AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಚಮಚ' ನಮ್ರತಾ: ವ್ಯಕ್ತಿತ್ವ ಬದಲಿಸಿಕೊಂಡಿಲ್ಲ ಎಂದು ತೋರಿಸಿಕೊಟ್ಟ ಸುದೀಪ್

‘ಚಮಚ’ ನಮ್ರತಾ: ವ್ಯಕ್ತಿತ್ವ ಬದಲಿಸಿಕೊಂಡಿಲ್ಲ ಎಂದು ತೋರಿಸಿಕೊಟ್ಟ ಸುದೀಪ್

ಮಂಜುನಾಥ ಸಿ.
|

Updated on: Nov 04, 2023 | 10:10 PM

Share

Bigg Boss: ಬಿಗ್​ಬಾಸ್ ಮನೆಯಲ್ಲಿ ನಮ್ರತಾರ ವ್ಯಕ್ತಿತ್ವ ಗಮನಿಸಿದ ಜನ ಎರಡು ವಾರದ ಹಿಂದೆ ಅವರಿಗೆ ಚಮಚವನ್ನು ಉಡುಗೊರೆಯಾಗಿ ನೀಡಿದ್ದರು. ಇಂದಿಗೂ ನಮ್ರತಾ ಆ ತಮ್ಮ ವ್ಯಕ್ತಿತ್ವದಿಂದ ಹೊರ ಬಂದಿಲ್ಲವೆಂದು ಸುದೀಪ್ ಉದಾಹರಣೆ ಸಹಿತ ಸಾಬೀತು ಮಾಡಿದರು.

ಬಿಗ್​ಬಾಸ್ (Bigg Boss) ಮನೆಯಲ್ಲಿ ಕಳೆದ ವಾರ ವಿನಯ್ (Vinay) ಹಾಗೂ ಇತರೆ ಕೆಲವು ಸ್ಪರ್ಧಿಗಳ ಅಬ್ಬರ ಜೋರಾಗಿ ನಡೆದಿದೆ. ಶನಿವಾರದ ಎಪಿಸೋಡ್​ನಲ್ಲಿ ಬಂದ ಸುದೀಪ್ ಮನೆಯ ಸದಸ್ಯರಿಗೆ ತುಸು ಗಟ್ಟಿ ದನಿಯಲ್ಲಿಯೇ ಬುದ್ಧಿವಾದ ಹೇಳಿದ್ದಾರೆ. ಎರಡು ವಾರದ ಹಿಂದೆ ಬಿಗ್​ಬಾಸ್ ಮನೆ ಸ್ಪರ್ಧಿಗಳಿಗೆ ಜನರು ಕೆಲವು ಉಡುಗೊರೆಗಳನ್ನು ನೀಡಿದ್ದರು, ಆಗ ನಮ್ರತಾಗೆ ಚಮಚ ನೀಡಲಾಗಿತ್ತು. ಶನಿವಾರದ ಎಪಿಸೋಡ್​ನಲ್ಲಿ ಮಾತನಾಡಿದ ಸುದೀಪ್, ನಮ್ರತಾ ಇನ್ನೂ ತಮ್ಮ ಚಮಚಾಗಿರಿ ಬಿಟ್ಟಿಲ್ಲವೆಂಬುದನ್ನು ಉದಾಹರಣೆ ಸಹಿತ ಸಾಬೀತು ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More