ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂರೋವರೆಗೆ ಸಂಸದ ಪ್ರಜ್ವಲ್ ರೇವಣ್ಣ ನಿಂತೇ ಇದ್ದರು!
ಕಳೆದ ತಿಂಗಳು ಮೈಸೂರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದಾಗ ಅಲ್ಲಿನ ಸಂಸದ ಪ್ರತಾಪ್ ಸಿಂಹ ವೇದಿಕೆಯ ಮೇಲೆ ಮೈಮುದುರಿಕೊಂಡು ಸಂಕೋಚದ ಮುದ್ದೆಯಾಗಿ ಕೂತಿದ್ದರು! ಇವತ್ತು ಹಾಸನ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದಾಗ, ಸಂಸದ ಪ್ರಜ್ವಲ್ ರೇವಣ್ಣ ವರ್ತನೆ ಭಿನ್ನವಾಗೇನೂ ಇರಲಿಲ್ಲ
ಹಾಸನ: ರಾಜ್ಯದ ಈಗಿನ ಕಾಂಗ್ರೆಸ್ಸೇತರ ಪಕ್ಷಗಳ ಯುವ ನಾಯಕರನ್ನು ನೀವು ಗಮನಿಸಿ. ಮಾಧ್ಯಮಗಳ ಮುಂದೆ, ರಾಜಕೀಯ ಕಾರ್ಯಕ್ರಮಗಳ ವೇದಿಕೆ ಮತ್ತು ಇನ್ನೂ ಬೇರೆ ಕಡೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ತೀವ್ರವಾಗಿ ಟೀಕಿಸುತ್ತಾರೆ ಅದರೆ ಅವರು ಎದುರು ಬಂದಾಗ ವಿಧೇಯ ವಿದ್ಯಾರ್ಥಿಗಳ (obedient students) ಹಾಗೆ ಕೈಕಟ್ಟಿ ನಿಲ್ಲುತ್ತಾರೆ. ಕಳೆದ ತಿಂಗಳು ಮೈಸೂರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದಾಗ ಅಲ್ಲಿನ ಸಂಸದ ಪ್ರತಾಪ್ ಸಿಂಹ ವೇದಿಕೆಯ ಮೇಲೆ ಮೈಮುದುರಿಕೊಂಡು ಸಂಕೋಚದ ಮುದ್ದೆಯಾಗಿ ಕೂತಿದ್ದರು! ಇವತ್ತು ಹಾಸನ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದಾಗ, ಸಂಸದ ಪ್ರಜ್ವಲ್ ರೇವಣ್ಣ (Prajwal Revanna, MP) ವರ್ತನೆ ಭಿನ್ನವಾಗೇನೂ ಇರಲಿಲ್ಲ. ವೇದಿಕೆ ಮೇಲೆ ಸಿದ್ದರಾಮಯ್ಯರನ್ನು ಶಾಲು ಹೊದಿಸಿ ಮತ್ತು ಹಾರ ಹಾಕಿ ಸನ್ಮಾನ ಮಾಡುವ ಸಂಸದರು ಕೈಕಟ್ಟಿಕೊಂಡು ಯೋಗಕ್ಷೇಮ ವಿಚಾರಿಸುತ್ತಾರೆ. ಬಳಿಕ ಸಿದ್ದರಾಮಯ್ಯ ಕೂತ್ಕೊಳ್ಳಿ ಅಂತ ಹೇಳಿದಾಗ ಕುರ್ಚಿಯ ಮೇಲೆ ಕೂರಲು ಅಣಿಯಾಗುವ ಪ್ರಜ್ವಲ್, ಸಿದ್ದರಾಮಯ್ಯ ತಮ್ಮ ಎಡಪಕ್ಕದಲ್ಲಿದ್ದ ವ್ಯಕ್ತಿಯ ಜೊತೆ ಇನ್ನೂ ಮಾತಾಡುತ್ತಾ ನಿಂತಿರುವುದನ್ನು ನೋಡಿ ಇನ್ನೇನು ಕೂರಬೇಕು ಅನ್ನುವಾಗ ಥಟ್ಟನೆ ನಿಂತುಬಿಡುತ್ತಾರೆ. ಸಿದ್ದರಾಮಯ್ಯ ಅವರು ಕುರ್ಚಿಯಲ್ಲಿ ಕುಳಿತ ನಂತರವೇ ಪ್ರಜ್ವಲ್ ಆಸೀನರಾಗುತ್ತಾರೆ. ನಿಜಕ್ಕೂ ಸಂಸ್ಕಾರವಂತ ಸಂಸದ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
