Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬೆಯ ದರ್ಶನಕ್ಕೆ ಪತಿಯೊಂದಿಗೆ ಆಗಮಿಸಿದ ಭವಾನಿ ರೇವಣ್ಣ ಜನರ ಗಮನ ತಮ್ಮತ್ತ ಸೆಳೆದುಕೊಂಡರು!

ಹಾಸನಾಂಬೆಯ ದರ್ಶನಕ್ಕೆ ಪತಿಯೊಂದಿಗೆ ಆಗಮಿಸಿದ ಭವಾನಿ ರೇವಣ್ಣ ಜನರ ಗಮನ ತಮ್ಮತ್ತ ಸೆಳೆದುಕೊಂಡರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 10, 2023 | 12:11 PM

ಜನ ಅವರನ್ನು ನೋಡಿದಾಕ್ಷಣ ಅಕ್ಕಾ ಅಕ್ಕಾ ಅಂತ ದುಂಬಾಲು ಬೀಳುತ್ತಾರೆ. ದೇವಿಯ ದರ್ಶನಕ್ಕಾಗಿ ಸಾಲಲ್ಲಿ ನಿಂತಿರುವ ಜನ ಸಹ ಭವಾನಿ ಅವರಿಗೆ ಕೈಮುಗಿದು ನಮಸ್ಕರಿಸುವುದನ್ನು ನೋಡಬಹುದು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವರೂಪ್ ಗೆಲುವಿಗೆ ಭವಾನಿ ನಡೆಸಿದ ಪ್ರಚಾರ ನಿರ್ಣಾಯಕವಾಗಿತ್ತು ಅಂತ ಕನ್ನಡಿಗರಿಗೆಲ್ಲ ಗೊತ್ತು.

ಹಾಸನ: ಹಾಸನ ಜಿಲ್ಲೆಯಲ್ಲಿ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರ ಧರ್ಮಪತ್ನಿ ಭವಾನಿ ರೇವಣ್ಣ (HD Revanna) ಗತ್ತೇ ಹಾಗೆ ಮಾರಾಯ್ರೇ. ಅವರಿದ್ದಲ್ಲಿ ಅಭಿಮಾನಿಗಳು ಮುಕ್ಕುರುತ್ತಾರೆ, ಮಾಧ್ಯಮದವರನ್ನು ಅವರು ತಮ್ಮತ್ತ ಸೆಳೆದುಕೊಂಡು ಬಿಡುತ್ತಾರೆ. ಹಾಗೆ ನೋಡಿದರೆ ಭವಾನಿ ಈಗ ಯಾವುದೇ ಹುದ್ದೆಯಲ್ಲಿಲ್ಲ, ಹಿಂದೆ ಅವರು ಜಿಲ್ಲಾ ಪಂಚಾಯತ್ (Zilla Panchayat) ಸದಸ್ಯರಾಗಿದ್ದರು. ಆದರೆ, ಒಬ್ಬ ಜನಪ್ರಿಯ ಶಾಸಕನಿಗಿಂತ ಹೆಚ್ಚು ಅಭಿಮಾನಿ ಮತ್ತು ಬೆಂಬಲಿಗರು ಅವರಿಗಿದ್ದಾರೆ. ಇವತ್ತು ಅವರು ಪತಿ ರೇವಣ್ಣ ಅವರೊಂದಿಗೆ ಹಾಸನಾಂಬೆ ದರ್ಶನಕ್ಕೆ ಬಂದ ದೃಶ್ಯಗಳನ್ನು ನೋಡಿ. ಜರತಾರಿ ಸಿರೆಯುಟ್ಟು ಕತ್ತಲ್ಲಿ ಕಾಸಿನ ಸರ ತಲೆಗೆ ಕನಕಾಂಬರ ಹೂ ಮುಡಿದು ಜನರ ನಡುವೆ ಅವರು ನಡೆದು ಬರುವ ದೃಶ್ಯ ಆಕರ್ಷಕ ಅಂತ ಬೇರೆ ಹೇಳಬೇಕಿಲ್ಲ. ಅಗಲೇ ಹೇಳಿದ ಹಾಗೆ, ಜನ ಅವರನ್ನು ನೋಡಿದಾಕ್ಷಣ ಅಕ್ಕಾ ಅಕ್ಕಾ ಅಂತ ದುಂಬಾಲು ಬೀಳುತ್ತಾರೆ. ದೇವಿಯ ದರ್ಶನಕ್ಕಾಗಿ ಸಾಲಲ್ಲಿ ನಿಂತಿರುವ ಜನ ಸಹ ಭವಾನಿ ಅವರಿಗೆ ಕೈಮುಗಿದು ನಮಸ್ಕರಿಸುವುದನ್ನು ನೋಡಬಹುದು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವರೂಪ್ ಗೆಲುವಿಗೆ ಭವಾನಿ ನಡೆಸಿದ ಪ್ರಚಾರ ನಿರ್ಣಾಯಕವಾಗಿತ್ತು ಅಂತ ಕನ್ನಡಿಗರಿಗೆಲ್ಲ ಗೊತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ