ಹಾದಿ ತಪ್ಪಿದ ಆನೆ, ಹುಲಿಗಳಿಗೆ ಪಂಚ್ ಕೊಟ್ಟ ಕಿಚ್ಚ; ಸುದೀಪ್​​ಗೆ ವೀಕ್ಷಕರ ಸೆಲ್ಯೂಟ್

ಈ ವಾರದ ಎಪಿಸೋಡ್​ನಲ್ಲಿ ಸುದೀಪ್​ ಅನೇಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರ ಕೋಪಕ್ಕೆ ಮನೆ ಮಂದಿ ದಂಗಾಗಿದ್ದಾರೆ. ‘ಸುದೀಪ್ ಬೆಸ್ಟ್ ನಿರೂಪಕ’ ಎಂದು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಸುದೀಪ್ ಅವರಿಗೆ ವೀಕ್ಷಕರು ಸೆಲ್ಯೂಟ್ ಹೊಡೆದಿದ್ದಾರೆ.

ಹಾದಿ ತಪ್ಪಿದ ಆನೆ, ಹುಲಿಗಳಿಗೆ ಪಂಚ್ ಕೊಟ್ಟ ಕಿಚ್ಚ; ಸುದೀಪ್​​ಗೆ ವೀಕ್ಷಕರ ಸೆಲ್ಯೂಟ್
ಬಿಗ್ ಬಾಸ್
Follow us
| Updated By: ರಾಜೇಶ್ ದುಗ್ಗುಮನೆ

Updated on:Nov 04, 2023 | 11:43 PM

ಕನ್ನಡದಲ್ಲಿ ‘ಬಿಗ್ ಬಾಸ್’ನ 10ನೇ ಸೀಸನ್​ ನಡೆಯುತ್ತಿದೆ. ಇದರ ಜೊತೆಗೆ ಒಂದು ಒಟಿಟಿ ಸೀಸನ್ ಹಾಗೂ ಮಿನಿ ಸೀಸನ್ ಕೂಡ ನಡೆದಿದೆ. ಇದೆಲ್ಲದರ ನಿರೂಪಣೆ ಮಾಡಿದ್ದು ಕಿಚ್ಚ ಸುದೀಪ್ (Kichcha Sudeep) ಅವರು. ಬಿಗ್ ಬಾಸ್​ನ ಬೇರೆ ಯಾವುದೇ ಹೀರೋ ನಡೆಸಿಕೊಟ್ಟರೂ ಇಷ್ಟು ಉತ್ತಮವಾಗಿ ಮೂಡಿ ಬರುತ್ತಿರಲಿಲ್ಲ ಎನ್ನುವ ಅಭಿಪ್ರಾಯ ಒಂದು ವಲಯದಲ್ಲಿ ಇದೆ. ಇದನ್ನು ಕಿಚ್ಚ ಸುದೀಪ್ ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಈ ವಾರದ ಎಪಿಸೋಡ್​ನಲ್ಲಿ ಅವರು ಅನೇಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರ ಕೋಪಕ್ಕೆ ಮನೆ ಮಂದಿ ದಂಗಾಗಿದ್ದಾರೆ. ‘ಸುದೀಪ್ ಬೆಸ್ಟ್ ನಿರೂಪಕ’ ಎಂದು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಸುದೀಪ್ ಅವರಿಗೆ ವೀಕ್ಷಕರು ಸೆಲ್ಯೂಟ್ ಹೊಡೆದಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ನಾಲ್ಕನೇ ವೀಕ್​ನಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆದಿದ್ದವು. ಇದಕ್ಕೆ ಕಾರಣ ಆಗಿದ್ದು ವಿನಯ್ ಗೌಡ ಹಾಗೂ ಅವರ ಗುಂಪಿನವರ ನಡೆ. ಅವರು ಮನಬಂದಂತೆ ವರ್ತಿಸಿದ್ದರು. ಬಳೆ ಶಬ್ದ ಬಳಕೆ ಮಾಡಿ ಹೆಣ್ಣುಮಕ್ಕಳು ವೀಕ್ ಎಂಬರ್ಥದಲ್ಲಿ ಮಾತನಾಡಿದ್ದರು. ಇನ್ನು, ತುಕಾಲಿ ಸಂತೋಷ್​ ಅವರು ಮನೆಯಲ್ಲಿರುವ ಕೆಲ ಸ್ಪರ್ಧಿಗಳನ್ನು ಟಾರ್ಗೆಟ್ ಮಾಡಿದ್ದರು. ಇನ್ನು ನಮ್ರತಾ ಅವರು ವಿನಯ್ ಅವರನ್ನು ಬೆಂಬಲಿಸುತ್ತಾ ಬಂದರು. ಅವರು ಚಮಚಾಗಿರಿ ಮಾಡಿದರು ಅನ್ನೋದು ಎಲ್ಲರಿಗೂ ಗೊತ್ತಾಯಿತು. ಇನ್ನು ವಿನಯ್ ಕಡೆಯಿಂದ ಕೆಟ್ಟ ಶಬ್ದಗಳ ಬಳಕೆಯೂ ಆಯಿತು. ಇದಕ್ಕೆಲ್ಲ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಸುದೀಪ್ ಅವರು ಮೊದಲು ತೆಗೆದುಕೊಂಡಿದ್ದು ನಮ್ರತಾ ವಿಚಾರವನ್ನು. ‘ಹೆಣ್ಣುಮಕ್ಕಳಿಗೆ ರೆಸ್ಪೆಕ್ಟ್ ಕೊಡೋದು ಕಲಿತುಕೋ’ ಎಂದು ಮೈಕೆಲ್​ಗೆ ಪಾಠ ಮಾಡಿದ್ದರು ನಮ್ರತಾ. ಆದರೆ, ವಿನಯ್ ಅವರು ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದಾಗ, ‘ಗಂಡಸು ತರ ಆಡು ಬಳೆ ಹಾಕಿದ ಹೆಂಗಸಿನ ರೀತಿ ಆಡಬೇಡ’ ಎಂದು ಹೇಳಿದಾಗ ಬಾಯಿಮುಚ್ಚಿಕೊಂಡಿದ್ದರು. ಈ ವಿಚಾರದಲ್ಲಿ ಸುದೀಪ್ ಅವರು ನಮ್ರತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮುಂದುವರಿದು, ಬಳೆ ಹಾಕಿಕೊಂಡವರು ವೀಕ್ ಎಂಬರ್ಥದಲ್ಲಿ ಮಾತನಾಡಿದ ವಿನಯ್ ಗೌಡಗೆ ಅವರು ಭರ್ಜರಿ ಕ್ಲಾಸ್ ತೆಗೆದುಕೊಂಡರು. ಮದವೇರಿದ ಆನೆಯಂತೆ ಅಡ್ಡಾದಿಡ್ಡಿ ಓಡಾಡುತ್ತಿದ್ದ ಅವರಿಗೆ ಅಂಕುಶದ ಮೂಲಕ ಹದಕ್ಕೆ ತಂದರು. ಸುದೀಪ್ ಕೇಳುತ್ತಿದ್ದ ಪ್ರತಿ ಪ್ರಶ್ನೆಗೆ, ‘ನನ್ನದು ತಪ್ಪಾಯ್ತು ಕ್ಷಮಿಸಿ’ ಎಂದು ಹೇಳುವುದು ಬಿಟ್ಟು ವಿನಯ್​ಗೆ ಬೇರೆ ಮಾತೇ ಬರುತ್ತಿರಲಿಲ್ಲ.

ಈ ವಾರ ವಿನಯ್ ಅವರು ಉತ್ತಮ ಎನ್ನುವ ಪಟ್ಟ ಪಡೆದರು. ಇದು ಬಯಾಸ್ಡ್​ ಆಗಿತ್ತು ಎಂದು ಸುದೀಪ್ ಅಭಿಪ್ರಾಯಪಟ್ಟರು. ಈ ಕಾರಣಕ್ಕೆ ಹೊಸದಾಗಿ ಎಲ್ಲರ ಬಳಿ ವೋಟ್ ಮಾಡಿಸಿದರು. ಆಗ ಸ್ನೇಹಿತ್​ಗೆ ಉತ್ತಮ ಎನ್ನುವ ಪಟ್ಟ ಸಿಕ್ಕಿತು. ಮನೆಯಲ್ಲಿ ಓಪನ್ ಆಗಿ ನಡೆಯುತ್ತಿರುವ ಗುಂಪುಗಾರಿಕೆ ಬಗ್ಗೆ ಪಾಠ ಮಾಡಿದರು.

ಮುಂದಿನ ಸರದಿ ತುಕಾಲಿ ಸಂತೋಷ್ ಅವರದ್ದು. ಭಾಗ್ಯಶ್ರೀ ಅವರು ಸ್ನೇಹಿತ್ ಗೌಡ ಅವರನ್ನು ನಾಮಿನೇಟ್ ಮಾಡಿದ್ದರು. ಈ ನಾಮಿನೇಷನ್ ಸರಿ ಇಲ್ಲ ಎಂದು ಸಂತೋಷ್ ಹಾಗೂ ವಿನಯ್ ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲ ಪದೇ ಪದೇ ಭಾಗ್ಯಶ್ರೀ ಅವರಿಗೆ ಚುಚ್ಚಿ ಮಾತನಾಡಿದ್ದರು. ಇದನ್ನು ಸುದೀಪ್ ಪ್ರಶ್ನೆ ಮಾಡಿದ್ದಾರೆ. ತುಕಾಲಿ ಸಂತೋಷ್​ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿನಯ್ ಪರ ಮಾತನಾಡುತ್ತಿದ್ದ ಸಂತೋಷ್​​ಗೆ ಸರಿಯಾಗಿ ಮಂಗಳಾರತಿ ಆಗಿದೆ.

ಈ ವಾರದ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಬಳೆ ಹಾಕಿದ ಕೈಗೆ! ವಿನಯ್​ಗೆ ತಿರುಗೇಟು ನೀಡುವಾಗ ಸಂಗೀತಾ ಅವರು ‘ಬಳೆ ಹಾಕ್ಕೊಂಡಿದೀನಿ ನೋಡೋ ನೋಡು’ ಎಂದು ಹೇಳಿದ್ದರು. ಆ ಸಂದರ್ಭದ ಫೋಟೋನ ಸೆರೆ ಹಿಡಿದು ಮುಚ್ಚಿದ ಲಕೋಟೆಯಲ್ಲಿ ವಿನಯ್​ಗೆ ನೀಡಲಾಯಿತು. ಅವರ ಕೈಯಿಂದಲೇ ಅದನ್ನು ಓಪನ್ ಮಾಡಿಸಲಾಯಿತು.

ಇದನ್ನೂ ಓದಿ: ಚಮಚ ನಮ್ರತಾ: ವ್ಯಕ್ತಿತ್ವ ಬದಲಿಸಿಕೊಂಡಿಲ್ಲ ಎಂದು ತೋರಿಸಿಕೊಟ್ಟ ಸುದೀಪ್

ಸುದೀಪ್ ನಿರೂಪಣೆಗೆ, ಅವರು ಕ್ಲಾಸ್ ತೆಗೆದುಕೊಂಡ ರೀತಿಗೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸುದೀಪ್ ರೀತಿಯ ನಿರೂಪಕ ಮತ್ತೊಬ್ಬರು ಸಿಗಲು ಸಾಧ್ಯವೇ ಇಲ್ಲ ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ. ಸುದೀಪ್​ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ನಿರೂಪಣೆಯ ತುಣುಕುಗಳು ವೈರಲ್ ಆಗುತ್ತಿವೆ. ಕಲರ್ಸ್ ಕನ್ನಡದಲ್ಲಿ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:43 pm, Sat, 4 November 23

ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ