ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗುವ ಆಸೆ ಇಟ್ಟಕೊಂಡಿದ್ದರೆ ತಪ್ಪೇನಿಲ್ಲ: ಡಿಕೆ ಸುರೇಶ್

ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗುವ ಆಸೆ ಇಟ್ಟಕೊಂಡಿದ್ದರೆ ತಪ್ಪೇನಿಲ್ಲ: ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 09, 2023 | 4:09 PM

ಶಾಸಕರಾದವರು ಮಂತ್ರಿಗಳಾಗುವ ಆಸೆ ಇಟ್ಟ್ಟುಕೊಂಡಿರುತ್ತಾರೆ, ಮಂತ್ರಿಗಳಿಗೆ ಮುಖ್ಯಮಂತ್ರಿಯಗುವ ಆಸೆ ಇರುತ್ತದೆ ಮತ್ತು ಏನೂ ಆಗಿಲ್ಲದವರಿಗೆ ಶಾಸಕನಾಗುವ ಆಕಾಂಕ್ಷೆ ಇರುತ್ತದೆ ಎಂದು ಹೇಳಿದ ಸುರೇಶ್, ಸದ್ಯಕ್ಕಂತೂ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ನಮ್ಮ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ತಾನೂ ಒಬ್ಬ ಆಕಾಂಕ್ಷಿ ಅಂತ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ ಎಂದರು.

ಬೆಂಗಳೂರು: ಮೊನ್ನೆ (ಮಂಗಳವಾರ) ಡಿಕೆ ಶಿವಕುಮಾರ್ (DK Shivakumar) ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರೆ ಇವತ್ತು ಅವರ ಸಹೋದರ ಡಿಕೆ ಸುರೇಶ್ (DK Suresh) ಸರದಿ. ಏನ್ಸಾರ್ ವಿಷಯ ಅಂತ ಮಾಧ್ಯಮದರು ಕೇಳಿದರೆ ಸಂಸದರು ಅಸಲು ವಿಷಯ ಬಿಟ್ಟು ಬೇರೆಯದನ್ನು ಹೇಳಿದರು ಅನ್ಸುತ್ತೆ. ಸತೀಶ್ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿರುವ ಜೊತೆಗೆ ಲೋಕೋಪಯೋಗಿ ಖಾತೆ ಸಚಿವರೂ ಆಗಿದ್ದಾರೆ. ಮಳೆಯ ಕಾರಣ ತಮ್ಮ ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿವೆ ಹಾಗಾಗಿ ದುರಸ್ತಿ ಕಾಮಗಾರಿಗಳಿಗಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಕೇಳಲು ಬಂದಿದ್ದೆ ಅನ್ನುತ್ತಾರೆ. ಸತೀಶ್ ಅವರು ಸಹ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ ಅದರಲ್ಲಿ ತಪ್ಪೇನಿದೆ? ಶಾಸಕರಾದವರು ಮಂತ್ರಿಗಳಾಗುವ ಆಸೆ ಇಟ್ಟ್ಟುಕೊಂಡಿರುತ್ತಾರೆ, ಮಂತ್ರಿಗಳಿಗೆ ಮುಖ್ಯಮಂತ್ರಿಯಗುವ ಆಸೆ ಇರುತ್ತದೆ ಮತ್ತು ಏನೂ ಆಗಿಲ್ಲದವರಿಗೆ ಶಾಸಕನಾಗುವ ಆಕಾಂಕ್ಷೆ ಇರುತ್ತದೆ ಎಂದು ಹೇಳಿದ ಸುರೇಶ್, ಸದ್ಯಕ್ಕಂತೂ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ನಮ್ಮ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ತಾನೂ ಒಬ್ಬ ಆಕಾಂಕ್ಷಿ ಅಂತ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ