ಸೀರೆ ಧರಿಸಿ ಕಬಡ್ಡಿ ಆಡಿದ ಖ್ಯಾತ ನಟಿ, ಸಚಿವೆ ರೋಜಾ; ಇಲ್ಲಿದೆ ವೈರಲ್​ ವಿಡಿಯೋ

ಸೀರೆ ಧರಿಸಿ ಕಬಡ್ಡಿ ಆಡಿದ ಖ್ಯಾತ ನಟಿ, ಸಚಿವೆ ರೋಜಾ; ಇಲ್ಲಿದೆ ವೈರಲ್​ ವಿಡಿಯೋ

ಮದನ್​ ಕುಮಾರ್​
|

Updated on: Nov 10, 2023 | 2:37 PM

Roja Kabaddi Video: ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕಬಡ್ಡಿ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ರೋಜಾ ಭಾಗವಹಿಸಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡಿದರು. ವಿಶೇಷ ಏನೆಂದರೆ, ರೋಜಾ ಅವರಿಗೆ ಮೈದಾನ ಹೊಸದಲ್ಲ, ಕಬಡ್ಡಿಯೂ ಹೊಸದೇನಲ್ಲ. ಹಾಗಾಗಿಯೇ ಅವರು ಮೈದಾನಕ್ಕೆ ಇಳಿದು ಆಟಗಾರರನ್ನು ಹುರಿದುಂಬಿಸಿದರು.

ನಟಿ ರೋಜಾ (Roja) ಅವರು ಫುಲ್​ ಟೈಮ್​ ರಾಜಕಾರಣದಲ್ಲಿ ಬ್ಯುಸಿ ಆಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ಸಚಿವೆ ಆಗಿರುವ ಅವರು ಕಾಕಿನಾಡ ಆದಿತ್ಯ ವಿದ್ಯಾ ಕ್ಯಾಂಪಸ್‌ನಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕಬಡ್ಡಿ (Kabaddi) ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡಿದರು. ವಿಶೇಷ ಏನೆಂದರೆ, ರೋಜಾ ಅವರಿಗೆ ಮೈದಾನ ಹೊಸದಲ್ಲ, ಕಬಡ್ಡಿಯೂ ಹೊಸದೇನಲ್ಲ. ಹಾಗಾಗಿಯೇ ಅವರು ಮೈದಾನಕ್ಕೆ ಇಳಿದು ಆಟಗಾರರನ್ನು ಹುರಿದುಂಬಿಸಿದರು. ಆಟಗಾರರಲ್ಲಿ ಕ್ರೀಡಾ ಮನೋಭಾವನೆಯನ್ನು ತುಂಬಿದರು. ಈ ವೇಳೆ ಮಾತನಾಡಿದ ರೋಜಾ ಅವರು, ‘ಶಾಲಾ ದಿನಗಳಿಂದಲೂ ನನಗೆ ಕಬಡ್ಡಿ ಎಂದರೆ ತುಂಬ ಇಷ್ಟ. ಆದರೆ ಅಂದು ಮೈದಾನದಲ್ಲಿ ಆಡಿದರೆ ಈಗ ರಾಜಕೀಯದಲ್ಲಿ ಆಡುತ್ತಿದ್ದೇನೆ’ ಎಂದು ಹೇಳಿ ನಗು ಚೆಲ್ಲಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.