ಅವರು ಈ ವಾರದ ಆರಂಭದಲ್ಲಿ ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡಿದ್ದರು. ಅವರು ಮಾಡಿದ ನಾಮಿನೇಷನ್ ವಿಚಾರ ಇಟ್ಟುಕೊಂಡು ಸಂತೋಷ್ ಹಾಗೂ ವಿನಯ್ ಗೌಡ (Vinay Gowda) ಭಾಗ್ಯಶ್ರೀಯನ್ನು ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಸುದೀಪ್ ಚರ್ಚೆ ಮಾಡಿದ್ದಾರೆ. ‘ನಾಮಿನೇಷನ್​ಗೆ ಹೆಸರು ತೆಗೆದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಪ್ರಶ್ನೆ ಮಾಡೋಕೆ ನೀವು ಯಾರು’ ಎಂದು ಸುದೀಪ್ (Kichcha Sudeep) ಕೇಳಿದ್ದಾರೆ. ವಾರದ ಪಂಚಾಯ್ತಿಯಲ್ಲಿ ಕಿಚ್ಚನ ಕ್ಲಾಸ್​ಗೆ ಮನೆ ಮಂದಿ ಸುಸ್ತು ಬಡಿದಿದ್ದಾರೆ. ‘ನಾನು ಹಾಗೂ ಸಂತೋಷ್ ಜೋಕರ್ ರೀತಿ ಕಾಣಿಸಿದೆವು’ ಎಂಬುದನ್ನು ವಿನಯ್ ಒಪ್ಪಿಕೊಂಡಿದ್ದಾರೆ.

ಈ ವಾರ ಸ್ನೇಹಿತ್ ಅವರನ್ನು ಭಾಗ್ಯಶ್ರೀ ನಾಮಿನೇಟ್ ಮಾಡಿದರು. ಅವರು ನೀಡಿದ ಕಾರಣ ಸಿಲ್ಲಿ ಎಂದು ಕೆಲವರಿಗೆ ಅನಿಸಿತು. ಆದಾಗ್ಯೂ ಸ್ನೇಹಿತ್ ಅವರು ಇದನ್ನು ಸ್ವೀಕರಿಸಿದರು ಮತ್ತು ಚಾಲೆಂಜ್ ಆಗಿ ತೆಗೆದುಕೊಂಡರು. ಆದರೆ, ಇದನ್ನು ತುಕಾಲಿ ಸಂತೋಷ್ ಪ್ರಶ್ನೆ ಮಾಡಿದರು. ‘ಆ ಹುಡಗನನ್ನು ಯಾಕೆ ನಾಮಿನೇಟ್ ಮಾಡಿದಿರಿ. ಅವನು ಈಗತಾನೇ ಆಟ ಶುರು ಮಾಡಿದ್ದಾನೆ. ಕಡಿಮೆ ವೋಟ್ ಬಿದ್ದು ಮನೆಯಿಂದ ಹೊರಹೋದರೆ’ ಎಂದು ಸಂತೋಷ್​ ಕೇಳುತ್ತಲೇ ಬಂದರು. ಇದಕ್ಕೆ ವಿನಯ್ ಕೂಡ ಧ್ವನಿ ಗೂಡಿಸಿದರು. ಅವರು ಕೂಡ ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡೋಕೆ ಶುರು ಮಾಡಿದರು.

ಇದನ್ನೂ ಓದಿ: ‘ಕಾಮಿಡಿನೇ ನಿಮ್ಮ ಅಸ್ತ್ರ ಮಾಡಿಕೊಳ್ಳಬೇಡಿ, ವಿನಯ್ ಎಂಬ ದೀಪಕ್ಕೆ ಎಷ್ಟು ಎಣ್ಣೆ ಸುರಿತೀರಾ?’; ತುಕಾಲಿಗೆ ಸುದೀಪ್ ಮಂಗಳಾರತಿ

ಭಾಗ್ಯಶ್ರೀ ಅವರು ಕೊನೆಗೆ ಕಣ್ಣೀರು ಹಾಕಿದರು. ಈ ವೇಳೆ ವಿನಯ್ ಅವರು ‘ಇದೆಲ್ಲ ಡ್ರಾಮಾ’ ಎಂದರು. ಇದು ಭಾಗ್ಯಶ್ರೀ ಅವರ ದುಃಖವನ್ನು ಮತ್ತಷ್ಟು ಹೆಚ್ಚಿಸಿತು. ಇತ್ತ ಕಿಚನ್​ನಲ್ಲಿದ್ದ ಸ್ನೇಹಿತ್ ಅವರು ಈ ಘಟನೆ ಬಗ್ಗೆ ಅಚ್ಚರಿ ಹೊರಹಾಕಿದ್ದರು. ‘ನನಗೇ ಈ ಬಗ್ಗೆ ತೊಂದರೆ ಇಲ್ಲ. ಅವರು ನಾಮಿನೇಟ್ ಮಾಡಿದ್ದನ್ನು ನಾನು ಸ್ವೀಕರಿಸಿದ್ದೀನಿ. ಇವರಿಗೆ ಏನು ಸಮಸ್ಯೆ’ ಎಂಬರ್ಥದಲ್ಲಿ ಮಾತನಾಡಿದ್ದರು. ಇದನ್ನು ವಿಕೆಂಡ್​ನಲ್ಲಿ ಸುದೀಪ್ ಚರ್ಚೆ ಮಾಡಿದ್ದಾರೆ. ‘ಸಂತೋಷ್ ಅವರೇ ನಾಮಿನೇಟ್ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಭಾಗ್ಯಶ್ರೀ ಅವರು ನಿಮಗೆ ಇಷ್ಟ ಬಂದಂತೆ ನಡೆದುಕೊಂಡರೆ ಮಾತ್ರ ಅವರು ಭಾಗ್ಯಶ್ರೀ, ಇಲ್ಲದಿದ್ದರೆ ಮತ್ಯಾವುದೋ ಶ್ರೀ ಅಲ್ಲವೇ’ ಎಂದು ಕೇಳಿದರು. ಇದಕ್ಕೆ ಸಂತೋಷ್​ಗೆ ಏನು ಹೇಳಬೇಕು ಎಂಬುದೇ ತಿಳಿಯಲಿಲ್ಲ.

ಇದನ್ನೂ ಓದಿ: ಆನೆ ಅಂದುಕೊಂಡು ಮೆರೆಯುತ್ತಿದ್ದ ವಿನಯ್​ ಮದವಿಳಿಸಿದ ‘ಹೆಬ್ಬುಲಿ’ ಕಿಚ್ಚ

‘ಅಲ್ಲಿ ಸ್ನೇಹಿತ್ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಇವರಿಗೆ ಯಾಕೆ ಬೇಕು ಎಂದು ಮಾತನಾಡುತ್ತಿದ್ದರು. ನೀವು ನೋಡಿದರೆ ಇಲ್ಲಿ ಈ ರೀತಿ ಡ್ರಾಮಾ ಎಂದೆಲ್ಲ ಹೇಳುತ್ತಿದ್ರಿ. ಹೇಳಿ ಈಗ ಯಾರದ್ದು ಡ್ರಾಮಾ? ನೀವು ಜನರ ಕಣ್ಣಿಗೆ ಹೇಗೆ ಕಾಣುತ್ತಿದ್ರಿ ಹೇಳಿ’ ಎಂದು ವಿನಯ್​ನ ಪ್ರಶ್ನೆ ಮಾಡಿದರು ಸುದೀಪ್. ‘ಡ್ರಾಮಾ ಶುರು ಮಾಡಿದ್ದು ಸಂತೋಷ್. ಮುಂದುವರಿಸಿಕೊಂಡು ಹೋಗಿದ್ದು ನಾನು. ಆ ಸಂದರ್ಭದಲ್ಲಿ ನಾವಿಬ್ಬರೂ ಜೋಕರ್ ರೀತಿ ಕಾಣುತ್ತಿದ್ದೆವು’ ಎಂದರು ವಿನಯ್. ‘ಸಂತೋಷ್ ಅವರೇ ನಿಮಗೇ ಬೇಕಾಗಿದ್ದು ಇದೇ ಅಲ್ಲವೇ? ಜೋಕರ್ ರೀತಿ ಕಾಣೋದು’ ಎಂದು ಸುದೀಪ್ ಗಂಭೀರವಾಗಿಯೇ ಹೇಳಿದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ನವೆಂಬರ್ 4ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ವೀಕ್ಷಿಸಲು ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸ್ವಂತ ಮನೆ ಕನಸು ನನಸಾಗಲು ಏನು ಮಾಡಬೇಕು ನೋಡಿ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?