AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hasanamba Darshana 2023: ಹಾಸನಾಂಬೆ ದರ್ಶನಕ್ಕೆ ಕೌಂಟ್ ಡೌನ್-14 ದಿನ, ದಿನದ 24 ಗಂಟೆಯೂ ದರ್ಶನ, ಶಕ್ತಿ ಯೋಜನೆ ಎಫೆಕ್ಟ್​​ ಮಹಿಳೆಯರ ಸಂಖ್ಯೆ ಹೆಚ್ಚಳ ಸಾಧ್ಯತೆ

Hasanamba temple opening dates for 2023: ಈ ವರ್ಷ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ, ದೇಗುಲದ ಗರ್ಭಗುಡಿಯೊಳಗೆ ಯಾರಿಗೂ ಹೆಚ್ಚಿನ ಸಮಯ ಪೂಜೆ, ವಿಶೇಷ ಅರ್ಚನೆಗೆ ಅವಕಾಶ ಇಲ್ಲ, ಮೊದಲ ದಿನ ಆದಿ ಚುಂಚನಗಿರಿ ಪೀಠಾದ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಜಿಯವರ ಸಾನ್ನಿಧ್ಯದಲ್ಲಿ ದೇಗುಲದ ಬಾಗಿಲು ತೆರೆಯಲಿದ್ದು ಮೊದಲ ದಿನ ನೈವೇದ್ಯ ಪೂಜೆ ಬಳಿಕ ಮರುದಿನ ಬೆಳಿಗ್ಗೆಯಿಂದಲೇ ಹಾಸನಾಂಬೆ ದರ್ಶನಕ್ಕೆ ಅವಕಾಶ ಸಿಗಲಿದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಸಿ ತಿಳಿಸಿದ್ದಾರೆ.

Hasanamba Darshana 2023: ಹಾಸನಾಂಬೆ ದರ್ಶನಕ್ಕೆ ಕೌಂಟ್ ಡೌನ್-14 ದಿನ, ದಿನದ 24 ಗಂಟೆಯೂ ದರ್ಶನ, ಶಕ್ತಿ ಯೋಜನೆ ಎಫೆಕ್ಟ್​​ ಮಹಿಳೆಯರ ಸಂಖ್ಯೆ ಹೆಚ್ಚಳ ಸಾಧ್ಯತೆ
ಐತಿಹಾಸಿಕ ಶ್ರದ್ಧಾಭಕ್ತಿಯ ಹಾಸನಾಂಬೆ ದರ್ಶನಕ್ಕೆ ಕೌಂಟ್ ಡೌನ್ ಶುರು
ಮಂಜುನಾಥ ಕೆಬಿ
| Updated By: ಸಾಧು ಶ್ರೀನಾಥ್​|

Updated on:Oct 26, 2023 | 10:07 AM

Share

Hasanamba Darshana 2023: ನಾಡಿನ ಶಕ್ತಿದೇವತೆ, ಹಾಸನದ ಅಧಿದೇವತೆ, ಬೇಡಿದ ವರವ ಕರುಣಿಸೋ, ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸೋ (Spiritual) ಹಾಸನಾಂಬೆ ದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ. ನವೆಂಬರ್ 2ರಂದು ಹಾಸನಾಂಬೆ ದೇಗುಲದ ಬಾಗಿಲು ಓಪನ್ ಆಗಲಿದ್ದು, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು (Devotees) ಆಗಮಿಸೊ ಸಾಧ್ಯತೆ ಹಿನ್ನೆಲೆಯಲ್ಲಿ ಈಗಿನಿಂದಲೆ ಸಕಲ ಸಿದ್ದತೆಗಳು ಶುರುವಾಗಿವೆ. ಈ ವರ್ಷ ಒಟ್ಟು 14 ದಿನ ದೇಗುಲದ ಬಾಗಿಲು ತೆರೆದಿರಲಿದ್ದು ಮೊದಲ ಹಾಗೂ ಕೊನೆಯ ದಿನ ಹೊರತು ಪಡಿಸಿ ಉಳಿದ ಎಲ್ಲಾ ದಿನಗಳಲ್ಲೂ ದಿನದ 24 ಗಂಟೆಯೂ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡೋ ಶಕ್ತಿದೇವತೆ ದರ್ಶನ ಮಾಡಲು ಭಕ್ತರು ಕೂಡ ಕಾತರರಾಗಿ ಕಾಯುತ್ತಿದ್ದು ಸಕಲ ರೀತಿಯ ಸಿದ್ದತೆ ಶುರುವಾಗಿದೆ.

ಹಾಸನಾಂಬೆ ದರ್ಶಬಕ್ಕೆ ಕೌಂಟ್ ಡೌನ್ ಶುರು, ಈ ವರ್ಷ ಒಟ್ಟು 14 ದಿನ ಬಾಗಿಲು ಓಪನ್ 12 ದಿನ 24 ಗಂಟೆಯೂ ಸಿಗಲಿದೆ ದೇವಿ ದರ್ಶನ. ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸೋ ಸಾದ್ಯತೆ, ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಆರಂಭ.. ಹೌದು ನಾಡಿನ ಶಕ್ತಿ ದೇವತೆ ಹಾಸನದ ಅಧಿ ದೇವತೆ ಹಾಸನಾಂಭೆ ದರ್ಶನ ನವೆಂಬರ್ 2ರಿಂದ ಆರಂಭವಾಗಲಿದ್ದು ನವೆಂಬರ್ 15ಕ್ಕೆ ಕೊನೆಯಾಗಲಿದೆ. ಒಟ್ಟು 14 ದಿನ ದೇಗುಲದ  ಬಾಗಿಲು ತೆರೆದಿರಲಿದ್ದು ಮೊದಲ ಹಾಗು ಕೊನೆಯ ದಿನ ಹೊರತು ಪಡಿಸಿ ಉಳಿದ 12 ದಿನಗಳು ಕೂಡ ದಿನದ 24 ಗಂಟೆಯೂ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ತಯಾರಾಗಿದೆ.

ಈಗಿನಿಂದಲೇ ತಯಾರಿ ಶುರುಮಾಡಿರೋ ಜಿಲ್ಲಾಡಳಿತ ಇಂದು ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ಸ್ವರೂಪ್ ನೇತೃತ್ವದಲ್ಲಿ ತಯಾರಿ ಪರಿಶೀಲನೆ ನಡಸಿದ ಅಧಿಕಾರಿಗಳ ತಂಡ, ಈ ವರ್ಷ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ, ದೇಗುಲದ ಗರ್ಭಗುಡಿಯೊಳಗೆ ಯಾರಿಗೂ ಹೆಚ್ಚಿನ ಸಮಯ ಪೂಜೆ, ವಿಶೇಷ ಅರ್ಚನೆಗೆ ಅವಕಾಶ ಇಲ್ಲ, ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಬಂದು ದೇವಿ ದರ್ಶನಕ್ಕೆ ಆಗಮಿಸೋ ಭಕ್ತರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದ್ದು ಮೊದಲ ದಿನ ಆದಿ ಚುಂಚನಗಿರಿ ಪೀಠಾದ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಜಿಯವರ ಸಾನ್ನಿದ್ಯದಲ್ಲಿ ದೇಗುಲದ ಬಾಗಿಲು ತೆರೆಯಲಿದ್ದು ಮೊದಲ ದಿನ ನೈವೇದ್ಯ ಪೂಜೆ ಬಳಿಕ ಮರುದಿನ ಬೆಳಿಗ್ಗೆಯಿಂದಲೇ ಹಾಸನಾಂಬೆ ದರ್ಶನಕ್ಕೆ ಅವಕಾಶ ಸಿಗಲಿದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಸಿ ತಿಳಿಸಿದ್ದಾರೆ.

ನಾಡಿನ ಶಕ್ತಿದೇವತೆಗಳಲ್ಲಿ ಒಬ್ಬಳಾಗಿರೊ ಹಾಸನಾಂಬೆ ದರ್ಶನ ಮಾಡಲು ಲಕ್ಷ ಲಕ್ಷ ಭಕ್ತರು ಕಾತುರರಾಗಿ ಕಾಯುತ್ತಾರೆ, ದೇವರ ಮುಡಿಗಿಟ್ಟ ಹೂ ಬಾಡೋದಿಲ್ಲ, ಬಾಗಿಲು ಮುಚ್ಚೋದಿನ ಹಚ್ಚಿಟ್ಟ ದೀಪ ಆರೋದಿಲ್ಲ ಎನ್ನೋ ನಂಬಿಕೆಯಿಂದಲೇ ಹಾಸನಾಂಬೆ ದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರ್ತಾರೆ, ಆ ಆರದ ಜ್ಯೋತಿಯನ್ನ ಕಣ್ತುಂಬಿಕೊಳ್ಳೋಕೆ, ತಮ್ಮ ಕಷ್ಟ ಕಾರ್ಪಣ್ಯ ನಿವಾರಿಸು ತಾಯೆ ಎಂದು ನಮಿಸೋಕೆ ಭಕ್ತರು ಹಾಸನದತ್ತ ಲಗ್ಗೆ ಇಡ್ತಾರೆ. ಅದ್ರಲ್ಲೂ ಈ ವರ್ಷ ಸರ್ಕಾರವೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡೋ ಶಕ್ತಿ ಯೋಜನೆ ಜಾರಿ ಮಾಡಿದ್ದು ನಾಡಿನ ಉದ್ದಗಲಕ್ಕೂ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಹಾಗಾಗಿಯೇ 12 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ದೇವಿ ದರ್ಶನಕ್ಕೆ ಆಗಮಿಸೋ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ, ಇಂದು ಡಿಸಿ ಕಛೇರಿಯಲ್ಲಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಆಗಿರೋ ತಯಾರಿಗಳ ಬಗ್ಗೆ ಸಭೆ ನಡೆಸಿದ ಶಾಸಕರು ಹಾಗು ಜಿಲ್ಲಾಧಿಕಾರಿಯವರು ಸೂಕ್ತ ವ್ಯವಸ್ಥೆಗಳನ್ನ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ, ಈ ವರ್ಷ ಕೂಡ ವಿಶೇಷ ದರ್ಶನಕ್ಕೆ 1000 ಹಾಗು 300 ರೂ ಗಳ ಪಾಸ್ ನಿಗದಿ ಮಾಡಲಾಗಿದ್ದು ಈ ಪಾಸ್ ಗಳ ದುರುಪಯೋಗ ತಡೆಯಲು ಕ್ಯೂ ಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ, ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆ ನೋಡಲು ಸಹಜವಾಗಿಯೇ ಎಲ್ಲರಿಗೂ ಕುತೂಹಲ ಇರುತ್ತೆ. ಹಾಗಾಗಿಯೇ ಎಲ್ಲರಿಗೂ ದೇವಿ ದರ್ಶಣಕ್ಕೆ ಬೇಕಾದ ವ್ಯವಸ್ಥೆ ಆಗಲಿ ಎಂದು ಶಾಸಕ ಎಚ್.ಪಿ. ಸ್ವರೂಪ್ ಸೂಚನೆ ನೀಡಿದ್ದಾರೆ.

Also Read: Hasanamba 2023: ಮುಂದಿನ ವರ್ಷಕ್ಕೆ ಹಾಸನಾಂಬೆ ದರ್ಶನ ದಿನಾಂಕ ನಿಗದಿಯಾಯ್ತು

ಒಟ್ನಲ್ಲಿ ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆ ಕಣ್ತುಂಬಿಕೊಳ್ಳಲು ಭಕ್ತರು ಕಾತುರವಾಗಿ ಕಾಯುತ್ತಿದ್ದಾರೆ, ಈ ವರ್ಷ 14 ದಿನಗಳು ದೇಗುಲದ ಬಾಗಿಲು ತೆರೆದಿರಲಿದ್ದು ಅಧಿದೇವತೆ ದರ್ಶನಕ್ಕಾಗಿ ಲಕ್ಷ ಲಕ್ಷ ಭಕ್ತರ ಆಗಮನದ ನಿರೀಕ್ಷೆಯೊಂದಿಗೆ ಜಿಲ್ಲಾಡಳಿತ ತಯಾರಿ ಆರಂಭಿಸಿದ್ದು ದಸರೆ ಮುಗಿದ ಬಳಿಕ ನಡೆಯೋ ಹಾಸನಾಂಬೆ ಉತ್ಸವ ಈ ಬಾರಿ ಮತ್ತಷ್ಟು ರಂಗೇರಲಿದ್ದು ವರ್ಷದ ಬಳಿಕ ದರ್ಶನ ನೀಡಲಿರೋ ದೇವಿಯನ್ನ ಕಾಣಲು ಭಕ್ತರು ಕಾತರರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:06 am, Thu, 26 October 23

‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್