Kichcha Sudeep: ಸುದೀಪ್ ನಿಜವಾದ ವಯಸ್ಸೆಷ್ಟು? ಬಿಗ್​ ಬಾಸ್​ನಲ್ಲಿ ರಿವೀಲ್ ಮಾಡಿದ ಕಿಚ್ಚ

ಸುದೀಪ್ ಅವರು ಫಿಟ್ನೆಸ್​ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಜಿಮ್​ನಲ್ಲಿ ಸಾಕಷ್ಟು ಹೊತ್ತು ಸಮಯ ಕಳೆಯುತ್ತಾರೆ. ಈ ಕಾರಣದಿಂದಲೇ ಸುದೀಪ್ ಅವರು ಸಖತ್ ಫಿಟ್ ಆಗಿ ಕಾಣಿಸುತ್ತಾರೆ. ಅವರಿಗೆ 50 ವರ್ಷ ದಾಟಿದೆ ಎಂದು ಯಾರೂ ಹೇಳೋಕೆ ಸಾಧ್ಯವಿಲ್ಲ.

Kichcha Sudeep: ಸುದೀಪ್ ನಿಜವಾದ ವಯಸ್ಸೆಷ್ಟು? ಬಿಗ್​ ಬಾಸ್​ನಲ್ಲಿ ರಿವೀಲ್ ಮಾಡಿದ ಕಿಚ್ಚ
ಸುದೀಪ್
Follow us
| Updated By: ರಾಜೇಶ್ ದುಗ್ಗುಮನೆ

Updated on:Nov 19, 2023 | 8:13 AM

ಕಿಚ್ಚ ಸುದೀಪ್ (Sudeep) ಅವರ ವಯಸ್ಸಿನ ಬಗ್ಗೆ ಕೆಲವರಿಗೆ ಗೊಂದಲ ಇದೆ. ವಿಕಿಪೀಡಿಯಾದಲ್ಲಿ ತಪ್ಪು ಮಾಹಿತಿ ಇದೆ ಅನ್ನೋದು ಕೆಲವರ ಆರೋಪ. ಸುದೀಪ್ ಅವರು ಈಗ ಬಿಗ್ ಬಾಸ್ ವೇದಿಕೆ ಮೇಲೆ ತಮ್ಮ ವಯಸ್ಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಶನಿವಾರದ ಎಪಿಸೋಡ್​ನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಬರುವುದಕ್ಕೂ ಒಂದು ಕಾರಣ ಇದೆ. ಅಷ್ಟಕ್ಕೂ ವೇದಿಕೆ ಮೇಲೆ ನಡೆದ ಘಟನೆ ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಸುದೀಪ್ ವಯಸ್ಸಿನ ಬಗ್ಗೆ ಮಾತನಾಡೋಕೆ ಮುಖ್ಯ ಕಾರಣ ಡ್ರೋನ್ ಪ್ರತಾಪ್. ಅವರು ಈ ವಿಚಾರ ತೆಗೆದಿದ್ದರಿಂದಲೇ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ. ಡ್ರೋನ್ ಪ್ರತಾಪ್ ಮೂರು ವರ್ಷಗಳಿಂದ ಕುಟುಂಬದ ಜೊತೆ ಮಾತನಾಡಿಯೇ ಇರಲಿಲ್ಲ. ಅವರಿಗೆ ಈ ವಾರ ಮನೆಯಿಂದ ಬಂದ ಪತ್ರವೂ ಸಿಗಲಿಲ್ಲ. ಈ ಕಾರಣಕ್ಕೆ ಮನೆಯಿಂದ ಫೋನ್ ಮಾಡಿಸಲಾಯಿತು. ವೀಕೆಂಡ್ ಎಪಿಸೋಡ್​ನಲ್ಲೇ ಈ ಘಟನೆ ನಡೆದಿದೆ. ಅಪ್ಪನ ಜೊತೆ ಮಾತನಾಡಿ ಡ್ರೋನ್ ಪ್ರತಾಪ್ ಸಖತ್ ಖುಷಿಪಟ್ಟರು. ಸುದೀಪ್ ಜೊತೆ ಖುಷಿಯಿಂದ ಮಾತನಾಡಿದರು ಪ್ರತಾಪ್.

‘ಅಮ್ಮ ನಿಮ್ಮನ್ನು ಸಣ್ಣ ವಯಸ್ಸಿನಿಂದ ನೋಡುತ್ತಾ ಬರುತ್ತಿದ್ದಾರೆ. ಅವರು ನಿಮ್ಮ ದೊಡ್ಡ ಅಭಿಮಾನಿ’ ಎಂದರು ಪ್ರತಾಪ್. ‘ಸಣ್ಣ ವಯಸ್ಸಿನಿಂದಲೇ? ಹಾಗಾದರೆ ನನಗೆ ಎಷ್ಟು ವಯಸ್ಸಾಗಿದೆ’ ಎಂದು ಪ್ರಶ್ನೆ ಮಾಡಿದರು ಸುದೀಪ್. ‘ಅಮ್ಮ ಸಣ್ಣವನಿದ್ದಾಗಿನಿಂದ ಅಲ್ಲ, ನಾನು ಸಣ್ಣವನಿದ್ದಾಗಿನಿಂದ’ ಎಂದರು ಪ್ರತಾಪ್. ಆಗ ಸುದೀಪ್ ಸಮಾಧಾನ ಆದವರಂತೆ ನಟಿಸಿದರು.

ಕಾರ್ತಿಕ್​ಗೆ ತಮ್ಮ ವಯಸ್ಸು ಊಹೆ ಮಾಡುವಂತೆ ಹೇಳಿದರು ಕಿಚ್ಚ. ‘30 ವರ್ಷ ಇರಬಹುದು’ ಎಂದರು ಕಾರ್ತಿಕ್. ‘ಮೂವತ್ತಲ್ಲ, ಇಪ್ಪತ್ತೊಂಬತ್ತು. ನನ್ನ ವಯಸ್ಸು 29 ದಾಟಿ ಹೋಗುವುದೇ ಇಲ್ಲ. ಬಹಳ ವರ್ಷದಿಂದ ಅಲ್ಲೇ ಇದ್ದೇನೆ’ ಎಂದು ನಕ್ಕರು ಸುದೀಪ್. ಮನೆಮಂದಿ ಕೂಡ ಜೋರಾಗಿಯೇ ನಕ್ಕರು. ‘ಕಾರ್ತಿಕ್ ಅವರೇ ನಿಮ್ಮ ವಯಸ್ಸು ಹೇಳಿ’ ಎಂದರು ಸುದೀಪ್. ಆಗ ಕಾರ್ತಿಕ್ ಯೋಚಿಸೋಕೆ ಆರಂಭಿಸಿದರು. ‘ನನ್ನ ವಯಸ್ಸು ನಿಮ್ಮ ವಯಸ್ಸಿನ ಆಸುಪಾಸಿನಲ್ಲೇ ಇದೆ’ ಎಂದರು.

ಸುದೀಪ್ ಅವರು ಫಿಟ್ನೆಸ್​ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಜಿಮ್​ನಲ್ಲಿ ಸಾಕಷ್ಟು ಹೊತ್ತು ಸಮಯ ಕಳೆಯುತ್ತಾರೆ. ಈ ಕಾರಣದಿಂದಲೇ ಸುದೀಪ್ ಅವರು ಸಖತ್ ಫಿಟ್ ಆಗಿ ಕಾಣಿಸುತ್ತಾರೆ. ಅವರಿಗೆ 50 ವರ್ಷ ದಾಟಿದೆ ಎಂದು ಯಾರೂ ಹೇಳೋಕೆ ಸಾಧ್ಯವಿಲ್ಲ. ಆ ರೀತಿಯಲ್ಲಿ ಅವರು ಬಾಡಿ ನಿರ್ವಹಿಸಿದ್ದಾರೆ. ಹೀಗಾಗಿ, ಸುದೀಪ್ ಅವರಿಗೆ 30 ವರ್ಷ ಎಂಬ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ‘ಹೊರಗೆ ಹೋದ್ಮೇಲೆ ನಮಗೆ ಇಡ್ತಾರೆ’; ವೇದಿಕೆ ಮೇಲೆ ಆರ್ಯವರ್ಧನ್​​ಗೆ ಸುದೀಪ್ ತಿರುಗೇಟು

ಸುದೀಪ್ ಅವರು ಸಿನಿಮಾ ಕೆಲಸಗಳ ಜೊತೆ ಬಿಗ್ ಬಾಸ್ ನಿರೂಪಣೆಯನ್ನೂ ಮಾಡುತ್ತಿದ್ದಾರೆ. ‘ಮ್ಯಾಕ್ಸ್’ ಮೊದಲಾದ ಚಿತ್ರಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಬಿಗ್ ಬಾಸ್​ಗೂ ಅವರು ಸಮಯ ನೀಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:56 am, Sun, 19 November 23