Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣು ಟಾರ್ಗೆಟ್ ಯಾಕೆ? ವಿನಯ್​ಗೆ ಖಡಕ್ ಎಚ್ಚರಿಕೆ ನೀಡಿದ ಸುದೀಪ್

Bigg Boss: ಕಳೆದ ವಾರ ನಡೆದ ಟಾಸ್ಕ್​ನಲ್ಲಿ ಬಿಗ್​ಬಾಸ್ ಮನೆಯಲ್ಲಿ ವಿನಯ್ ತೋರಿದ ವರ್ತನೆ, ಮಹಿಳೆಯರೊಟ್ಟಿಗೆ ನಡೆದುಕೊಂಡ ರೀತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ವಾರಾಂತ್ಯದ ಎಪಿಸೋಡ್​ನಲ್ಲಿ ಸುದೀಪ್, ವಿನಯ್​ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಂತಿದ್ದಾರೆ.

ಹೆಣ್ಣು ಟಾರ್ಗೆಟ್ ಯಾಕೆ? ವಿನಯ್​ಗೆ ಖಡಕ್ ಎಚ್ಚರಿಕೆ ನೀಡಿದ ಸುದೀಪ್
ವಿನಯ್-ಸುದೀಪ್
Follow us
ಮಂಜುನಾಥ ಸಿ.
|

Updated on: Nov 04, 2023 | 4:45 PM

ಬಿಗ್​ಬಾಸ್ ಮನೆಯಲ್ಲಿ ಕಳೆದ ವಾರ ನಡೆದ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಅದರಲ್ಲಿಯೂ ವಿನಯ್ (Vinay Gowda), ಬಿಗ್​ಬಾಸ್ ಮನೆಯಲ್ಲಿ ನಡೆದುಕೊಂಡ ಬಗೆಯಂತೂ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಡ್ರೋನ್ ಪ್ರತಾಪ್ ಅನ್ನು ಆಡಿಕೊಂಡ ರೀತಿಯಾಗಲಿ, ಆ ಬಳಿಕ ಹಳ್ಳಿ ಟಾಸ್ಕ್​ನಲ್ಲಿ ಸಂಗೀತಾ ಹಾಗೂ ಇತರರೊಟ್ಟಿಗೆ ವಿನಯ್ ಹಾಗೂ ನಮ್ರತಾ ನಡೆದುಕೊಂಡ ಬಗೆಯಾಗಲಿ ತೀವ್ರ ಟೀಕೆಗೆ ಗುರಿಯಾಗಿದೆ. ಬಿಗ್​ಬಾಸ್ ಮನೆಯ ದೈತ್ಯ ವಿನಯ್​ಗೆ ಮನೆಯ ಸದಸ್ಯರು ಎದುರು ಮಾತನಾಡಲು ಹಿಂದೇಟು ಹಾಕುತ್ತಾರಾದ್ದರಿಂದ ವಾರಾಂತ್ಯದಲ್ಲಿ ಸುದೀಪ್ ಅವರೇ ಬಂದು ವಿನಯ್​ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಪ್ರೇಕ್ಷಕರಿಗಿತ್ತು. ಅದು ನಿಜ ಆದಂತಿದೆ.

ಬಿಗ್​ಬಾಸ್​ನ ವಾರಾಂತ್ಯದ ಪಂಚಾಯಿತಿ ಎಪಿಸೋಡ್​ನ ಹೊಸ ಪ್ರೋಮೋ ಒಂದನ್ನು ಕಲರ್ಸ್ ವಾಹಿನಿ ಬಿಡುಗಡೆ ಮಾಡಿದ್ದು, ಕಿಚ್ಚ ಸುದೀಪ್, ತಮ್ಮ ಎಂದಿನ ಶೈಲಿಯಲ್ಲಿ, ಮನೆಯ ಕ್ಯಾಪ್ಟನ್ ವಿನಯ್​ಗೆ ಖಡಕ್​ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುದೀಪ್ ಕೇಳಿದ ಪ್ರಶ್ನೆಗಳಿಗೆ ಕ್ಷಮಿಸಿ ಎಂದು ತಲೆ ಬಗ್ಗಿಸಿದ್ದಾರೆ ವಿನಯ್. ಕೆಲವೇ ಸೆಕೆಂಡ್​ಗಳ ಪ್ರೋಮೋ ಇದಾಗಿದ್ದು, ಇಂದಿನ ಶೋನಲ್ಲಿ ಸುದೀಪ್, ವಿನಯ್​ರ ಬೆವರಿಳಿಸಿರುವುದು ಖಾತ್ರಿ.

ಇದೇ ದಿನ ಬೆಳಿಗ್ಗೆ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸಹ ಸುದೀಪ್ ಅವರು ಬಳೆಗಳ ಬಗ್ಗೆ ಮಾತನಾಡಿದ್ದರು. ಹಿರಿಯರು ಸಂಪ್ರದಾಯ ಅನ್ನುತ್ತಾರೆ, ಕಿರಿಯರು ಶಕ್ತಿ ಎನ್ನುತ್ತಾರೆ. ಆದರೆ ಕೆಲವರು ಬಳೆಗಳನ್ನು ವೀಕ್​ನೆಸ್ ಅಂದುಕೊಂಡಿರುವುದು ಏಕೆ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅಸಲಿಗೆ ವಿನಯ್, ಬಿಗ್​ಬಾಸ್ ಮನೆಯಲ್ಲಿ ಬಳೆಗಳ ಬಗ್ಗೆ ಮಾತನಾಡಿದ್ದರು. ಸಂಗೀತಾ ಹಾಗೂ ಕಾರ್ತಿಕ್ ಅವರುಗಳನ್ನು ಹೀಗಳೆಯಲು ಬಳೆಗಳ ವಿಷಯ ತೆಗೆದಿದ್ದರು. ಈಗ ಅದೇ ವಿಷಯದ ಬಗ್ಗೆ ಸುದೀಪ್ ಬಿಗ್​ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯ ಡವ್ ರಾಣಿ ನಮ್ರತಾ ಏಟಿಗೆ ಮನೆಯವರೆಲ್ಲ ಸುಸ್ತೋ-ಸುಸ್ತು

ಈ ವಾರದ ಟಾಸ್ಕ್​ನಲ್ಲಿ ಬಿಗ್​ಬಾಸ್ ಸ್ಪರ್ಧಿಗಳು ಪರಸ್ಪರ ಬಹಳ ಕಿತ್ತಾಡಿಕೊಂಡರು. ವಿನಯ್ ಅಂತೂ ಮಹಿಳೆಯರಿಗೆ ಕಿಂಚಿತ್ತೂ ಗೌರವ ಕೊಡದೆ ಮಾತನಾಡಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ವಿನಯ್ ಎದುರಾಳಿ ತಂಡದ ನಾಯಕಿ ಆಗಿದ್ದ ಸಂಗೀತಾ, ವಿನಯ್ ಅನ್ನು ಧೈರ್ಯವಾಗಿಯೇ ಎದುರಿಸಿದರು. ಹಾಗಿದ್ದರೂ ಸಹ ಅಂತಿಮವಾಗಿ ಸಂಗೀತಾ ವಾರದ ಕಳಪೆ ಆಟಗಾರ್ತಿ ಆದರು, ವಿನಯ್ ವಾರದ ನಾಯಕ ಎನಿಸಿಕೊಂಡರು. ಪ್ರಸ್ತುತ ಬಿಗ್​ಬಾಸ್ ಕನ್ನಡ ಸೀಸನ್ 10ರ ಶನಿವಾರದ ಎಪಿಸೋಡ್​ನ ಪ್ರೋಮೋ ಅಷ್ಟೆ ಬಿಡುಗಡೆ ಆಗಿದೆ. ಎಪಿಸೋಡ್​ ಕಲರ್ಸ್​ ವಾಹಿನಿಯಲ್ಲಿ ರಾತ್ರಿ 9 ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ