ತಾವು ಭಾಷಣ ಮಾಡುವಾಗ ವೇದಿಕೆಗೆ ಆಗಮಿಸಿದ ಡಿಕೆ ಶಿವಕುಮಾರ್ ಗೆ ಸ್ವಾಗತ ಕೋರಿದ ಸಿದ್ದರಾಮಯ್ಯ
ಜನರ ಕಿವಿಗಡಚಿಕ್ಕುವ ಚಪ್ಪಾಳೆ ಸದ್ದಿನ ನಡುವೆ ಎದ್ದು ನಿಲ್ಲುವ ಶಿವಕುಮಾರ್ ಎಲ್ಲರಿಗೂ ನಮಸ್ಕರಿಸಿ ಅಭಿನಂದನೆ ಸ್ವೀಕರಿಸುತ್ತಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಿವಕುಮಾರ್ಗೆ ಬೋಕೆ ನೀಡಿ ಸ್ವಾಗತ ಕೋರುತ್ತಾರೆ. ಇದು ಕಾರ್ಮಿಕ ಇಲಾಖೆಯ ಕಾರ್ಯಕ್ರಮ ಆಗಿದ್ದರಿಂದ ಲಾಡ್ ಅವರೇ ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು.
ಬೆಂಗಳೂರು: ತಮ್ಮ ಭಾಷಣದ ನಡುವೆ ವೇದಿಕೆಗೆ ಆಗಮಿಸಿದ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಕಾರ್ಯಕ್ರಮದಲ್ಲಿ ನೆರೆದ ಜನರಿಂದ ದೀರ್ಘ ಕರತಾಡನ ಸಿಕ್ಕಾಗ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ಸಿಡಿಮಿಡಿಗೊಳ್ಳಲಿಲ್ಲ, ಅಸಹನೆ, ಅಸಮಾಧಾನ ವ್ಯಕ್ತಪಡಿಸಲಿಲ್ಲ. ಬದಲಿಗೆ ಅವರನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತಾ, ವೇದಿಕೆಗೆ ಆಗಮಿಸಿರುವ ರಾಜ್ಯದ ಉಪ ಮುಖ್ಯಮಂತ್ರಿಯವರಿಗೆ ತಮ್ಮೆಲ್ಲರ ಪರವಾಗಿ ಸ್ವಾಗತ ಅನ್ನುತ್ತಾರೆ. ಜನರ ಕಿವಿಗಡಚಿಕ್ಕುವ ಚಪ್ಪಾಳೆ ಸದ್ದಿನ ನಡುವೆ ಎದ್ದು ನಿಲ್ಲುವ ಶಿವಕುಮಾರ್ ಎಲ್ಲರಿಗೂ ನಮಸ್ಕರಿಸಿ ಅಭಿನಂದನೆ ಸ್ವೀಕರಿಸುತ್ತಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಶಿವಕುಮಾರ್ ಗೆ ಬೋಕೆ ನೀಡಿ ಸ್ವಾಗತ ಕೋರುತ್ತಾರೆ. ಇದು ಕಾರ್ಮಿಕ ಇಲಾಖೆಯ ಕಾರ್ಯಕ್ರಮ ಆಗಿದ್ದರಿಂದ ಲಾಡ್ ಅವರೇ ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು. ಕಟ್ಟಡ ಮತ್ತು ಇತರ ಕಾರ್ಮಿಕರ ಮಕ್ಕಳಿಗೆ 2022-23 ಸಾಲಿನ ಶೈಕಣಿಕ ಧನಸಹಾಯ ಬಿಡುಗಡೆ ಸಮಾರಂಭದಲ್ಲಿ ಸಿದ್ದರಾಮಯ್ಯ, ಶಿವಕುಮಾರ್, ಕೆಹೆಚ್ ಮುನಿಯಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಶಿವಕುಮಾರ್ ಅವರಿಗೆ ಸ್ವಾಗತ ಕೋರಿದ ಬಳಿಕ ಸಿದ್ದರಾಮಯ್ಯ ಭಾಷಣ ಮುಂದುವರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
