AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಮಿನೇಷನ್ ವಿಚಾರದಲ್ಲಿ ಮೂರು ದಿಕ್ಕು; ತನಿಷಾ, ಕಾರ್ತಿಕ್​ನಿಂದ ಬೇರ್ಪಟ್ಟ ಸಂಗೀತಾ

‘ಬಿಗ್ ಬಾಸ್’ನಲ್ಲಿ ಎಲ್ಲರೂ ಆಪ್ತವಾಗಿದ್ದರೂ ಅದು ಹಾಳಾಗಲು ಕೆಲವೇ ನಿಮಿಷಗಳು ಸಾಕು. ಯಾವುದೋ ಟಾಸ್ಕ್ ವಿಚಾರಕ್ಕೆ, ಯಾವುದೋ ಮಾತಿನ ವಿಚಾರಕ್ಕೆ ವೈಮನಸ್ಸು ಮೂಡುತ್ತದೆ. ಈಗ ಇವರ ಮಧ್ಯೆ ಆಗಿರುವುದೂ ಕೂಡ ಅದೇ.

ನಾಮಿನೇಷನ್ ವಿಚಾರದಲ್ಲಿ ಮೂರು ದಿಕ್ಕು; ತನಿಷಾ, ಕಾರ್ತಿಕ್​ನಿಂದ ಬೇರ್ಪಟ್ಟ ಸಂಗೀತಾ
ತನಿಷಾ, ಕಾರ್ತಿಕ್​ನಿಂದ ಬೇರ್ಪಟ್ಟ ಸಂಗೀತಾ
ರಾಜೇಶ್ ದುಗ್ಗುಮನೆ
|

Updated on: Nov 17, 2023 | 7:39 AM

Share

ಕಾರ್ತಿಕ್, ತನಿಷಾ ಹಾಗೂ ಸಂಗೀತಾ (Sangeetha Sringeri) ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು ಮೊದಲ ವಾರ. ಈ ಮೂವರು ಅಸಮರ್ಥರ ಕ್ಯಾಟಗರಿಯಲ್ಲಿ ಇದ್ದರು. ಹೀಗಾಗಿ ಮೂವರು ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿತ್ತು. ಆದರೆ, ಒಂದೇ ಒಂದು ಟಾಸ್ಕ್​ನಿಂದ ಎಲ್ಲವೂ ಬದಲಾಗಿದೆ. ಈ ಗುಂಪಿನಲ್ಲಿ ತನಿಷಾ ಹಾಗೂ ಕಾರ್ತಿಕ್ ಮಾತ್ರ ಉಳಿದುಕೊಂಡಿದ್ದಾರೆ. ಸಂಗೀತಾ ಈ ಗುಂಪಿನಿಂದ ಬೇರ್ಪಟ್ಟಿದ್ದಾರೆ.

ಲೂಡೋ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ತನಿಷಾ ಹಾಗೂ ಕಾರ್ತಿಕ್​ಗೆ ಒಬ್ಬರನ್ನು ಸೇವ್ ಮಾಡುವ ಅವಕಾಶ ಇತ್ತು. ಆಗ ಅವರು ಸಂಗೀತಾನ ಸೇವ್ ಮಾಡೋ ಬದಲು ಸಿರಿ ಅವರನ್ನು ನಾಮಿನೇಷ್​ನಿಂದ ಬಚಾವ್ ಮಾಡಿದ್ದರು. ಇದು ಸಂಗೀತಾ ಕೋಪಕ್ಕೆ ಕಾರಣ ಆಗಿತ್ತು. ಆದರೆ, ಇದನ್ನು ಅವರು ತೋರಿಸಿಕೊಳ್ಳಲಿಲ್ಲ. ಬದಲಿಗೆ ಹಾಗೆಯೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಸರಿಯಾದ ಸಮಯ ಬರಲಿ ಎಂದು ಅವರು ಕಾದಿದ್ದರು.

ನಾಮಿನೇಷನ್​ನಿಂದ ಒಬ್ಬರನ್ನು ಸೇವ್ ಮಾಡುವ ಅವಕಾಶ ಸಂಗೀತಾಗೂ ಸಿಕ್ಕಿತ್ತು. ಆಗ ಕಾರ್ತಿಕ್ ಅಥವಾ ತನಿಷಾನ ಸೇವ್ ಮಾಡುವ ಬದಲು ವರ್ತೂರು ಸಂತೋಷ್ ಅವರನ್ನು ರಕ್ಷಿಸಿದ್ದರು. ಇದು ತನಿಷಾ ಹಾಗೂ ಕಾರ್ತಿಕ್​ಗೆ ಶಾಕ್ ತಂದಿದೆ. ಹೀಗಾಗಿ, ಮೂವರು ಮೂರು ದಿಕ್ಕಾಗಿದ್ದಾರೆ.

‘ನನ್ನ ಸೇವ್ ಮಾಡುವ ಆಯ್ಕೆ ಇದ್ದರೂ ನೀವು ನನ್ನನ್ನು ಉಳಿಸಲಿಲ್ಲ. ಅದಕ್ಕೆ ನಾನು ಹಾಗೆ ಮಾಡಿದೆ’ ಎಂಬುದು ಸಂಗೀತಾ ವಾದ. ‘ನಾಮಿನೇಷನ್​ ಎಲ್ಲವೂ ಅಲ್ಲ’ ಅನ್ನೋದು ತನಿಷಾ ವಾದ. ಆದರೆ, ಈ ಮೂವರು ಕುಳಿತು ಒಟ್ಟಿಗೆ ಮಾತನಾಡಲಿಲ್ಲ. ಈ ಮೂವರು ಕುಳಿತು ಮಾತನಾಡಿದರೆ ಮುನಿಸು ಕೊನೆಯಾಗಬಹುದು ಎಂಬುದು ವೀಕ್ಷಕರ ಅಭಿಪ್ರಾಯ.

ಇದನ್ನೂ ಓದಿ: SSE Side B Review: ‘ಸೈಡ್​ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್​ ಬಿ’ ಲಯ ಬದಲಾಗಿಲ್ಲ

‘ಬಿಗ್ ಬಾಸ್’ನಲ್ಲಿ ಎಲ್ಲರೂ ಆಪ್ತವಾಗಿದ್ದರೂ ಅದು ಹಾಳಾಗಲು ಕೆಲವೇ ನಿಮಿಷಗಳು ಸಾಕು. ಯಾವುದೋ ಟಾಸ್ಕ್ ವಿಚಾರಕ್ಕೆ, ಯಾವುದೋ ಮಾತಿನ ವಿಚಾರಕ್ಕೆ ವೈಮನಸ್ಸು ಮೂಡುತ್ತದೆ. ಈಗ ಇವರ ಮಧ್ಯೆ ಆಗಿರುವುದೂ ಕೂಡ ಅದೇ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ವೀಕ್ಷಿಸಬಹುದು. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ