AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಕಮಾಂಡ್ ಅವಮಾನಿಸಿ ಕಳುಹಿಸಿದ್ದಕ್ಕೆ ನೊಂದ ಡಿವಿ ಸದಾನಂದಗೌಡರಿಂದ ರಾಜಕೀಯ ನಿವೃತ್ತಿ: ಕಾಂಗ್ರೆಸ್

ಚುನಾವಣಾ ರಾಜಕೀಯದಿಂದ ಸದಾನಂದಗೌಡ ನಿವೃತ್ತಿ ಘೋಷಿಸಿದ ಬಗ್ಗೆ ಟ್ವೀಟ್ ಮೂಲಕ ವ್ಯಂಗ್ಯವಾಡಿದ ಕರ್ನಾಟಕ ರಾಜ್ಯ ಕಾಂಗ್ರೆಸ್ ಘಟಕ, ಬಿಜೆಪಿ ಹೈಕಮಾಂಡ್​ ನಾಯಕರು ಕರೆಸಿ ಅವಮಾನಿಸಿ ಕಳುಹಿಸಿದ್ದರು. ನೊಂದ ಸದಾನಂದಗೌಡರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಎಂದು ಅಣುಕಿಸಿದೆ.

ಹೈಕಮಾಂಡ್ ಅವಮಾನಿಸಿ ಕಳುಹಿಸಿದ್ದಕ್ಕೆ ನೊಂದ ಡಿವಿ ಸದಾನಂದಗೌಡರಿಂದ ರಾಜಕೀಯ ನಿವೃತ್ತಿ: ಕಾಂಗ್ರೆಸ್
ಹೈಕಮಾಂಡ್ ಅವಮಾನಿಸಿ ಕಳುಹಿಸಿದ್ದಕ್ಕೆ ನೊಂದ ಡಿವಿ ಸದಾನಂದಗೌಡರಿಂದ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಎಂದು ವ್ಯಂಗ್ಯವಾಡಿದ ಕಾಂಗ್ರೆಸ್
ಪ್ರಸನ್ನ ಗಾಂವ್ಕರ್​
| Edited By: |

Updated on: Nov 09, 2023 | 5:39 PM

Share

ಬೆಂಗಳೂರು, ನ.9: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಸದ ಡಿವಿ ಸದಾನಂದಗೌಡ (DV Sadananda Gowda) ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ನಾಯಕರ ಆಹ್ವಾನದ ಮೇರೆಗೆ ಹೈಕಮಾಂಡ್ ಭೇಟಿಯಾದ ಸದಾನಂದಗೌಡ, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ (Congress) ಘಟಕ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಬಿಜೆಪಿ ಹೈಕಮಾಂಡ್​ ನಾಯಕರು ಕರೆಸಿ ಅವಮಾನಿಸಿ ಕಳುಹಿಸಿದ್ದರು. ನೊಂದ ಸದಾನಂದಗೌಡರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಎಂದು ಕಾಂಗ್ರೆಸ್ ಅಣುಕಿಸಿದೆ. ಅಲ್ಲದೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಎಳೆತಂದು “ಮತ್ತೆ ಅವಮಾನವಾಗುವ ಸುಳಿವನ್ನು ಅರಿತು ಗುಡ್​ಬೈ ಹೇಳಿದ್ದಾರೆ” ಎಂದು ಹೇಳಿದೆ.

ಇದನ್ನೂ ಓದಿ: ಚುನಾವಣಾ ನಿವೃತ್ತಿಗೆ ಹೈಕಮಾಂಡ್ ಸೂಚನೆ: ಯಡಿಯೂರಪ್ಪ ಹೇಳಿಕೆಗೆ ಡಿವಿ ಸದಾನಂದಗೌಡ ಹೇಳಿದ್ದೇನು?

ಕಾಂಗ್ರೆಸ್ ಟ್ವೀಟ್​ನಲ್ಲಿ ಏನಿದೆ?

“ಬಿಜೆಪಿ ಹೈಕಮಾಂಡ್ ನಾಯಕರು ಕರೆಸಿ ಅವಮಾನಿಸಿ ಕಳಿಸಿದ್ದರಿಂದ ನೊಂದ ಸದಾನಂದಗೌಡರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. “ಸಂತೋಷ ಕೂಟ”ದ ದಾಳಕ್ಕೆ ಮುಂದಿನ ಲೋಕಸಭೆಯ ಟಿಕೆಟ್ ಸಿಗದೆ ಮತ್ತೊಮ್ಮೆ ಅವಮಾನವಾಗುವ ಸುಳಿವನ್ನು ಅರಿತು ಈಗಲೇ ಗುಡ್ ಬೈ ಹೇಳಿದ್ದಾರೆ. ಎಲ್ಲಾ ತಲೆಗಳನ್ನೂ ಉರುಳಿಸಿ “ನಾಯಕತ್ವ ಮುಕ್ತ ಬಿಜೆಪಿ” ಮಾಡುವಲ್ಲಿ ಸಂತೋಷ ಕೂಟ ಯಶಸ್ವಿಯಾಗಿದೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!