ಪಕ್ಷದ ವರಿಷ್ಠರು ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರೋದು ಖಂಡಿತ ಬೇಸರ ಮೂಡಿಸಿದೆ: ಡಿವಿ ಸದಾನಂದ ಗೌಡ, ಸಂಸದ

ಪಕ್ಷದ ವರಿಷ್ಠರು ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರೋದು ಖಂಡಿತ ಬೇಸರ ಮೂಡಿಸಿದೆ: ಡಿವಿ ಸದಾನಂದ ಗೌಡ, ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 10, 2023 | 3:09 PM

ಪಕ್ಷದ ಹೈಕಮಾಂಡ್ ಇದುವರೆಗೆ ಒಬ್ಬ ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡದಿರೋದು, ರಾಜ್ಯಾಧ್ಯಕ್ಷರ ಅವಧಿ ಮುಗಿದರೂ ಹೊಸಬರನ್ನು ಆ ಸ್ಥಾನಕ್ಕೆ ನೇಮಕ ಮಾಡದಿರೋದು ಒಂದು ತಪ್ಪು ಸಂದೇಶವನ್ನು ರವಾನಿಸುತ್ತಿದೆ ಎಂದು ಸದಾನಂದ ಗೌಡ ಹೇಳಿದರು. ಕುಟುಂಬ ರಾಜಕಾರಣ ಸಲ್ಲದು ಅಂತ ಅವರು ಹೇಳಿದ್ದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲೆ ದಾಳಿ ನಡೆಸಿದಂತಿತ್ತು.

ಬೆಂಗಳೂರು: ಬಿಜೆಪಿ ಹೈಕಮಾಂಡ್ ವಿರುದ್ಧ ಅಸಮಾಧಾನ ಮತ್ತು ಬೇಸರ ವ್ಯಕ್ತಪಡಿಸಿದ ರಾಜ್ಯದ ಮೊದಲ ನಾಯಕ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿವಿ ಸದಾನಂದ ಗೌಡ (DV Sadananda Gowda) ಅಂದರೆ ಉತ್ಪ್ರೇಕ್ಷೆ ಅನಿಸದು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು ಚುನಾವಣಾ ರಾಜಕೀಯದಿಂದ (electoral politics) ದೂರ ಸರಿದಿರುವ ಬಗ್ಗೆ ತಮಗೆ ಖಂಡಿತ ಬೇಸರವಿಲ್ಲ, ಯಾಕೆಂದರೆ ಅದರ ಬಗ್ಗೆ 2019 ರಲ್ಲೇ ಸುಳಿವು ನೀಡಿದ್ದೆ ಎಂದ ಅವರು ಆದರೆ 2023 ವಿಧಾನಸಭಾ ಚುನಾವಣೆಯಲ್ಲಿ (Assembly polls) ಪಕ್ಷ ಸೋಲು ಅನುಭವಿಸಿದ ಬಳಿಕ ದೆಹಲಿಯ ವರಿಷ್ಠರು ರಾಜ್ಯದ ನಾಯಕರನ್ನು ಕಡೆಗಣಿಸಿರುವ ಬಗ್ಗೆ ಮತ್ತು ವಿಶ್ವಾಸಕ್ಕೆ ತೆಗೆದುಕೊಳ್ಳದ ಬಗ್ಗೆ ಖಂಡಿತ ಬೇಸರವಿದೆ ಅಂತ ಹೇಳಿದರು. ಪಕ್ಷದ ಹೈಕಮಾಂಡ್ ಇದುವರೆಗೆ ಒಬ್ಬ ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡದಿರೋದು, ರಾಜ್ಯಾಧ್ಯಕ್ಷರ ಅವಧಿ ಮುಗಿದರೂ ಹೊಸಬರನ್ನು ಆ ಸ್ಥಾನಕ್ಕೆ ನೇಮಕ ಮಾಡದಿರೋದು ಒಂದು ತಪ್ಪು ಸಂದೇಶವನ್ನು ರವಾನಿಸುತ್ತಿದೆ ಎಂದು ಸದಾನಂದ ಗೌಡ ಹೇಳಿದರು. ಕುಟುಂಬ ರಾಜಕಾರಣ ಸಲ್ಲದು ಅಂತ ಅವರು ಹೇಳಿದ್ದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲೆ ದಾಳಿ ನಡೆಸಿದಂತಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ