ಕಾಂಗ್ರೆಸ್‌ನಲ್ಲಿ ಯಾರ್ಯಾರು ಎಲ್ಲೆಲ್ಲಿ ನಿಂತಿದ್ರು ಮೊದಲು ಚರ್ಚೆ ಮಾಡಿ: ಡಿಕೆ ಶಿವಕುಮಾರ್​ಗೆ​ ಸಂಸದ ಪ್ರಜ್ವಲ್‌ ರೇವಣ್ಣ ತಿರುಗೇಟು

ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ರಾಮನಗರದವರಲ್ಲ, ಹೊಳೆನರಸೀಪುರದವರೆಂದು ಡಿಕೆ ಶಿವಕುಮಾರ್​​ ಹೇಳಿಕೆ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್‌ ರೇವಣ್ಣ, ನಮ್ಮ ಬಗ್ಗೆ ಮಾತಾಡುವ ಮುನ್ನ ಕಾಂಗ್ರೆಸ್‌ನಲ್ಲಿ ಯಾರು ಯಾರು ಎಲ್ಲೆಲ್ಲಿ ನಿಂತಿದ್ದರು ಅನ್ನೋದನ್ನ ಮೊದಲು ಚರ್ಚೆ ಮಾಡಿ ನಮ್ಮ ಬಗ್ಗೆ ಮಾತಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​​ಗೆ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಯಾರ್ಯಾರು ಎಲ್ಲೆಲ್ಲಿ ನಿಂತಿದ್ರು ಮೊದಲು ಚರ್ಚೆ ಮಾಡಿ: ಡಿಕೆ ಶಿವಕುಮಾರ್​ಗೆ​ ಸಂಸದ ಪ್ರಜ್ವಲ್‌ ರೇವಣ್ಣ ತಿರುಗೇಟು
ಜೆಡಿಎಸ್‌ ಪಕ್ಷದ ಸಂಸದ ಪ್ರಜ್ವಲ್‌ ರೇವಣ್ಣ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 26, 2023 | 8:14 PM

ಹಾಸನ, ಅಕ್ಟೋಬರ್​​​​​ 26: ನಮ್ಮ ಬಗ್ಗೆ ಮಾತಾಡುವ ಮುನ್ನ ಕಾಂಗ್ರೆಸ್‌ನಲ್ಲಿ ಯಾರು ಯಾರು ಎಲ್ಲೆಲ್ಲಿ ನಿಂತಿದ್ದರು ಅನ್ನೋದನ್ನ ಮೊದಲು ಚರ್ಚೆ ಮಾಡಿ ನಮ್ಮ ಬಗ್ಗೆ ಮಾತಾಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ತಿರುಗೇಟು ನೀಡಿದ್ದಾರೆ. ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ರಾಮನಗರದವರಲ್ಲ, ಹೊಳೆನರಸೀಪುರದವರೆಂದು ಡಿಕೆ ಶಿವಕುಮಾರ್​​ ಹೇಳಿಕೆ ವಿಚಾರವಾಗಿ ನಗದರಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಹೆಚ್​ಡಿ ದೇವೇಗೌಡ ಹಾಸನದಿಂದ ಹೋಗಿ ದೆಹಲಿ ಆಳಿದರು, ಅದನ್ನು ತಪ್ಪು ಅಂತಾರಾ. ಪ್ರಧಾನಿ ಮೋದಿ ಗುಜರಾತ್‌ನಿಂದ ಬಂದಿರುವವರು, ವಾರಣಾಸಿಯಲ್ಲಿ ಸ್ಪರ್ಧಿಸಿಲ್ವಾ? ಪ್ರಜಾಪ್ರಭುತ್ವದಲ್ಲಿ ಎಲ್ಲಾದ್ರೂ ಸ್ಪರ್ಧಿಸಿ ಗೆಲ್ಲಬಹುದು ಅಥವಾ ಸೋಲಬಹುದು ಎಂದಿದ್ದಾರೆ.

ಇದನ್ನೂ ಓದಿ: ಈ ಹಿಂದೆ ಕೂಡ ಚರ್ಚೆ ಮಾಡಿ ಕ್ಷಮೆ ಕೇಳಿದ್ದ ಹೆಚ್​ಡಿ ಕುಮಾರಸ್ವಾಮಿ: ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್

ಹೊಳೆನರಸೀಪುರದವ್ರು ಹೊಳೆನರಸೀಪುರದಲ್ಲೇ, ಕನಕಪುರದವ್ರು ಕನಕಪುರದಲ್ಲೇ, ರಾಮನಗರದವರು, ರಾಮನಗರದಲ್ಲೇ ಸ್ಪರ್ಧಿಸಬೇಕು ಅಂತಾ ಕಾನೂನು ಮಾಡಲಿ. ಎಷ್ಟು ಜನ ಎಷ್ಟು ಕಡೆಯಿಂದ ವಲಸೆ ಬಂದು ಸ್ಪರ್ಧಿಸಿಲ್ಲ. ಸಿಎಂ ಬಾದಾಮಿಯಲ್ಲಿ ಸ್ಪರ್ಧಿಸಿದ್ದರಲ್ಲಾ, ಹಾಗಾದರೆ ಅವರು ಬಾದಾಮಿಯವರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ ಮಾಡಿದ್ರೆ ಉಪವಾಸ ಸತ್ಯಾಗ್ರಹ: ಡಿಕೆಶಿಗೆ ಕುಮಾರಸ್ವಾಮಿ ಖಡಕ್ ಎಚ್ಚರಿಕೆ

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರು ರಾಮನಗರ ಬೆಳೆಯಲಿ ಅಂತಾ ಜಿಲ್ಲೆ ಮಾಡಿದ್ದರು. ಈ ವಿಚಾರದಲ್ಲಿ ಹೆಚ್‌.ಡಿ.ಕುಮಾರಸ್ವಾಮಿರವರ ಬೆಂಬಲಕ್ಕೆ ನಾವಿದ್ದೇವೆ. ರಾಮನಗರ ಬೆಂಗಳೂರಿಗೆ ಸೇರಿಸಿದರೆ ಯಾವ ರೀತಿ ಮಾನ್ಯತೆ ಸಿಗುತ್ತೆ? ಹೆಚ್‌ಡಿಕೆ ಹೋರಾಟದ ತೀರ್ಮಾನ ಕೈಗೊಂಡರೆ ಅವರ ಪರ ನಿಲ್ಲುತ್ತೇನೆ. ಒಬ್ಬರ ಅನುಕೂಲಕ್ಕಾಗಿ ತೀರ್ಮಾನಿಸಿದರೆ ಖಂಡಿತಾ ವಿರೋಧಿಸುತ್ತೇವೆ. ಸಾರ್ವಜನಿಕರಿಗೆ ಅನುಕೂಲ ಆಗುತ್ತೋ, ಇಲ್ಲವೋ ಗೊತ್ತಿಲ್ಲ ಆದರೆ ಯಾರಿಗೆ ಅನುಕೂಲ ಆಗುತ್ತೆ ಅಂತಾ ಮಾಧ್ಯಮದವರಿಗೆ ಗೊತ್ತಿದೆ ಎಂದರು.

ಕಾಂಗ್ರೆಸ್‌ನಲ್ಲಿ 2 ಬಣ

ತಾನೇ ತಾನಾಗಿ ಎಲ್ಲಾ, ಏನು ಅಂಥ ಆಚೆ ಬರುತ್ತೆ. ಹೆಚ್‌.ಡಿ.ಕುಮಾರಸ್ವಾಮಿಗೆ ಜಿಲ್ಲೆ ಉಳಿಸಿಕೊಳ್ಳಬೇಕೆಂಬ ಬಹಳ ಮನಸ್ಸಿದೆ. ಹೆಚ್‌.ಡಿ.ಕುಮಾರಸ್ವಾಮಿಗೆ ಆ ಜಿಲ್ಲೆಯ ಮೇಲೆ ಪ್ರೀತಿ, ಅಭಿಮಾನ ಇದೆ. ನಮ್ಮ ಕುಟುಂಬಕ್ಕೆ ಆ ಜಿಲ್ಲೆಯ ಜನ ಆಶೀರ್ವದಿಸಿ ಅಧಿಕಾರ ಕೊಟ್ಟಿದ್ದಾರೆ. ಯಾವುದೇ ಸ್ವಾರ್ಥ ಇಲ್ಲದೆ ರಾಮನಗರ ಜಿಲ್ಲೆಗೆ ನಾವು ಸೇವೆ ಮಾಡುತ್ತೇವೆ. ಜಿಲ್ಲೆ ವಿಚಾರದಲ್ಲಿ ನನಗೇನೂ ಗೊತ್ತಿಲ್ಲ ‌ಡಿಸಿಎಂ ಕೇಳಿ ಅಂತಾ ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಕಾಂಗ್ರೆಸ್‌ನಲ್ಲಿ 2 ಬಣ ಇರುವುದರಿಂದ ಮೊದಲು ತೀರ್ಮಾನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.

ಒಬ್ಬರ ಹೆಸರ, ಸಾಧನೆ ಮೇಲಾಗಲಿ ಕಾನೂನು ಬದಲಾಗಲ್ಲ

ವನ್ಯಜೀವಿ ಕಾಯ್ದೆ ಯಾರೂ ಉಲ್ಲಂಘನೆ ಮಾಡಬಾರದು. ಯಾರೇ ತಪ್ಪು ಮಾಡಿದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ. ಕೆಲವರನ್ನು ಟಾರ್ಗೆಟ್ ಮಾಡ್ತಿದ್ದಾರೆ, ಕೆಲವರನ್ನು ಟಾರ್ಗೆಟ್ ಮಾಡ್ತಿಲ್ಲ. ಇಂತಹ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆ ರೀತಿ ಇರಬಾರದು, ಎಲ್ಲರಿಗೂ ಕಾನೂನು ಒಂದೇ. ಒಬ್ಬರ ಹೆಸರ ಮೇಲಾಗಲಿ, ಸಾಧನೆ ಮೇಲಾಗಲಿ ಕಾನೂನು ಬದಲಾಗಲ್ಲ. ಕಾನೂನು ಉಲ್ಲಂಘಿಸಿದ್ರೆ, ತಪ್ಪು ಸಾಬೀತಾದರೆ ನನಗೂ ಶಿಕ್ಷೆ ಕೊಡಬೇಕು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:12 pm, Thu, 26 October 23

‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ