ಈಶಾನಿ ಬಿಗ್​ಬಾಸ್​ನಿಂದ ಔಟ್ ಆಗಲು ಕಾರಣವಾಗಿದ್ದು ಇದೇ ವಿಚಾರ..

ಮೈಕೆಲ್​​ ಹಾಗೂ ಈಶಾನಿಗೆ ಸ್ಪಷ್ಟವಾಗಿ ಕನ್ನಡ ಬರುವುದಿಲ್ಲ. ಈಶಾನಿಗೆ ಹೋಲಿಕೆ ಮಾಡಿದರೆ ಮೈಕೆಲ್ ಉತ್ತಮವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ಅವರು ಕನ್ನಡ ಕಲಿಯುವ ಪ್ರಯತ್ನ ಮಾಡಿದರು. ಆದರೆ, ಈಶಾನಿ ಕಡೆಯಿಂದ ಆ ಪ್ರಯತ್ನ ಆಗಿಲ್ಲ.

ಈಶಾನಿ ಬಿಗ್​ಬಾಸ್​ನಿಂದ ಔಟ್ ಆಗಲು ಕಾರಣವಾಗಿದ್ದು ಇದೇ ವಿಚಾರ..
ಈಶಾನಿ
Follow us
ರಾಜೇಶ್ ದುಗ್ಗುಮನೆ
|

Updated on: Nov 19, 2023 | 6:57 AM

ಕಳೆದ ವಾರ ಬಿಗ್ ಬಾಸ್​ನಲ್ಲಿ ನಡೆದ ಹೈಡ್ರಾಮಾದಿಂದ ಎಲಿಮಿನೇಷನ್ ನಡೆದಿರಲಿಲ್ಲ. ಹೀಗಾಗಿ, ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಹೇಳಲಾಗಿತ್ತು. ಅದು ನಿಜವಾಗಿದೆ. ಶನಿವಾರದ ಎಪಿಸೋಡ್​ನಲ್ಲಿ (ನವೆಂಬರ್ 18) ಸಾಮಾನ್ಯವಾಗಿ ಯಾರನ್ನೂ ಎಲಿಮಿನೇಟ್​ ಮಾಡುವುದಿಲ್ಲ. ಈಗ ಶನಿವಾರವೇ ಒಬ್ಬರು ಔಟ್ ಆಗಿದ್ದಾರೆ. ಈಶಾನಿ (Eshani) ದೊಡ್ಮನೆಯಿಂದ ಹೊರ ಬಂದಿದ್ದಾರೆ. ಅವರು ಔಟ್ ಆಗೋಕೆ ಕಾರಣವಾದ ವಿಚಾರಗಳು ಸಾಕಷ್ಟಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮೈಕೆಲ್​​ ಹಾಗೂ ಈಶಾನಿಗೆ ಸ್ಪಷ್ಟವಾಗಿ ಕನ್ನಡ ಬರುವುದಿಲ್ಲ. ಈಶಾನಿಗೆ ಹೋಲಿಕೆ ಮಾಡಿದರೆ ಮೈಕೆಲ್ ಉತ್ತಮವಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ಅವರು ಕನ್ನಡ ಕಲಿಯುವ ಪ್ರಯತ್ನ ಮಾಡಿದರು. ಆದರೆ, ಈಶಾನಿ ಕಡೆಯಿಂದ ಆ ಪ್ರಯತ್ನ ಆಗಿಲ್ಲ. ಹೀಗಾಗಿ, ಅವರಿಗೆ ಭಾಷೆಯೇ ದೊಡ್ಡ ಚಾಲೆಂಜ್ ಆಯಿತು.

ಇನ್ನು, ಈಶಾನಿ ಅವರ ಪರ್ಫಾರ್ಮೆನ್ಸ್ ಬಗ್ಗೆ ಸಾಕಷ್ಟು ಜನರು ಟೀಕೆ ಮಾಡಿದ್ದರು. ಈಶಾನಿ ಅವರು ಉತ್ತಮವಾಗಿ ಆಟ ಆಡುತ್ತಿಲ್ಲ ಎನ್ನುವುದು ಜನರಿಗೆ ಸ್ಪಷ್ಟವಾಗಿದೆ. ಅವರು ಸದಾ ಮೈಕೆಲ್ ಅಥವಾ ವಿನಯ್ ಗ್ಯಾಂಗ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಈ ಕಾರಣದಿಂದ ಅವರು ಹೆಚ್ಚು ಹೈಲೈಟ್ ಆಗಲೇ ಇಲ್ಲ. ಇದು ಕೂಡ ಅವರಿಗೆ ದೊಡ್ಡ ಹಿನ್ನಡೆ ಆಗಿದೆ.

ಇನ್ನು, ಈಶಾನಿ ಅವರು ರ‍್ಯಾಪರ್ ಆಗಿ ಗುರುತಿಸಿಕೊಂಡು ದೊಡ್ಮನೆಗೆ ಎಂಟ್ರಿ ಕೊಟ್ಟರು. ಆದರೆ, ದೊಡ್ಮನೆಯಲ್ಲಿ ಅವರಿಂದ ಒಂದೆರಡು ಹಾಡು ರೆಡಿ ಆಗಿದ್ದು ಬಿಟ್ಟರೆ ಮತ್ಯಾವುದೇ ರೀತಿಯಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಇದು ವೀಕ್ಷಕರಿಗೆ ಬೇಸರ ಮೂಡಿಸಿತ್ತು. ಇಷ್ಟು ದಿನ ಮೈಕೆಲ್ ಜೊತೆ ಅವರು ಕ್ಲೋಸ್ ಆಗಿದ್ದರು. ಹೀಗಾಗಿ, ಮೈಕೆಲ್ ಅಭಿಮಾನಿಗಳ ವೋಟ್ ಅವರಿಗೆ ಬೀಳುತ್ತಿತ್ತು. ಆದರೆ, ಕಳೆದ ವಾರ ನಡೆದ ಒಂದು ಘಟನೆಯಿಂದ ಮೈಕೆಲ್ ಅವರು ಈಶಾನಿ ಜೊತೆ ಅಂತರ ಕಾಯ್ದುಕೊಂಡರು. ಇದು ಕೂಡ ಅವರಿಗೆ ಹಿನ್ನಡೆ ಆಗಿದೆ. ಈ ಕಾರಣದಿಂದಲೇ ಈಶಾನಿ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

ಇದನ್ನೂ ಓದಿ: ಮೈಕೆಲ್​-ಈಶಾನಿ ಬ್ರೇಕಪ್​; ಅಳುತ್ತಿದ್ದ ತಂಗಿಗೆ ಬೈಯ್ದು ಬುದ್ಧಿ ಹೇಳಿದ ವಿನಯ್​ ಗೌಡ

ಕಳೆದ ವಾರದ ಎಲಿಮಿನೇಷ್​ನಿಂದಲೇ ಈಶಾನಿ ಔಟ್ ಆಗಬೇಕಿತ್ತು. ಆದರೆ, ಅದೃಷ್ಟವಶಾತ್ ಅವರು ಉಳಿದುಕೊಂಡರು. ಇನ್ನೂ ಎಫರ್ಟ್ ಹಾಕಬೇಕಿತ್ತು ಎಂಬುದನ್ನು ಈಶಾನಿ ಅವರು ಸುದೀಪ್ ಎದುರು ಒಪ್ಪಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್