ಯತೀಂದ್ರ ಸಿದ್ದರಾಮಯ್ಯ ಮಾತಾಡಿದ್ದು ಗೊತ್ತಿಲ್ಲ, ಪ್ರಶ್ನೆ ಎತ್ತಿರುವ ಕುಮಾರಸ್ವಾಮಿಯನ್ನೇ ಕೇಳಿ ಅಂದರೆ ಅದು ಪಲಾಯನವಾದ ಆಗುತ್ತೆ ಗೃಹ ಸಚಿವರೇ!

ಯತೀಂದ್ರ ಸಿದ್ದರಾಮಯ್ಯ ಮಾತಾಡಿದ್ದು ಗೊತ್ತಿಲ್ಲ, ಪ್ರಶ್ನೆ ಎತ್ತಿರುವ ಕುಮಾರಸ್ವಾಮಿಯನ್ನೇ ಕೇಳಿ ಅಂದರೆ ಅದು ಪಲಾಯನವಾದ ಆಗುತ್ತೆ ಗೃಹ ಸಚಿವರೇ!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 16, 2023 | 11:39 AM

ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ ಆಶ್ವಾಸನೆಗಳನ್ನು ಕಾಂಗ್ರೆಸ್ ನೀಡಿತ್ತು, ಅವುಗಳನ್ನು ಈಡೇರಿಸುವ ದಿಶೆಯಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಪರಮೇಶ್ವರ್ ಹೇಳುತ್ತಾರೆ. ಯತೀಂದ್ರ ಸಿದ್ದರಾಮಯ್ಯ ಮಾತಾಡಿರುವ ವಿಡಿಯೋ ತಾನು ನೋಡಿಲ್ಲ ಅದರ ಬಗ್ಗೆ ಗೊತ್ತೂ ಇಲ್ಲ ಎಂದು ಪರಮೇಶ್ವರ್ ಹೇಳಿದ್ದು ಕನ್ನಡಿಗರಿಗೆ ಸರಿ ಕಾಣದು.

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರವನ್ನು (Siddaramaiah government) ಇಕ್ಕಟ್ಟಿಗೆ ಸಿಕ್ಕಿಸುವ ವಿಡಿಯೋವೊಂದು ವೈರಲ್ ಆಗಿದೆ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತನ್ನ ತಂದೆ ಸಿಎಂ ಸಿದ್ದರಾಮಯ್ಯಗೆ ಪೋನ್ ಮಾಡಿ ತಾನು ನೀಡಿದ ಲಿಸ್ಟ್ ನಲ್ಲಿದ್ದವರ ಕೆಲಸ ಮಾತ್ರ ಆಗಬೇಕು ಎಂದು ಜನರ ನಡುವೆ ನಿಂತುಕೊಂಡು ಹೇಳಿದ್ದು ವರ್ಗಾವಣೆ ಧಂದೆ ಶುರುವಾಗಿದೆಯಾ ಎಂಬ ಅನುಮಾನ ಕನ್ನಡಿಗರಲ್ಲಿ ಮೂಡಿಸಿದ್ದ; ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ, ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಮಾತ್ರ ತನಗೇನೂ ಗೊತ್ತಿಲ್ಲ, ಪ್ರಶ್ನೆ ಕೇಳುತ್ತಿರುವ ಕುಮಾರಸ್ವಾಮಿಯನ್ನೇ ಕೇಳಿ ಅಂತ ಕೂಲಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳುತ್ತಾರೆ. ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ ಆಶ್ವಾಸನೆಗಳನ್ನು ಕಾಂಗ್ರೆಸ್ ನೀಡಿತ್ತು, ಅವುಗಳನ್ನು ಈಡೇರಿಸುವ ದಿಶೆಯಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಪರಮೇಶ್ವರ್ ಹೇಳುತ್ತಾರೆ. ಯತೀಂದ್ರ ಸಿದ್ದರಾಮಯ್ಯ ಮಾತಾಡಿರುವ ವಿಡಿಯೋ ತಾನು ನೋಡಿಲ್ಲ ಅದರ ಬಗ್ಗೆ ಗೊತ್ತೂ ಇಲ್ಲ ಎಂದು ಪರಮೇಶ್ವರ್ ಹೇಳಿದ್ದು ಕನ್ನಡಿಗರಿಗೆ ಸರಿ ಕಾಣದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ