ಹಿಂದಿ ಬಿಗ್​ಬಾಸ್​ನಲ್ಲಿ ಕ್ರಿಕೆಟ್ ಮೇನಿಯಾ, ಕನ್ನಡ ಬಿಗ್​ಬಾಸ್ ಸ್ಪರ್ಧಿಗಳಿಗೆ ವಿಶ್ವಕಪ್ ಫೈನಲ್ ನೋಡೊ ಭಾಗ್ಯ ಇಲ್ಲವಾ?

Bigg Boss: ಭಾರತ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದು ಭಾರತೀಯರು ಪಂದ್ಯ ವೀಕ್ಷಿಸಲು ಕಾತರರಾಗಿದ್ದಾರೆ. ಬಿಗ್​ಬಾಸ್ ಸ್ಪರ್ಧಿಗಳಿಗೆ ಈ ಐತಿಹಾಸಿಕ ಪಂದ್ಯವನ್ನು ಕಣ್​ತುಂಬಿಕೊಳ್ಳುವ ಅವಕಾಶ ಸಿಗಲಿದೆಯೇ?

ಹಿಂದಿ ಬಿಗ್​ಬಾಸ್​ನಲ್ಲಿ ಕ್ರಿಕೆಟ್ ಮೇನಿಯಾ, ಕನ್ನಡ ಬಿಗ್​ಬಾಸ್ ಸ್ಪರ್ಧಿಗಳಿಗೆ ವಿಶ್ವಕಪ್ ಫೈನಲ್ ನೋಡೊ ಭಾಗ್ಯ ಇಲ್ಲವಾ?
ವಿಶ್ವಕಪ್
Follow us
ಮಂಜುನಾಥ ಸಿ.
|

Updated on: Nov 18, 2023 | 6:18 PM

ಭಾರತ ವಿಶ್ವಕಪ್ (World Cup) ಫೈನಲ್ ಪ್ರವೇಶಿಸಿದ್ದು, ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಸಜ್ಜಾಗಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯ ಶುರುವಾಗುವ ಕ್ಷಣಕ್ಕಾಗಿ ಕೋಟ್ಯಂತರ ಜನ ಕಾಯುತ್ತಿದ್ದಾರೆ. ಭಾರತ ಫೈನಲ್ ಪಂದ್ಯದಲ್ಲಿ ಗೆಲ್ಲಬೇಕೆಂದು ಪ್ರಾರ್ಥಿಸುತ್ತಿದ್ದಾರೆ. ವಿಶ್ವಕಪ್​​ನಲ್ಲಿ ಈ ವರೆಗೆ ಭಾರತ ಆಡಿರುವ ರೀತಿಯನ್ನು ಕಣ್​ತುಂಬಿಕೊಂಡಿರುವ ಪ್ರೇಕ್ಷಕರು, ನಾಳೆಯೂ ಅಂಥಹುದ್ದೇ ಮ್ಯಾಜಿಕ್ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ. ಭಾರತ ಜೈತಯಾತ್ರೆಯನ್ನು ಬಿಗ್​ಬಾಸ್ ಮನೆ ಸ್ಪರ್ಧಿಗಳು ಮಿಸ್ ಮಾಡಿಕೊಂಡಿದ್ದಾರೆ.

ನಾಲ್ಕು ವರ್ಷಕ್ಕೊಮ್ಮೆ ವಿಶ್ವಕಪ್ ನಡೆಯುತ್ತದೆ. ಭಾರತ ಫೈನಲ್ ಪ್ರವೇಶಿಸಿರುವುದು ದಶಕದ ಬಳಿಕ. ಕಳೆದ 2011ರಲ್ಲಿ ಭಾರತ ವಿಶ್ವಕಪ್ ಪ್ರವೇಶಿಸಿ, ಚಾಂಪಿಯನ್ ಎನಿಸಿಕೊಂಡಿತ್ತು. ಅದಾದ ಬಳಿಕ ಈಗ ಭಾರತ ವಿಶ್ವಕಪ್ ಪ್ರವೇಶಿಸಿದೆ. ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರವೇ ಅಲ್ಲದೆ ಎಲ್ಲರಿಗೂ ಇದೊಂದು ಅಭೂತಪೂರ್ವ ಕ್ಷಣ. ಆದರೆ ಬಿಗ್​ಬಾಸ್ ಮನೆಯಲ್ಲಿ ಬಂದಿಯಾಗಿರುವವರು ಈ ಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಆದರೆ ಹಿಂದಿ ಬಿಗ್​ಬಾಸ್​ನಲ್ಲಿ ಆಯೋಜಕರು ಬಿಗ್​ಬಾಸ್ ಮನೆಯಲ್ಲಿ ಕ್ರಿಕೆಟ್ ಆಡಿಸುವ ಮೂಲಕ ವಿಶ್ವಕಪ್ ಫೈನಲ್ ಅನ್ನು ಸ್ಪರ್ಧಿಗಳು ನೋಡುವ ಸೌಕರ್ಯ ಕಲ್ಪಿಸುವ ಸೂಚನೆ ತೋರಿಸಿದ್ದಾರೆ. ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್​ಬಾಸ್​, ಇಂದು ಬಿಡುಗಡೆ ಮಾಡಿರುವ ಪ್ರೋಮೋನಲ್ಲಿ ಬಿಗ್​ಬಾಸ್ ಮನೆಯ ಒಳಗೆ ಮನೆಯ ಸದಸ್ಯರೊಟ್ಟಿಗೆ ಸಲ್ಮಾನ್ ಖಾನ್ ಕ್ರಿಕೆಟ್ ಆಡುತ್ತಿದ್ದಾರೆ. ಮನೆಯಲ್ಲಿಯೇ ಒಂದು ಕ್ರಿಕೆಟ್ ನೆಟ್ ಕಟ್ಟಿ ನೆಟ್​ನ ಒಳಗೆ ಸಲ್ಮಾನ್ ಖಾನ್ ಹಾಗೂ ಇತರೆ ಮನೆಯ ಸದಸ್ಯರು ಕ್ರಿಕೆಟ್ ಆಡಿದ್ದಾರೆ. ಆ ಮೂಲಕ ವಿಶ್ವಕಪ್ ಫೈನಲ್ ನೋಡಲು ಸಜ್ಜಾಗುತ್ತಿರುವಂತಿದೆ.

ಇದನ್ನೂ ಓದಿ:ತನಿಷಾ ವಿರುದ್ಧ ದೂರು, ಬಿಗ್​ಬಾಸ್​ಗೆ ನೊಟೀಸ್ ಕೊಟ್ಟ ಪೊಲೀಸರು

ಆದರೆ ಕನ್ನಡ ಬಿಗ್​ಬಾಸ್​ ಸ್ಪರ್ಧಿಗಳಿಗೆ ವಿಶ್ವಕಪ್​ ಪಂದ್ಯ ನೋಡುವ ಅದೃಷ್ಟ ಇದ್ದಂತಿಲ್ಲ. ಈ ಹಿಂದೆಯೂ ಹೊರಗೆ ಎಷ್ಟೆ ದೊಡ್ಡ ಘಟನೆಗಳು ನಡೆದಿದ್ದರೂ ಸಹ ಅದರ ಬಗ್ಗೆ ಒಳಗಿನ ಸ್ಪರ್ಧಿಗಳಿಗೆ ಮಾಹಿತಿ ನೀಡುತ್ತಿರಲಿಲ್ಲ. ಫಿನಾಲೆ ದಿನ ವಾರ್ತೆ ಓದಿಸುವುದನ್ನು ಕೆಲ ಸೀಸನ್​ಗಳಲ್ಲಿ ಮಾಡಿದ್ದು ಬಿಟ್ಟರೆ, ಹೊರಗಿನ ಪ್ರಪಂಚದ ಮಾಹಿತಿಯನ್ನು ನೀಡದೆ ಕಟ್ಟುನಿಟ್ಟಾಗಿ ಶೋ ನಡೆಸಿಕೊಂಡು ಬರಲಾಗುತ್ತಿದೆ. ಈಗ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನು ಬಿಗ್​ಬಾಸ್ ನೀಡುತ್ತಾರೆಯೇ ಕಾದು ನೋಡಬೇಕಿದೆ.

ಆದರೆ ಶನಿವಾರ ಪ್ರಸಾರವಾಗುತ್ತಿರುವ ಎಪಿಸೋಡ್​ನಲ್ಲಿ ಬಿಗ್​ಬಾಸ್ ಸ್ಪರ್ಧಿಗಳಿಗೆ ಶಾಕ್ ಒಂದನ್ನು ಸುದೀಪ್ ನೀಡಿದ್ದಾರೆ. ಸಾಮಾನ್ಯವಾಗಿ ಭಾನುವಾರದ ಎಪಿಸೋಡ್​ನಲ್ಲಿ ಎಲಿಮಿನೇಷನ್ ನಡೆಯುತ್ತಿತ್ತು, ಆದರೆ ಈ ಬಾರಿ ಶನಿವಾರವೇ ಎಲಿಮಿನೇಷನ್ ಪ್ರಕ್ರಿಯೆ ಮುಗಿಸಿದ್ದಾರೆ. ಬಿಗ್​ಬಾಸ್ ಮನೆಯಿಂದ ಯಾರು ಹೊರಗೆ ಹೋದರು ಎಂಬುದು ಶನಿವಾರವೇ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್