ಹಾಸನಾಂಬೆ ಉತ್ಸವ: ಭಕ್ತರು ಹುಂಡಿಗೆ ಹಾಕಿದ ಹಣ ಎಣಿಕೆ ಕಾರ್ಯಕ್ಕೆ 350 ಜನರ ನಿಯೋಜನೆ!

ಹಾಸನಾಂಬೆ ಉತ್ಸವ: ಭಕ್ತರು ಹುಂಡಿಗೆ ಹಾಕಿದ ಹಣ ಎಣಿಕೆ ಕಾರ್ಯಕ್ಕೆ 350 ಜನರ ನಿಯೋಜನೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 16, 2023 | 1:08 PM

ಭಕ್ತರು ಹುಂಡಿಗಳಲ್ಲಿ ನಗದು ಅಲ್ಲದೆ, ಚಿನ್ನ, ಬೆಳ್ಳಿ ಆಭರಣಗಳನ್ನೂ ಹಾಕಿದ್ದು ಅವುಗಳನ್ನು ವಿಂಗಡಣೆ ಮಾಡುವ ಕೆಲಸದಲ್ಲಿ ಸಿಬ್ಬಂದಿ ನಿರತರಾಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಹಣ ಎಣಿಕೆ ಕಾರ್ಯಕ್ಕೆ ಬ್ಯಾಂಕ್ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗಿದೆಯಂತೆ. ಟೇಬಲ್ ಗಳ ಮೇಲೆ ಹಣ ಎಣಿಸುವ ಯಂತ್ರಗಳನ್ನು ಇಟ್ಟಿರುವುದು ಕಾಣುತ್ತದೆ.

ಹಾಸನ: ಈ ವರ್ಷ 14 ದಿನಗಳ ಕಾಲ ನಡೆದ ಹಾಸನಾಂಬೆ ಉತ್ಸವ (Hasanambe Utsav) ಅಂತ್ಯಗೊಂಡಿದೆ, ಅರ್ಚಕರು (priests) ದೇಗುಲವನ್ನು ಮುಚ್ಚಿಬಿಟ್ಟಿದ್ದಾರೆ. ಇನ್ನು ಮುಂದಿನ ವರ್ಷವೇ ಹಾಸನಾಂಬ ದೇವಿಯ ದರ್ಶನ ಸಾಧ್ಯ. ಪ್ರತಿವರ್ಷದಂತೆ ಈ ವರ್ಷವೂ ದೇಶದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಹಾಸನಾಂಬೆ ಉತ್ಸವದಲ್ಲಿ ಭಕ್ತರ ಕಾಣಿಕೆಗಳಿಗಾಗಿ ಇರಿಸಲಾಗಿದ್ದ ಹುಂಡಿಗಳನ್ನು ಇವತ್ತು ತೆರೆಯಲಾಗಿದ್ದು ಹಣ ಎಣಿಕೆ ಕಾರ್ಯ (counting of money) ಜಾರಿಯಲ್ಲಿದೆ. ಟಿವಿ9 ಕನ್ನಡ ವಾಹಿನಿಯ ಹಾಸನ ವರದಿಗಾರ ನೀಡಿರುವ ಮಾಹಿತಿ ಪ್ರಕಾರ 350 ಹೆಚ್ಚು ಜನರನ್ನು ಹಣ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಭಕ್ತರು ಹುಂಡಿಗಳಲ್ಲಿ ನಗದು ಅಲ್ಲದೆ, ಚಿನ್ನ, ಬೆಳ್ಳಿ ಆಭರಣಗಳನ್ನೂ ಹಾಕಿದ್ದು ಅವುಗಳನ್ನು ವಿಂಗಡಣೆ ಮಾಡುವ ಕೆಲಸದಲ್ಲಿ ಸಿಬ್ಬಂದಿ ನಿರತರಾಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಹಣ ಎಣಿಕೆ ಕಾರ್ಯಕ್ಕೆ ಬ್ಯಾಂಕ್ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗಿದೆಯಂತೆ. ಟೇಬಲ್ ಗಳ ಮೇಲೆ ಹಣ ಎಣಿಸುವ ಯಂತ್ರಗಳನ್ನು ಇಟ್ಟಿರುವುದು ಕಾಣುತ್ತದೆ. ಮಧ್ಯಾಹ್ನದ ಹೊತ್ತಿಗೆ ಎಣಿಕೆ ಕಾರ್ಯ ಕೊನೆಗೊಳ್ಳಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ