ಹಾಸನಾಂಬೆ ಉತ್ಸವ: ವಿದ್ಯುತ್ ಪ್ರವಹಿಸಿದಾಗ ಕಾಲ್ತುಳಿತದ ಘಟನೆ ನಡೆದು ಜನರ ಪ್ರಾಣಗಳಿಗೆ ಅಪಾಯವಾಗಿದ್ದರೆ ಹೊಣೆ ಯಾರು ಹೊರುತ್ತಿದ್ದರು?

ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಜನ ಬರ್ತಾರೆ ಅಂತ ಗೊತ್ತಿದ್ದೂ, ಸಂಸದ, ಶಾಸಕ ಜಿಲ್ಲಾಡಳಿತ ಮತ್ತು ಎಲ್ಲಕ್ಕೂ ಮಿಗಿಲಾಗಿ ಜಿಲ್ಲಾ ಉಸ್ತುವಾರಿ ಕೆಎನ್ ರಾಜಣ್ಣ ಸರಿಯಾದ ವ್ಯವಸ್ಥೆಗಳನ್ನು ಮಾಡದೆ ಹೋಗಿದ್ದು ಅಪರಾಧವಲ್ಲದೆ ಮತ್ತೇನೂ ಅಲ್ಲ. ಕುಂಭಮೇಳ ಮತ್ತು ಬೇರೆ ಧಾರ್ಮಿಕ ಉತ್ಸವಗಳಲ್ಲಿ ನೂಕುನುಗ್ಗಲು, ಕಾಲ್ತುಳಿತದ ಘಟನೆ ಸಂಭವಿಸಿ ನೂರಾರು ಜನ ಪ್ರಾಣ ಕಳೆದುಕೊಳ್ಳುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ.

ಹಾಸನಾಂಬೆ ಉತ್ಸವ: ವಿದ್ಯುತ್ ಪ್ರವಹಿಸಿದಾಗ ಕಾಲ್ತುಳಿತದ ಘಟನೆ ನಡೆದು ಜನರ ಪ್ರಾಣಗಳಿಗೆ ಅಪಾಯವಾಗಿದ್ದರೆ ಹೊಣೆ ಯಾರು ಹೊರುತ್ತಿದ್ದರು?
|

Updated on: Nov 10, 2023 | 6:38 PM

ಹಾಸನ: ಇವತ್ತು ಬೆಳಗ್ಗೆಯಷ್ಟೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ತಂದೆ ಶಾಸಕ ಹೆಚ್ ಡಿ ರೇವಣ್ಣ ತಮ್ಮ ಪತ್ನಿ ಭವಾನಿಯವರೊಂದಿಗೆ ಹಾಸನಾಂಬೆಯ ದರ್ಶನಕ್ಕಾಗಿ ಆಗಮಿಸಿದ್ದರು. ಅವರು ಅಲ್ಲಿಂದ ತೆರಳಿದ ಸ್ವಲ್ಪ ಹೊತ್ತಿನಲ್ಲೇ ಬ್ಯಾರಿಕೇಡ್ ಗಳಲ್ಲಿ ವಿದ್ಯುತ್ ಪ್ರವಹಿಸಿದ ಅನಾಹುತಕಾರಿ ಘಟನೆ ನಡೆದಿದೆ. ದುರ್ಘಟನೆ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿದ ಪ್ರಜ್ವಲ್ ರೇವಣ್ಣ ಹಾಸನಾಂಬ ಉತ್ಸವದಲ್ಲಿ (Hasanamba Utsav) ತಲೆದೋರಿದ ಅವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಂಸದರೇ, ಹಾಸನಾಂಬ ದೇವಸ್ಥಾನದ ದ್ವಾರ ಭಕ್ತರಿಗಾಗಿ (devotees) ತೆರೆದು ಎಂಟು ದಿನ ಕಳೆಯಿತು, ಇವತ್ತು ಏನಿದೆ ಏನಿಲ್ಲ ಅಂತ ವಿಚಾರಿಸಿದರೆ ಹೇಗೆ ಸ್ವಾಮಿ? ದುರ್ಘಟನೆ ನಡೆಯದೆ ಹೋಗಿದ್ದರೆ ಪ್ರಾಯಶಃ ಸಂಸದರು ಇವತ್ತು ದೇಗುಲದ ಕಡೆ ಬರುತ್ತಲೂ ಇರಲಿಲ್ಲ. ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ ಜನರನ್ನು ಕೇಳಿ, ಅವರು ಅನುಭವಿಸಿದ ಆತಂಕ, ಭೀತಿಯ ಬಗ್ಗೆ! ಒಬ್ಬ ಮಹಿಳೆ ತನ್ನ ಮಗು ಸಿಗುತ್ತಿಲ್ಲ ಹುಚ್ಚಿಯಂತೆ ದೇವಸ್ಥಾನದ ಆವರಣದಲ್ಲಿ ಓಡಾಡಿದರು. ಕೆಲವರು ತಮ್ಮ ಸಂಬಂದಧಿಕರಿಂದ ಬೇರ್ಪಟ್ಟರು. ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ-ಎಲ್ಲವೂ ಅಸ್ತವ್ಯಸ್ತ.

ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಜನ ಬರ್ತಾರೆ ಅಂತ ಗೊತ್ತಿದ್ದೂ, ಸಂಸದ, ಶಾಸಕ ಜಿಲ್ಲಾಡಳಿತ ಮತ್ತು ಎಲ್ಲಕ್ಕೂ ಮಿಗಿಲಾಗಿ ಜಿಲ್ಲಾ ಉಸ್ತುವಾರಿ ಕೆಎನ್ ರಾಜಣ್ಣ ಸರಿಯಾದ ವ್ಯವಸ್ಥೆಗಳನ್ನು ಮಾಡದೆ ಹೋಗಿದ್ದು ಅಪರಾಧವಲ್ಲದೆ ಮತ್ತೇನೂ ಅಲ್ಲ. ಕುಂಭಮೇಳ ಮತ್ತು ಬೇರೆ ಧಾರ್ಮಿಕ ಉತ್ಸವಗಳಲ್ಲಿ ನೂಕುನುಗ್ಗಲು, ಕಾಲ್ತುಳಿತದ ಘಟನೆ ಸಂಭವಿಸಿ ನೂರಾರು ಜನ ಪ್ರಾಣ ಕಳೆದುಕೊಳ್ಳುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಇಲ್ಲೂ ಕಾಲ್ತುಳಿದ ಘಟನೆ ನಡೆದಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು? ಪ್ರಜ್ವಲ್ ರೇವಣ್ಣ ಅವರೆಲ್ಲಿ, ಇವರೆಲ್ಲಿ ಅಂತ ಕೇಳಿದರೆ ಏನೂ ಪ್ರಯೋಜನವಾಗದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ವಿನಯ್, ನಮ್ರತಾನ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟ ಸ್ನೇಹಿತ್
ವಿನಯ್, ನಮ್ರತಾನ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟ ಸ್ನೇಹಿತ್
BBL ​ನಲ್ಲಿ ಜೆಟ್​ಪ್ಯಾಕ್ ಶೋ: IPL ನಲ್ಲಿ ಇದೆಲ್ಲ ಇಲ್ಲ ಎಂದ ಫ್ಯಾನ್ಸ್
BBL ​ನಲ್ಲಿ ಜೆಟ್​ಪ್ಯಾಕ್ ಶೋ: IPL ನಲ್ಲಿ ಇದೆಲ್ಲ ಇಲ್ಲ ಎಂದ ಫ್ಯಾನ್ಸ್
‘ಅನಿಮಲ್’ ಸಿನಿಮಾದ ವಾರ್ ಮಷಿನ್ ಡಿಸೈನ್ ಮಾಡಿದ ಕನ್ನಡಿಗ ಇವರೆ
‘ಅನಿಮಲ್’ ಸಿನಿಮಾದ ವಾರ್ ಮಷಿನ್ ಡಿಸೈನ್ ಮಾಡಿದ ಕನ್ನಡಿಗ ಇವರೆ
ಬೃಹತ್ ಗಾತ್ರದ ಹೆಬ್ಬಾವು ಸೆರೆ; ಉರಗ ತಜ್ಞನ ಮೇಲೆಯೇ ದಾಳಿಗೆ ಮುಂದಾದ ಪೈಥಾನ್
ಬೃಹತ್ ಗಾತ್ರದ ಹೆಬ್ಬಾವು ಸೆರೆ; ಉರಗ ತಜ್ಞನ ಮೇಲೆಯೇ ದಾಳಿಗೆ ಮುಂದಾದ ಪೈಥಾನ್
ಮಂತ್ರಘೋಷಗಳ ನಡುವೆ ಕಚೇರಿ ಪ್ರವೇಶಿಸಿದ ತೆಲಂಗಾಣ ನೂತನ ಸಿಎಂ ರೇವಂತ್ ರೆಡ್ಡಿ
ಮಂತ್ರಘೋಷಗಳ ನಡುವೆ ಕಚೇರಿ ಪ್ರವೇಶಿಸಿದ ತೆಲಂಗಾಣ ನೂತನ ಸಿಎಂ ರೇವಂತ್ ರೆಡ್ಡಿ
ಬೆಂಗಳೂರು: ಸರಗಳ್ಳತನ ಮಾಡ್ತಿದ್ದ ಮಾಜಿ ಶಾಸಕರ ಮೊಮ್ಮಗ ಸೇರಿ ಮೂವರ ಬಂಧನ
ಬೆಂಗಳೂರು: ಸರಗಳ್ಳತನ ಮಾಡ್ತಿದ್ದ ಮಾಜಿ ಶಾಸಕರ ಮೊಮ್ಮಗ ಸೇರಿ ಮೂವರ ಬಂಧನ
ಪೃಥ್ವಿಸಿಂಗ್ ಹಲ್ಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ: ಪರಮೇಶ್ವರ್
ಪೃಥ್ವಿಸಿಂಗ್ ಹಲ್ಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ: ಪರಮೇಶ್ವರ್
ಬೆಳಗಾವಿ ಅಧಿವೇಶನ: ಕುಮಾರಸ್ವಾಮಿ ಎಡವಟ್ಟಿನಿಂದ ರೇವಣ್ಣ ತೀವ್ರ ನೊಂದುಕೊಂಡರು
ಬೆಳಗಾವಿ ಅಧಿವೇಶನ: ಕುಮಾರಸ್ವಾಮಿ ಎಡವಟ್ಟಿನಿಂದ ರೇವಣ್ಣ ತೀವ್ರ ನೊಂದುಕೊಂಡರು
ಕೆರೆಯಲ್ಲಿ ಕಳೆದಿದ್ದ ಚಿನ್ನದ ಸರ ಹುಡುಕಿ ವಾರಸುದಾರರಿಗೆ ಹಸ್ತಾಂತರ
ಕೆರೆಯಲ್ಲಿ ಕಳೆದಿದ್ದ ಚಿನ್ನದ ಸರ ಹುಡುಕಿ ವಾರಸುದಾರರಿಗೆ ಹಸ್ತಾಂತರ
ತನ್ವೀರ್ ಪೀರ್ ಹಾಷ್ಮಿ ವಿರುದ್ಧ ಬಸನಗೌಡ ಪಾಟೀಲ್ ಮತ್ತೊಂದು ಗಂಭೀರ ಆರೋಪ!
ತನ್ವೀರ್ ಪೀರ್ ಹಾಷ್ಮಿ ವಿರುದ್ಧ ಬಸನಗೌಡ ಪಾಟೀಲ್ ಮತ್ತೊಂದು ಗಂಭೀರ ಆರೋಪ!