ಸುದೀಪ್ ಬಗ್ಗೆ ಕ್ಷುಲ್ಲಕ ಮಾತಾಡಿದ್ದ ಆರ್ಯವರ್ಧನ್ ಗುರೂಜಿಗೆ ಅಭಿಮಾನಿಗಳಿಂದ ಮುತ್ತಿಗೆ

Sudeep: ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಬಿಗ್​ಬಾಸ್ ಶೋ ಹಾಗೂ ಶೋನ ನಿರೂಪಕರಾದ ಸುದೀಪ್ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಮಾಜಿ ಬಿಗ್​ಬಾಸ್ ಸ್ಪರ್ಧಿ ಆರ್ಯವರ್ಧನ್​ಗೆ ಸುದೀಪ್​ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ.

ಸುದೀಪ್ ಬಗ್ಗೆ ಕ್ಷುಲ್ಲಕ ಮಾತಾಡಿದ್ದ ಆರ್ಯವರ್ಧನ್ ಗುರೂಜಿಗೆ ಅಭಿಮಾನಿಗಳಿಂದ ಮುತ್ತಿಗೆ
Follow us
ಮಂಜುನಾಥ ಸಿ.
|

Updated on: Nov 17, 2023 | 4:41 PM

ಬಿಗ್​ಬಾಸ್ ರಿಯಾಲಿಟಿ (Bigg Boss) ಶೋ ಬಗ್ಗೆ ಹಾಗೂ ನಟ ಸುದೀಪ್ ಬಗ್ಗೆ ಇತ್ತೀಚೆಗಿನ ಸಂದರ್ಶನದಲ್ಲಿ ಲಘುವಾಗಿ ಮಾತನಾಡಿದ್ದ ಮಾಜಿ ಬಿಗ್​ಬಾಸ್ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಮೇಲೆ ಸುದೀಪ್ ಅಭಿಮಾನಿಗಳು ಮುತ್ತಿಗೆ ಹಾಕಿ, ಕ್ಷಮೆಗೆ ಒತ್ತಾಯ ಮಾಡಿದ್ದಾರೆ. ಆರ್ಯವರ್ಧನ್ ಗುರೂಜಿ ಕಾರಿನಲ್ಲಿ ಹೋಗುವ ವೇಳೆ ಅಡ್ಡ ಹಾಕಿರುವ ಅಭಿಮಾನಿಗಳನ್ನು ಅವರನ್ನು ರಾಮೋಹಳ್ಳಿಯ ಬಳಿ ನಿರ್ಮಿಸಲಾಗಿರುವ ಬಿಗ್​ಬಾಸ್ ಮನೆಯ ಬಳಿಗೆ ಕರೆದೊಯ್ದಿದ್ದರು.

ಆರ್ಯವರ್ಧನ್ ಗುರೂಜಿಗೆ ಸುದೀಪ್ ಅಭಿಮಾನಿಗಳು ಮುತ್ತಿಗೆ ಹಾಕಿ ಕ್ಷಮೆಗೆ ಒತ್ತಾಯಿಸಿರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿವೆ. ಆರ್ಯವರ್ಧನ್ ಗುರೂಜಿಯವರನ್ನು ಬಿಗ್​ಬಾಸ್ ಮನೆಯ ಬಳಿ ಕರೆತಂದು ಕಾರಿನಲ್ಲಿಯೇ ಕೂರಿಸಿ ಸುದೀಪ್ ಅಭಿಮಾನಿಗಳು ಮಾತನಾಡುತ್ತಿರುವ ದೃಶ್ಯಗಳು ವಿಡಿಯೋನಲ್ಲಿವೆ.

ಸುದೀಪ್ ಅವರ ಬಳಿ ಆರ್ಯವರ್ಧನ್ ಗುರೂಜಿ ಕ್ಷಮೆ ಕೇಳಬೇಕು ಎಂದು ಸುದೀಪ್ ಅಭಿಮಾನಿಗಳು ಆರ್ಯವರ್ಧನ್ ಗುರೂಜಿಯನ್ನು ಒತ್ತಾಯಿಸಿದರು. ಸುದೀಪ್ ಇನ್ನು ಕೆಲವು ಹೊತ್ತಿನಲ್ಲಿಯೇ ಬರುತ್ತಾರೆ, ಇಲ್ಲೇ ಕಾಯುತ್ತಿರಿ ಎಂದು ಸುದೀಪ್ ಅಭಿಮಾನಿಗಳು ಆರ್ಯವರ್ಧನ್ ಗುರೂಜಿಗೆ ತಾಕೀತು ಮಾಡಿರುವ ದೃಶ್ಯಗಳು ಸಹ ವಿಡಿಯೋನಲ್ಲಿವೆ. ಸುದೀಪ್ ಅಭಿಮಾನಿಗಳ ಜೋರಿನಿಂದ ಮೆತ್ತಗಾದಂತೆ ಕಾಣುವ ಆರ್ಯವರ್ಧನ್ ಗುರೂಜಿ, ”ನಮ್ಮಿಂದಲೇ ತಪ್ಪಾಗಿದೆ. ಅದಕ್ಕೆ ಬೇಜಾರಿದೆ. ಆದರೆ ನನಗೂ ಅನ್ಯಾಯ ಆಗಿದೆ. ರೂಪೇಶ್ ಶೆಟ್ಟಿಗೆ ಕೊಟ್ರು, ನನಗೆ ಕೊಟ್ಟಿಲ್ಲ ಎಂಬುದು ಬೇಜಾರು. ನನ್ನ ಬೇಜಾರು ಯಾರ ಬಳಿ ಹೇಳಿಕೊಳ್ಳಲಿ” ಎಂದು ಗುರೂಜಿ ಅಸಮಾಧಾನ ತೋಡಿಕೊಳ್ಳುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ.

ಇದನ್ನೂ ಓದಿ:‘ನಿಮ್ಮ ಹಠ ಕಾಣುತ್ತಿಲ್ಲ’; ಎಂದ ಸುದೀಪ್; ‘ನನಗೆ ಅದು ತುಂಬಾ ಕಾಡುತ್ತಿದೆ’ ಎಂದ ಸಂತೋಷ್

ರೂಪೇಶ್ ಶೆಟ್ಟಿ ಬಿಗ್​ಬಾಸ್ ವಿಜೇತರೆಂದು ಘೋಷಿಸಿದ್ದು ಬೇಸರವಾಗಿದೆ ಎಂದು ಆರ್ವರ್ಧನ್ ಗುರೂಜಿ ಹೇಳುತ್ತಿದ್ದಂತೆ, ಸುದೀಪ್ ಅಭಿಮಾನಿ, ”ಅದು ನಿಮ್ಮದೂ, ರೂಪೇಶ್ ಶೆಟ್ಟಿಯದ್ದು ಖಾಸಗಿ ವಿಷಯ. ನಮ್ಮ ಸುದೀಪ್ ಅಣ್ಣನ ಬಗ್ಗೆ ಮಾತನಾಡಿರುವುದು ನಮಗೆ ಬೇಜಾರಾಗಿದೆ. ಸುದೀಪ್ ಅವರಿಗೆ ಶೂಟಿಂಗ್ ಇದೆ, ಆದರೂ ಇನ್ನರ್ಧ ಗಂಟೆಯಲ್ಲಿ ಇಲ್ಲಿಗೆ ಬರುತ್ತಾರೆ, ಕಾಯಿರಿ” ಎಂದು ಅಭಿಮಾನಿ, ಗುರೂಜಿಗೆ ಹೇಳಿದ್ದಾರೆ. ಆಗ ಗುರೂಜಿ, ಇಲ್ಲ ಇಲ್ಲಿಯೇ ಕಲ್ಯಾಣ ಮಂಟದಲ್ಲಿ ಇರುತ್ತೀನಿ, ಇನ್ನರ್ಧ ಗಂಟೆಯಲ್ಲಿ ಫೋನ್ ಮಾಡಿ ಸಾಕು ನಾನು ಬಂದು ಬಿಡುತ್ತೇನೆ ಎಂದು ಹೇಳಿ, ಸುದೀಪ್ ಅಭಿಮಾನಿಗೆ ಕೈಮುಗಿದು ಅಲ್ಲಿಂದ ತೆರಳಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಿಗ್​ಬಾಸ್ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದ ಆರ್ಯವರ್ಧನ್ ಗುರೂಜಿ, ಬಿಗ್​ಬಾಸ್ ಶೋ ಸ್ಟ್ರಿಪ್ಟೆಡ್ ಎಂದಿದ್ದರು, ಮಾತ್ರವಲ್ಲದೆ ಸುದೀಪ್ ಬಗ್ಗೆಯೂ ಕ್ಷುಲ್ಲಕವಾಗಿ, ಲಘುವಾಗಿ ಮಾತನಾಡಿದ್ದರು. ಆದರೆ ಬಿಗ್​ಬಾಸ್​ನ ಸ್ಪರ್ಧಿ ಆಗಿರುವ ವರ್ತೂರು ಸಂತೋಷ್​ಗೆ ಬೆಂಬಲ ಸೂಚಿಸಿ, ಎಲ್ಲರೂ ವರ್ತೂರು ಸಂತೋಷ್ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ