ರಾಮನಗರ: ವಿಭೂತಿಕೆರೆಯಲ್ಲಿ ಬರ ಅಧ್ಯಯನದ ವೇಳೆ ಜಗಳ ಮಾಡಿಕೊಂಡ ಬಿಜೆಪಿ ನಾಯಕರು
ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಬರ ಅಧ್ಯಯನದ ವೇಳೆ ಬಿಜೆಪಿ ಎಂಎಲ್ಸಿ ಆ.ದೇವೇಗೌಡ ಹಾಗೂ ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಜಯರಾಂ ನಡುವೆ ವೈಯಕ್ತಿಯ ವಿಚಾರವಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಮಾಜಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ಎದುರೇ ನಾಯಕರು ಬೈದಾಡಿಕೊಂಡಿದ್ದಾರೆ.
ರಾಮನಗರ, ನ.9: ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಬರ ಅಧ್ಯಯನದ ವೇಳೆ ಬಿಜೆಪಿ ಎಂಎಲ್ಸಿ ಆ.ದೇವೇಗೌಡ (A.Devegowda) ಹಾಗೂ ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಕಲಗೆರೆ ಜಯರಾಂ (Kalagere Jayaram) ನಡುವೆ ವೈಯಕ್ತಿಯ ವಿಚಾರವಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಮಾಜಿ ಸಚಿವ ಕೋಟ ಶ್ರೀನಿವಾಸಪೂಜಾರಿ (Kota Srinivas Poojary) ಎದುರೇ ನಾಯಕರು ಬೈದಾಡಿಕೊಂಡಿದ್ದಾರೆ.
ವೈಯಕ್ತಿಕ ವಿಚಾರವಾಗಿ ಆ.ದೇವೇಗೌಡ ಮತ್ತ ಜಯರಾಂ ನಡುವೆ ಗಲಾಟೆ ನಡೆದಿದೆ. ಈ ವೇಳೆ ದೇವೇಗೌಡ ಅವರು ಜಯರಾಂ ಅವರ ಕಪಾಲಕ್ಕೆ ಬಾರಿಸಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಹಾಗೂ ಸ್ಥಳೀಯ ಬಿಜೆಪಿ ನಾಯಕರು ಜಗಳ ಬಿಡಿಸಿದರು. ಅಲ್ಲದೆ, ದೇವೇಗೌಡರ ವಿರುದ್ಧ ಪಕ್ಷಕ್ಕೆ ದೂರು ಕೊಡಲು ಜಯರಾಂ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಜಯರಾಂ, ನಾನು ಅವರಿಗಾಗಿ ದುಡಿಮೆ ಮಾಡಿದ್ದೇನೆ. ಅವರ ಚುನಾವಣೆಯಲ್ಲಿ ಅವರಿಗೆ ಮತಹಾಕಿಸಿದ್ದೇನೆ. ಆದರೆ ಅವರು ಇವತ್ತು ನನ್ನ ಕಪಾಲಕ್ಕೆ ಹೊಡೆದರು. ಎಂಎಲ್ಸಿ ಚುನಾವಣೆ ವಿಚಾರವಾಗಿ ಮಾತನಾಡುತ್ತ ಹೊಡೆದರು. ಇದು ನನಗೆ ಬಹಳ ದುಃಖವಾಗಿದೆ ಎಂದರು.
ನಾನು ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರಿಗೆ ದೂರು ಕೊಡುತ್ತೇನೆ. ನಾನು 30 ವರ್ಷದಿಂದ ಪಕ್ಷಕ್ಕೆ ದುಡಿಮೆ ಮಾಡಿದ್ದೇನೆ. ಆದರೆ ಇಂತಹ ಕೃತ್ಯ ಮುಂದೆ ಯಾರಿಗೂ ಆಗಬಾರದು. ಅವರಿಗೆ ಪಕ್ಷದಲ್ಲಿ ಯಾವ ರೀತಿ ತೊಂದರೆ ಆಗುತ್ತಿದೆಯೋ ಗೊತ್ತಿಲ್ಲ. ಈ ರೀತಿ ನಡೆದುಕೊಂಡದ್ದು ತಪ್ಪು ಹೇಳಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ