ರೇಂಜ್ ಫಾರೆಸ್ಟ್ ಆಫೀಸರ್ ಗೆ ಡಿವಿ ಸದಾನಂದ ಗೌಡರು, ‘ನಾನ್ರೀ ಮಾಜಿ ಮುಖ್ಯಮಂತ್ರಿ!’ ಅಂತ ಹೇಳಿದ್ದು ಯಾಕೆ ಗೊತ್ತಾ?
ಚೆನ್ನಾಗಿ ತರಾಟೆಗೊಳಗಾದ ಬಳಿಕ ಆರ್ ಎಫ್ ಓ ತಾವು ಯಾರೂಂತ ಗೊತ್ತಾಗಲಿಲ್ಲ ಅನ್ನುತ್ತಾರೆ! ಆಗಲೇ ಸಂಸದರು,‘ನಾನ್ರೀ, ಸದಾನಂದ ಗೌಡ, ರಾಜ್ಯದ ಮಾಜಿ ಮುಖ್ಯಮಂತ್ರಿ!’ ಅನ್ನುತ್ತಾರೆ. ಅವರ ಮಾತು ಕೇಳಿ ಪ್ರಾಯಶಃ ಹೆದರಿ ಆತಂಕಕ್ಕೊಳಗಾಗುವ ಅರ್ ಎಫ್ ಓ ಫೋನನ್ನು ಡಿ ಎಫ್ ಓಗೆ ನೀಡುತ್ತಾರೆ. ಅವರನ್ನೂ ಸದಾನಂದ ಗೌಡರು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಮಂಡ್ಯ: ನಿನ್ನೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿವಿ ಸದಾನಂದ ಗೌಡ (DV Sadananda Gowda) ಇಂದು ಮಂಡ್ಯ ಪ್ರವಾಸದಲ್ಲಿದ್ದರು. ಜಿಲ್ಲಾ ಕಾರ್ಯಕರ್ತರೊಂದಿಗೆ ಸಭೆ ನಡೆಸುವಾಗ ಜಿಲ್ಲೆಯ ಕೆಲ ಭಾಗಗಳಲ್ಲಿ ಚಿರತೆ ಹಾವಳಿ (leopard menace) ಹೆಚ್ಚಾಗಿರುವುದನ್ನು ಅವರ ಗಮನಕ್ಕೆ ತರಲಾಯಿತು. ಗ್ರಾಮಸ್ಥರು ಹಲವಾರು ಬಾರಿ ವಿಷಯವನ್ನು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಾಗ್ಯೂ ಅವರಿಂದ ಯಾವುದೇ ಕ್ರಮ ಜರುಗಿಲ್ಲ ಅಂತ ಕಾರ್ಯಕರ್ತರು ಹೇಳಿದಾಗ ಸಿಡಿಮಿಡಿಗೊಳ್ಳುವ ಅವರು ಆರ್ ಎಫ್ ಓ ಗೆ (RFO) ಫೋನ್ ಮಾಡುವಂತೆ ಹೇಳುತ್ತಾರೆ. ಕಾರ್ಯಕರ್ತರೊಬ್ಬರು ಅಧಿಕಾರಿ ನಂಬರ್ ಗೆ ಡಯಲ್ ಮಾಡಿ ಪೋನನ್ನು ಸದಾನಂದ ಗೌಡರಿಗೆ ನೀಡಿದಾಗ ಅವರು ಅಧಿಕಾರಿಯ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಅವರಿಂದ ಚೆನ್ನಾಗಿ ತರಾಟೆಗೊಳಗಾದ ಬಳಿಕ ಆರ್ ಎಫ್ ಓ ತಾವು ಯಾರೂಂತ ಗೊತ್ತಾಗಲಿಲ್ಲ ಅನ್ನುತ್ತಾರೆ! ಆಗಲೇ ಸಂಸದರು, ‘ನಾನ್ರೀ, ಸದಾನಂದ ಗೌಡ, ರಾಜ್ಯದ ಮಾಜಿ ಮುಖ್ಯಮಂತ್ರಿ!’ ಅನ್ನುತ್ತಾರೆ. ಅವರ ಮಾತು ಕೇಳಿ ಪ್ರಾಯಶಃ ಹೆದರಿ ಆತಂಕಕ್ಕೊಳಗಾಗುವ ಅರ್ ಎಫ್ ಓ ಫೋನನ್ನು ಡಿ ಎಫ್ ಓಗೆ ನೀಡುತ್ತಾರೆ. ಅವರನ್ನೂ ಸದಾನಂದ ಗೌಡರು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
