AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲರೂ ಇಟ್ಟಿದ್ದ ನಂಬಿಕೆ ಉಳಿಸಿಕೊಳ್ಳಲಿಲ್ಲ ಸಂಗೀತಾ ಶೃಂಗೇರಿ; ಕಣ್ಣೀರು ಹಾಕಿದ ನಟಿ

ಎಲ್ಲರೂ ಇಟ್ಟಿದ್ದ ನಂಬಿಕೆ ಉಳಿಸಿಕೊಳ್ಳಲಿಲ್ಲ ಸಂಗೀತಾ ಶೃಂಗೇರಿ; ಕಣ್ಣೀರು ಹಾಕಿದ ನಟಿ

ಮದನ್​ ಕುಮಾರ್​
|

Updated on: Nov 10, 2023 | 5:26 PM

4 ವಾರಗಳ ಆಟದ ಆಧಾರದಲ್ಲಿ ಸಂಗೀತಾ ಶೃಂಗೇರಿ ಅವರು ಎಲ್ಲರ ನಂಬಿಕೆ ಗಳಿಸಿದ್ದರು. ಭರವಸೆಯ ಸ್ಪರ್ಧಿಯಾಗಿ ಅವರು ಹೊರ ಹೊಮ್ಮಿದ್ದರು. ಈಗ ಅವರ ಎಡವಿದ್ದಾರೆ. ಎಲ್ಲರೂ ಇಟ್ಟ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಅವರು ಗಳಗಳನೆ ಅತ್ತಿದ್ದಾರೆ. ಮನೆ ಮಂದಿಯೆಲ್ಲರೂ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

ನಟಿ ಸಂಗೀತಾ ಶೃಂಗೇರಿ ಅವರು ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿನ ಟಫ್​ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಪುರುಷ ಸ್ಪರ್ಧಿಗಳಿಗೂ ಕಠಿಣ ಪೈಪೋಟಿ ನೀಡುವ ಮೂಲಕ ಅವರು ಕಿಚ್ಚನ ಚಪ್ಪಾಳೆ ಗಿಟ್ಟಿಸಿದ್ದಾರೆ. ಆ ಕಾರಣದಿಂದಲೇ ಅವರ ಮೇಲೆ ಎಲ್ಲರೂ ನಂಬಿಕೆ ಇದ್ದಾರೆ. ಆದರೆ 5ನೇ ವಾರದಲ್ಲಿ ಆ ನಂಬಿಕೆಗೆ ಪೆಟ್ಟು ಬಿದ್ದಿದೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಸಂಗೀತಾ ಶೃಂಗೇರಿ (Sangeetha Sringeri) ಎಡವಿದ್ದಾರೆ. ಇದರ ಝಲಕ್​ ತೋರಿಸುವ ಪ್ರೋಮೋ ಬಿಡುಗಡೆ ಆಗಿದೆ. ‘ನನ್ನ ಪರವಾಗಿ ಸಂಗೀತಾ ಆಡುತ್ತಾರೆ’ ಎಂದು ಭಾಗ್ಯಶ್ರೀ ಹೇಳಿದ್ದಾರೆ. ಅಷ್ಟರಮಟ್ಟಿಗೆ ಎಲ್ಲರೂ ಸಂಗೀತಾ ಅವರ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ ಆ ಟಾಸ್ಕ್​ ನಿಭಾಯಿಸುವಲ್ಲಿ ಸಂಗೀತಾ ಸೋತಿದ್ದಾರೆ. ತಮ್ಮ ಕೈಯಿಂದ ಸ್ವಲ್ಪವೂ ಮಾಡಲು ಸಾಧ್ಯವಾಗಲಿಲ್ಲ ಎಂದು ಎಲ್ಲರ ಎದುರು ಸಂಗೀತಾ ಕಣ್ಣೀರು ಹಾಕಿದ್ದಾರೆ. ಈ ಸಂಚಿಕೆ ಕಲರ್ಸ್​ ಕನ್ನಡ ವಾಹಿನಿಯಲ್ಲಿ ನವೆಂಬರ್ 10ರ ರಾತ್ರಿ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಉಚಿತವಾಗಿ ಬಿಗ್​ ಬಾಸ್​ (BBK 10) ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.