‘ನನಗೆ ಪಿರಿಯಡ್ಸ್ ಆಗಿಲ್ಲ, ನಾನು ಪ್ರೆಗ್ನೆಂಟ್’; ಬಿಗ್ ಬಾಸ್​ನಲ್ಲಿ ಹೊರಬಿತ್ತು ವಿಚಾರ

ಅಂಕಿತಾ ಹಾಗೂ ವಿಕ್ಕಿ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದರು. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಂಕಿತಾ ಸಿಟ್ಟಲ್ಲಿ ಕೂಗಾಡಿದ್ದಾರೆ. ಎಲ್ಲರ ಎದುರು ಪತಿ ತಮಗೆ ಅವಮಾನ ಮಾಡುತ್ತಾರೆ ಎಂಬುದು ಅಂಕಿತಾ ದೂರು.

‘ನನಗೆ ಪಿರಿಯಡ್ಸ್ ಆಗಿಲ್ಲ, ನಾನು ಪ್ರೆಗ್ನೆಂಟ್’; ಬಿಗ್ ಬಾಸ್​ನಲ್ಲಿ ಹೊರಬಿತ್ತು ವಿಚಾರ
ಅಂಕಿತಾ
Follow us
|

Updated on: Nov 18, 2023 | 8:01 AM

ಬಿಗ್ ಬಾಸ್ (Bigg Boss) ಹಲವು ಭಾಷೆಗಳಲ್ಲಿ ಪ್ರಸಾರ ಕಾಣುತ್ತಿದೆ. ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ಈ ಶೋ ಮೆಚ್ಚುಗೆ ಪಡೆಯುತ್ತಿದೆ. ಕನ್ನಡದ ರೀತಿಯೇ ಹಿಂದಿ ಬಿಗ್ ಬಾಸ್ ಕೂಡ ಗಮನ ಸೆಳೆಯುತ್ತಿದೆ. 17ನೇ ಸೀಸನ್​ನಲ್ಲಿ ಹಲವು ಜನಪ್ರಿಯ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಈ ಪೈಕಿ ಸುಶಾಂತ್ ಸಿಂಗ್ ರಜಪೂತ್ ಮಾಜಿ ಲವರ್, ನಟಿ ಅಂಕಿತಾ ಲೋಕಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇಬ್ಬರೂ ಸಾಕಷ್ಟು ಕಿತ್ತಾಡಿಕೊಳ್ಳುತ್ತಿದ್ದಾರೆ. ಈಗ ಅಂಕಿತಾಗೆ ಪ್ರೆಗ್ನೆಂಟ್ ಆಗಿರುವ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಪತಿ ವಿಕ್ಕಿ ಜೈನ್ ಬಳಿ ಹೇಳಿಕೊಂಡಿದ್ದಾರೆ.

ಅಂಕಿತಾ ಹಾಗೂ ವಿಕ್ಕಿ ಗಾರ್ಡನ್ ಏರಿಯಾದಲ್ಲಿ ಕುಳಿತಿದ್ದರು. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಂಕಿತಾ ಸಿಟ್ಟಲ್ಲಿ ಕೂಗಾಡಿದ್ದಾರೆ. ಎಲ್ಲರ ಎದುರು ಪತಿ ತಮಗೆ ಅವಮಾನ ಮಾಡುತ್ತಾರೆ ಎಂಬುದು ಅಂಕಿತಾ ದೂರು. ವಿಕ್ಕಿ ಅವರು ಕೂಡ ಇದೇ ಮಾದರಿಯಲ್ಲಿ ದೂರು ಹೇಳಿಕೊಂಡಿದ್ದಾರೆ.

‘ನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿದೆ. ನನಗೆ ಅನಾರೋಗ್ಯ ಆದಂತೆ ಭಾಸ ಆಗುತ್ತಿದೆ. ನನಗೆ ಪಿರಿಯಡ್ಸ್ ಆಗುತ್ತಿಲ್ಲ. ನನಗೆ ಮನೆಗೆ ಹೋಗಬೇಕು. ನಾನು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿದ್ದೀನಿ. ನನ್ನ ಭಾವನೆಗಳಲ್ಲಿ ಏರಿಳಿತ ಆಗುತ್ತಿದೆ. ನನಗೆ ಅದನ್ನು ಹೇಳೋಕೆ ಆಗಲ್ಲ. ನಾನು ಗೊಂದಲಕ್ಕೆ ಒಳಗಾಗಿದ್ದೇನೆ. ಅದಕ್ಕೆ ನಾನು ನಿನ್ನನ್ನು ದೂಷಿಸುತ್ತಿಲ್ಲ’ ಎಂದಿದ್ದಾರೆ ಅಂಕಿತಾ.

ಇದನ್ನೂ ಓದಿ: ಸುಶಾಂತ್ ಸಿಂಗ್ ಜೊತೆಗಿನ ಬ್ರೇಕಪ್​ಗೆ ಕಾರಣವೇ ಇಲ್ಲ; ಮೌನ ಮುರಿದ ಅಂಕಿತಾ ಲೋಕಂಡೆ

ಸದ್ಯ ಅಂಕಿತಾ ಅವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರ ಹೇಳಿಕೆಯನ್ನು ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ವೀಕೆಂಡ್​ನಲ್ಲಿ ಸಲ್ಮಾನ್ ಖಾನ್ ಅವರು ಈ ಬಗ್ಗೆ ಮಾತನಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಬಾರಿಯ ಹಿಂದಿ ಬಿಗ್ ಬಾಸ್ ಜಿಯೋ ಸಿನಿಮಾ, ಕಲರ್ಸ್​ನಲ್ಲಿ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ