ಸಂಗೀತಾ ವಿರುದ್ಧವೇ ಕಾರ್ತಿಕ್​, ತನಿಷಾ ಸಂಚು? ಇಷ್ಟು ದಿನದ ಸಂಬಂಧ, ನಂಬಿಕೆ ಈಗ ಅಂತ್ಯ

ಬಿಗ್​ ಬಾಸ್​ ಮನೆಯಲ್ಲಿ ಟಫ್​ ಸ್ಪರ್ಧಿ ಎನಿಸಿಕೊಂಡಿರುವ ನಟಿ ಸಂಗೀತಾ ಶೃಂಗೇರಿ ಅವರ ಬೆನ್ನ ಹಿಂದೆ ಸಂಚು ನಡೆದಿದೆ. ಅವರನ್ನು ಸೇವ್​ ಮಾಡಬಾರದು ಎಂದು ಹುನ್ನಾರ ಮಾಡಲಾಗಿದೆ. ಅದು ಸಂಗೀತಾ ಗಮನಕ್ಕೂ ಬಂದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರು ನೇರವಾಗಿ ಕೆಲವರನ್ನು ಪ್ರಶ್ನೆ ಮಾಡಿದ್ದಾರೆ.

ಸಂಗೀತಾ ವಿರುದ್ಧವೇ ಕಾರ್ತಿಕ್​, ತನಿಷಾ ಸಂಚು? ಇಷ್ಟು ದಿನದ ಸಂಬಂಧ, ನಂಬಿಕೆ ಈಗ ಅಂತ್ಯ
|

Updated on: Nov 16, 2023 | 10:45 AM

ಪ್ರತಿ ದಿನವೂ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ಶೋನಲ್ಲಿ ಹೊಸ ಹೊಸ ಟ್ವಿಸ್ಟ್​ ಸಿಗುತ್ತಿದೆ. ಇಷ್ಟು ದಿನಗಳ ಕಾಲ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ಮಧ್ಯೆ ಒಂದು ಒಡನಾಟ ಬೆಳೆದಿತ್ತು. ಇಬ್ಬರ ನಡುವೆ ನಂಬಿಕೆ ಇತ್ತು. ಆದರೆ ಈಗ ಆ ನಂಬಿಕೆಗೆ ಪೆಟ್ಟು ಬಿದ್ದಂತಿದೆ. ನಾಮಿನೇಷನ್​ ವಿಚಾರದಲ್ಲಿ ಸಂಗೀತಾ ಶೃಂಗೇರಿ (Sangeetha Sringeri) ಅವರ ಬೆನ್ನ ಹಿಂದೆ ಸಂಚು ನಡೆದಿದೆ. ಅವರನ್ನು ಸೇವ್​ ಮಾಡಬಾರದು ಎಂದು ಕೆಲವರು ಹುನ್ನಾರ ನಡೆಸಿದ್ದಾರೆ. ಅದು ಸಂಗೀತಾ ಗಮನಕ್ಕೆ ಬಂದಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಅವರು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಕಾರ್ತಿಕ್​ ಮಹೇಶ್​ (Karthik Mahesh), ವರ್ತೂರು ಸಂತೋಷ್​, ತನಿಷಾ ಕುಪ್ಪಂಡ ಅವರ ಬಳಿ ಇದನ್ನು ಸಂಗೀತಾ ಚರ್ಚಿಸಿದ್ದಾರೆ. ‘ಇಷ್ಟು ದಿನ ನಮ್ಮಲ್ಲಿ ಒಂದು ಫ್ರೆಂಡ್​ಶಿಪ್​, ನಂಬಿಕೆ ಇತ್ತು. ಅದು ಈಗ ಬ್ರೇಕ್​ ಆಗಿದೆ’ ಎಂದು ಸಂಗೀತಾ ಮುಲಾಜಿಲ್ಲದೇ ಹೇಳಿದ್ದಾರೆ. ನ.16ರ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ದಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಮೂಲಕ 24 ಗಂಟೆಯೂ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ಕೃಷಿಗೆ ತೊಂದರೆ ಮಾಡುವ ಯಾವುದೇ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ
ಚೆನ್ನೈ ಮನೆಯೊಂದರಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್
ಚೆನ್ನೈ ಮನೆಯೊಂದರಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಎನ್ ಡಿ ಆರ್ ಎಫ್
‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’; ಸ್ನೇಹಿತ್​ ಬದಲಾಗೋದೇ ಇಲ್ಲ
‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’; ಸ್ನೇಹಿತ್​ ಬದಲಾಗೋದೇ ಇಲ್ಲ
ಸಿದ್ದರಾಮಯ್ಯ ಜೊತೆ ನಾವಿದ್ದೇವೆ ಅಂತ ಬಸನಗೌಡ ಯತ್ನಾಳ್ ಹೇಳಿದ್ದು ಯಾಕೆ?
ಸಿದ್ದರಾಮಯ್ಯ ಜೊತೆ ನಾವಿದ್ದೇವೆ ಅಂತ ಬಸನಗೌಡ ಯತ್ನಾಳ್ ಹೇಳಿದ್ದು ಯಾಕೆ?
ಮಗಳ ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಪತ್ನಿ ಜತೆ ಕುಣಿದ ಬಿ ಶ್ರೀರಾಮುಲು
ಮಗಳ ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ಪತ್ನಿ ಜತೆ ಕುಣಿದ ಬಿ ಶ್ರೀರಾಮುಲು
ಸರ್ಕಾರೀ ಗೌರವಗಳೊಂದಿಗೆ ಸಾಂಸ್ಕೃತಿಕ ರಾಯಭಾರಿ ಅರ್ಜುನನ ಅಂತ್ಯಕ್ರಿಯೆ
ಸರ್ಕಾರೀ ಗೌರವಗಳೊಂದಿಗೆ ಸಾಂಸ್ಕೃತಿಕ ರಾಯಭಾರಿ ಅರ್ಜುನನ ಅಂತ್ಯಕ್ರಿಯೆ
ಸದನದಲ್ಲಿ ಪ್ರಶ್ನೆ ಕೇಳಲು ಹಳೇದೋಸ್ತಿ ಶಿವಲಿಂಗೇಗೌಡ-ರೇವಣ್ಣ ನಡುವೆ ಜಟಾಪಟಿ
ಸದನದಲ್ಲಿ ಪ್ರಶ್ನೆ ಕೇಳಲು ಹಳೇದೋಸ್ತಿ ಶಿವಲಿಂಗೇಗೌಡ-ರೇವಣ್ಣ ನಡುವೆ ಜಟಾಪಟಿ
ಬಿಬಿಎಂಪಿ ಕೇಂದ್ರ ಕಚೇರಿಗೆ ಹಾವುಗಳ ಕಾಟ; ದಿಢೀರ್​ ಎಂಟ್ರಿಕೊಟ್ಟ ನಾಗಪ್ಪ
ಬಿಬಿಎಂಪಿ ಕೇಂದ್ರ ಕಚೇರಿಗೆ ಹಾವುಗಳ ಕಾಟ; ದಿಢೀರ್​ ಎಂಟ್ರಿಕೊಟ್ಟ ನಾಗಪ್ಪ
ಪೃಥ್ವಿಸಿಂಗ್ ಕೇಸ್; ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸುತ್ತೇನೆ:ಜಾರಕಿಹೊಳಿ
ಪೃಥ್ವಿಸಿಂಗ್ ಕೇಸ್; ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸುತ್ತೇನೆ:ಜಾರಕಿಹೊಳಿ